Wednesday, September 29, 2010

ತೇರದಾಳದಲ್ಲಿ ಮಾರಾಮಾರಿ; ಹಲವರಿಗೆ ಗಾಯ

Terdal 28-09-2010

ತೇರದಾಳದ ಕಲ್ಲಟ್ಟಿಯಲ್ಲಿ ಮಂಗಳವಾರ ಮಧ್ಯಾನ್ಹ ಎರಡು ಗುಂಪುಗಳ ಮಧ್ಯ ನಡೆದ ಮಾರಾಮಾರಿ ನಂತರ ಬಿಕೋ ಎನ್ನುವ ವಾತಾವರಣ ನಿರ್ಮಾಣಗೊಂಡಿತ್ತು.
ಇಲ್ಲಿಯ ಪುರಸಭೆ ವಾರ್ಡ್ ನ್ಂ.೫ಕ್ಕೆ ಸಂಬಂದಿಸಿದಂತೆ ರವಿವಾರ ಉಪಚುನಾವಣೆ ನಡೆದಿತ್ತು.ಇಂದು ಬೆಳಿಗ್ಗೆ ಫಲಿತಾಂಶ ಪ್ರಕಟವಾಗುತ್ತಿದ್ದ್ಂತೆ ಮುರಗೆಪ್ಪ ತುಳಜಪ್ಪ ಅಥಣಿ ವಿಜಯಿ ಅಭ್ಯರ್ಥಿಯ ಹಿರಿಯರು.ಅಭಿಮಾನಿಗಳು ಪಟ್ಟಣ್ದಲ್ಲಿ ವಿಜಯೋತ್ಸವದಲ್ಲಿ ಪಟಾಕಿ ಸಿಡಿಸಿ ಗುಲಾಲು ಎರಚಿ, ಜೈಕಾರ ಘೋಅಣೆಗಳನ್ನು ಕೂಗಿ ಸಂಭ್ರಮಿಸಿದರು.ಆದರೆ ಇದಾದ ನಂತರ ಮದ್ಯಾನ್ಹ ೩-೩೦ರ ಸುಮಾರಿಗೆ ಕಲ್ಲಟ್ಟಿಯಲ್ಲಿ ಕೆಲವೆಡೆ ಪಟಾಕಿ ಸಿಡಿಸಿದ ಸಂದರ್ಭದಲ್ಲಿ ಮನೆಯೊಳಗೆ ಪಟಾಕಿ ಕಿಡಿ ಸಿಡಿಸಿದಾಗ ಎರೆಡು ಗುಂಪುಗಳ ಮಧ್ಯೆ ಮಾತಿನ ಚಕಮಕಿ ಶುರುವಾಗಿ ನಂತರ ಮಾರಾಮಾರಿಯಲ್ಲಿ ಹಲವರಿಗೆ ಗಾಯಗಳಾಗಿದ್ದು, ಕಲ್ಲಟ್ಟಿಯಲ್ಲಿ ಇದೀಗ ಬಿಕೋ ಎನ್ನುವ ವಾತಾವರಣ ನಿರ್ಮಾಣಗೊಂಡಿದೆ.
ಘಟನಾ ಸ್ಥಳಕ್ಕೆ ಜಮಖಂಡಿ ಡಿವೈಎಸ್ಪಿ ರವಿನಾರಾಯಣ, ಬನಹಟ್ಟಿ ಸಿಪಿಐ ಗೋಪಲ ಜೋಗಿನ್ ಆಗಮಿಸಿ ಪರಿಶೀಲಿಸಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಾವುದೇ ತೀವ್ರತರವಾದ ಹಾನಿ ಸಂಭವಿಸದಿರುವಂತೆ ಕ್ರಮಕೈಗೊಳ್ಳಲಾಗಿದ್ದು, ಪರಿಸ್ಥಿತಿ ಶಾಂತವಾಗಿದೆಯೆಂದರು.
