Saturday, October 20, 2012

ಜೆಡಿಎಸ್ ಬಲಪಡಿಸಲು ರಂಗನಗೌಡ ಕರೆ


ತೇರದಾಳದ ಶ್ರೀಗುರುದೇವ ಬ್ರಹ್ಮಾನಂದ ಶಿವಯೋಗಿಗಳ ಆಶ್ರಮದಲ್ಲಿ ಕೆಎಂಎಫ್  ನಿರ್ದೇಶಕರು  ರಂಗನಗೌಡ ಪಾಟೀಲ ಮಾತನಾಡಿದರು.
Add caption


ಬಿ ಜಿ ಜಮಖಂಡಿ ಮಾತನಾಡಿದರು.


ತೇರದಾಳ : ಜೆಡಿಎಸ್ ರಾಜಕಾರಣಿಗಳಿಗೆ ತರಬೇತಿ ನೀಡುವ ಕಾರ್ಖಾನೆಯಾಗಿದ್ದು, ಜನಪರ, ಜನಹಿತ ಕಾರ್ಯಗಳ ಮೂಲಕ ಜನರ ವಿಶ್ವಾಸಕ್ಕೆ ಪಾತ್ರವಾಗಿದೆ. ಯುವಕರೇ ಈ ಪಕ್ಷದ ಬೆನ್ನೆಲುಬು. ಪಕ್ಷ ಸಂಘಟನೆಗೆ, ಬಲವರ್ಧನೆಗೆ ದುಡಿಯಬೇಕೆಂದು ಕೆಎಮ್ಎಫ್ ನಿರ್ದೇಶಕರು, ಜೆಡಿಎಸ್ ಧುರೀಣ ರಂಗನಗೌಡ ಪಾಟೀಲ ಕರೆ ನೀಡಿದರು.
ಇಲ್ಲಿಯ ಗುರುದೇವ ಬ್ರಹ್ಮಾನಂದ ಶಿವಯೋಗಿಗಳವರ ಆಶ್ರಮದಲ್ಲಿ ಮತಕ್ಷೇತ್ರದ ಜೆಡಿಎಸ್ ಯುವ ಘಟಕದ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು ಯುವಕರು ಸ್ವ ಇಚ್ಛೆಯಿಂದ ಜೆಡಿಎಸ್ ಸೇರ್ಪಡೆಗೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ, ಕೇಂದ್ರದಲ್ಲಿ ಯುಪಿಎ ಸರಕಾರವಿದ್ದರೂ ಜೆಡಿಎಸ್ ಕಾರ್ಯಕರ್ತರು ಜನರ ಹಿತಕ್ಕಾಗಿ ದುಡಿಯುತ್ತಿದ್ದಾರೆಂದು ಹೇಳಿದರು.
ಮಾಜಿ ಶಾಸಕ ಬಿ.ಜಿ.ಜಮಖಂಡಿ ಮಾತನಾಡಿ ಮಾಜಿಮುಖ್ಯಮಂತ್ರಿಯವರು 35ಅಂಶಗಳ ಪ್ರಣಾಳಿಕೆ ಬಿಡುಗಡೆ ಮಾಡುತ್ತಿದ್ದು, ಪಕ್ಷ ಅಧಿಕಾರ ಬಂದ 90ದಿನಗಳಲ್ಲಿ ಪ್ರಣಾಳಿಕೆಯಲ್ಲಿರುವ ಎಲ್ಲ ಅಂಶಗಳನ್ನು ಜಾರಿ ಮಾಡಲಿದ್ದಾರೆಂದರು.
ಜೆಡಿಎಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ಶಿವಪ್ರಸಾದ ಗದ್ದಿ, ಅಣ್ಣಪ್ಪ ಸುರಂಗೆ, ಸುನೀಲ ಭೋಸಲೆ, ಸುರೇಶ ಹಾದಿಮನಿ, ನಿಂಗಪ್ಪ ತೇಜನ್ನವರ, ನಿಂಗಪ್ಪ ಮಾಲಗಾಂವಿ, ಸುಲೇಮಾನ ಮುಕ್ಕೇರಿ, ಪರಮೇಶ ಹಡಗಲಿ, ಮಲ್ಲು ಹೂಗಾರ, ಮಲ್ಲಪ್ಪ ಮಂಟೂರ ಇನ್ನಿತರ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ಮತಕ್ಷೇತ್ರದ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಬಸವರಾಜ ಕಲಬುರ್ಗಿ ನಿರೂಪಿಸಿ, ವಂದಿಸಿದರು.

No comments:

Post a Comment

Test

Test 1