ಘಟನೆ ವಿವರ: ಇಂದು ೫ನೇ ವಾರ್ಡಿನ ಉಪಚುನಾವನೆ ಫಲಿತಾಂಶ ಹೊರಬಿದ್ದ ಬಳೀಕ ಪಟ್ಟಣದ ೫ನೇ ವಾರ್ಡಿನಲ್ಲಿ ವಿಜಯೋತ್ಸವ ನಡೆದು ಮದ್ಯಾನ್ಹ ಕಲ್ಲಟ್ಟಿಯಲ್ಲಿ ಜನರೆಲ್ಲ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಒಮ್ಮೆಲೆ ಗಲಾಟೆ ನಡೆಯುವ ಶಬ್ದ ಕೇಳಿ ಹೊರಬಂದು ಜನ ನೋಡುತ್ತಿದ್ದಂತೆ ಎರಡು ಗುಂಪುಗಳ ಮಧ್ಯೆ ಲಾಠಿ, ಬರ್ಚಿಯಿಂದ ಹೊಡೆದಾಟ ನೋಡಿ ಬಾಗಿಲುಗಳನ್ನು ಮುಚ್ಚಿಕೊಂಡರೆಂದು ಪ್ರತ್ಯಕದರ್ಶಿಗಳು ತಿಳಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಠಾಣಾಧಿಕಾರಿ ಆರ್.ಆರ್.ಪಾಟೀಲ ಸಿಬ್ಬಂದಿಯೊಂದಿಗೆ ಆಗಮಿಸಿ ಗಲಾಟೆಯನ್ನು ಶಮನಗೊಳಿಸಲು ಹರಸಾಹಸ ಪಡಬೇಕಾಯಿತಂತೆ.ಘಟನೆಗೆ ಕಾರಣವನ್ನು ಕೇಳಿದಾಗ ಪಿಎಸ್‌ಐ ಜನರನ್ನು ಹತೋಟಿಗೆ ತರುವಲ್ಲಿ ಪೋಲಿಸರು ನಿರತರಾಗಿದ್ದರಿಂದ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲವೆಂದರು.ಗಾಯಗೊಂಡವರನ್ನು ಆಸ್ಪತ್ರೆಗೆ ೧೦೮ವಹನದಲ್ಲಿ ಸಾಗಿಸಲಾಯಿತೆಂದು ಹೇಳಲಾಗಿದೆ.
ಪುರಸಭೆ ಮಾಜಿ ಅಧ್ಯಕ್ಶ ಬಸವರಾಜ ಬಾಳಿಕಾಯಿ, ಗಂಗಪ್ಪ ಬಾಗಿ. ಪುರಸಭೆ ಸದಸ್ಯ ಮುರುಗೇಶ ಮಿರ್ಜಿ ಸೇರಿದಂತೆ ಹಲವರಿಗೆ ಗಾಯವಾಗಿರುವ ಬಗ್ಗೆ ತಿಳಿದುಬಂದಿದೆ. ಕಲ್ಲಟ್ಟಿಯಲ್ಲಿ ಪೋಲಿಸ್ನ್ವರು ಬೀಡುಬಿಟ್ಟಿದ್ದು ಸಧ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ.
ಆರೋಪ:ಮಾರಾಮಾರಿ ಘಟನೆ ವೀಕ್ಶಣೆಗೆಂದು ಡಾ,ಅಂಬೇಡ್ಕರ್ ಸರ್ಕಲ್ ನಲ್ಲಿಯ ದಲಿತ ಯುವಕರು ಕಲ್ಲಟ್ಟಿಗೆ ಹೋದ ಸಂದರ್ಭದಲ್ಲಿ ದಲಿತ ಹುಡುಗರ ಮೇಲೆ ಕೆಲವರು ವಿನಾಕಾರಣ ಹಲ್ಲೆ ಮಾಡಿದ್ದಾರೆಂದು ಪುರಸಭೆ ಸದಸ್ಯ ಯೋಗೇಶ ರೋಡಕರ ಆರೋಪಿಸಿದ್ದಾರೆ.ಶ್
 

ಅಥಣಿ ಮುರಗೆಪ್ಪ ಗೆಲುವು

Terdal: 28-09-2010 

 
ತೇರದಾಳದ ವಾರ್ಡ ನಂ. ೫ರ ಉಪಚುನಾವಣೆಯಲ್ಲಿ ವಿಜಯಿ ಅಭ್ಯರ್ಥಿ ಮುರಗೆಪ್ಪ ತುಳಜಪ್ಪ ಅಥಣಿ ಬೆಂಬಲಿಗರು ವಿಜಯೋತ್ಸವ ಆಚರಿಸಿದರು. ನಿಂಗಪ್ಪ ಮಾಲಗಾಂವಿ. ನಿದ್ದು ಅಮ್ಮಣಗಿ, ರಾಮಣ್ಣ ಹಿಡಕಲ್ಲ. ಸದಾಶಿವ ಹೊಸಮನಿ ಇನ್ನಿತರರು ಚಿತ್ರದಲ್ಲಿದ್ದಾರೆ.

Sunday, September 26, 2010

ಶಾಂತಿಯುತ ಮತದಾನ-ಶೇ 86.25 ರಷ್ಟು ಮತದಾನ

Terdal : 26-09-2010

     ಇಂದು ತೇರದಾಳದ ವಾರ್ಡ್ ನಂ.೫ರ ಉಪಚುನಾವಣೆಯ ಮತದಾನವು ಶ್ರೀ ಎಂ.ವಿ.ಪಿ. ಐಟಿಸಿಯಲ್ಲಿ ನಡೆಯಿತು. ಅತ್ಯಂತ ಬಿಗಿ ಭದ್ರತೆಯಲ್ಲಿ ನಡೆದ ಮತದಾನವು ಯಾವುದೇ ಅಹಿತಕರ ಘಟನೆ ನಡೆಯದೇ ಶಾಂತರೀತಿಯಿಂದ ಜರುಗಿತು. ಶೇ.೮೬.೨೫ ರಷ್ಟು ಮತದಾನವಾಗಿದೆ.

     ಫಲಿತಾಂಶವು ಮಂಗಳವಾರ ದಿ.೨೮-೦೯-೨೦೧೦ರಂದು ಪ್ರಕಟವಾಗಲಿದ್ದು ತೇರದಾಳದ ನಾಗರಿಕರಲ್ಲಿ ಕುತೂಹಲ ಕೆರಳಿಸಿದೆ.


ತೇರದಾಳದ ವಾರ್ಡ್ ನಂ. ೫ರಲ್ಲಿ ನಡೆದ ಉಪಚುನಾವನೆಯಲ್ಲಿ ಮತದಾನಕ್ಕಾಗಿ ಸಾಲಾಗಿ ನಿಂತ ಮತದಾರರು!


ಅಭ್ಯರ್ಥಿ ಶ್ರೀ ಮುರಗೆಪ್ಪ. ತುಳಜಪ್ಪ. ಅಥಣಿ. ಹಾಗೂ ಕಾರ್ಯಕರ್ತರು  
ಅಭ್ಯರ್ಥಿ ಶ್ರೀಮತಿ ರೂಪಾ. ಬ. ಬಾಳಿಕಾಯಿ. ಹಾಗೂ ಕಾರ್ಯಕರ್ತರು

Friday, September 24, 2010

ಆ.೫ರಂದು ಬೇಡಿಕೆ ದಿನಾಚರಣೆ-ನಿರ್ಧಾರ

ತೇರದಾಳ,21-09-2010

ಮುಂದಿನ ತಿಂಗಳು ಆಕ್ಟೋಬರ್ ೫ರಂದು ಅಂತರಾಷ್ತ್ರೀಉಅ ಶಿಕಕರ ದಿನಾಚರಣೆಯನ್ನು ಬೇಡಿಕೆ ದಿನವನ್ನಾಗಿ ಆಚರಿಸಲಾಗುವದೆಂದು ಪ್ರಾಥಮಿಕ ಶಾಲಾ ಶಿಕ್ಕರ ಸಂಘದ ಜಿಲ್ಲಾ ಅಧ್ಯಕ ಬಸವರಾಜ ಬಾಗೆನವರ.ಕಾರ್ಯದರ್ಶಿ ಎಚ್,ಪಿ,ಬಿರದಾರ ಹೇಳಿದರು.
ಸುದ್ದಿಗಾರರೂಂದಿಗೆ ಮಾತನಡಿದ ಅವರು ೫ನಾ ವಾತನ ಆಯೋಗದ ಶಿಫಾರಸ್ಸಿನ ಪ್ರಕಾರ ಪ್ರಾಥಮಿಕ ಶಾಲಾ ಶಿಕ್ಕರಿಗೆ ಪ್ರತ್ಯೇಕವಾದ ೬೮೦೦-೧೩೦೦೦ ವೇತನಶ್ತೇಣಿ ಸರ್ಕಾರ ಮಂಜೂರು ಮಾಡಿದ್ದು.೨೦೦೫ರಿಂದ ನೇಮಕವಾದ ಶಿಕ್ಕರಿಗೆ ಮಾತ್ರ ಇದು ದೊರೆಯಲಿದೆ.ಎಲ್ಲಾ ಶಿಕ್ಕರಿಗೆ ೨೦೦ರೂ.ಗಳ ವಿಶೇಷ ವೇತೆನವನ್ನು ಮೂಲವೇತನದಲ್ಲಿ ವಿಲೀನಗೊಳಿಸಬೇಕು.ಹೊರಜಿಲ್ಲೆಗಳಿಂದ ವರ್ಗವಗಿ ಬಂದ ಶಿಕ್ಕರಿಗೆ ೧೦.೧೫,೨೦ವರ್ಷದ ಆರ್ಥಿಕ ಸೌಲಭ್ಯ ನೀಡುವಂತೆ ಆದೇಶಿಸಬೇಕು.ಸಿಆರ್ಪಿ.ಬಿಆರ್ಪಿ ಹುದ್ದೆಗಳನ್ನು ಮೇಲ್ದರ್ಜೆಗೆ ಏರಿಸಬೇಕು.ಕೃಪಾಂಕ ಶಿಕ್ಕರ ಹಿಂದಿನ ಸೇವೆಯನ್ನು ಪುನ; ಪರಿಗಣಿಸಿ ಆರ್ಥಿಕ ಸೌಲಭ್ಯ ಇನ್ನಿತರ ಸೌಲಭ್ಯಗಳನ್ನು ನೀಡಬೇಕೆಂಬ ೧೦ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅಂದು ರಾಜ್ಯಾದ್ಯಂತ ಬೇಡಿಕೆ ದಿನವನ್ನಾಗಿ ಆಚರಿಸಲಾಗುವದೆಂದರು.

ಜಿಲ್ಲಾ ಘಟಕದ ಉಪಾಧ್ಯಕ್ ಸಿ.ಆರ್.ಕಳಾವಂತ. ಪಿ.ಎ.ಹುದ್ದಾರ.ಎ.ಪಿ. ಹತ್ತೆನ್ನವರ.ಬಿ,ಬಿ,ಸಂಗೋಂದಿ.ಜಿ,ಎಸ್.ಚಲವಾದಿ.ಆನಂದ ಕುಲಕರ್ಣಿ ಇನ್ನಿತರರು ಈ ಸಂದರ್ಭದಲ್ಲಿದ್ದರು.

Thursday, September 23, 2010

ಪುರಸಭೆ ವಾರ್ಡ ೫ ರಲ್ಲಿ ನೇರ ಸ್ಪರ್ದೆ

ತೇರದಾಳ-21-09-2010
     ಇಲ್ಲಿಯ ಪುರಸಭೆಯ ಮಾಜಿ ಅಧ್ಯಕ್ಷ ಬಸವರಾಜ ಬಾಳೀಕಾಯಿ ಸದಸ್ಯತ್ವ ಅನೂರ್ಜಿತಗೊಂಡ ಹಿನ್ನೆಲೆಯಲ್ಲಿ ಸ್ಥಳೀಯ ಪುರಸಭೆ ೫ನೇ ವಾರ್ಡಿಗೆ ಇದೇ ದಿ.೨೬ರಂದು ಚುನಾವಣೆ ಜರುಗಲಿದೆ. ಬಾಳೀಕಾಯಿಯವರಿಗೆ ಪಕ್ಷದ ಬಿ.ಫಾರ್ಮ ನೀಡಬೇಕೆಂದು ಬೆಂಬಲಿತಕಾರ್ಯಕರ್ತರ ಕೂಗಿಗೆ ಸ್ಪಂದಿಸಿದ ಬಿಜೆಪಿ ಜಿಲ್ಲಾ ವರಿಷ್ಠರ ಕ್ರಮದಿಂದ ಮತ್ತು ಕ್ರಿಮಿನಲ್ ಪ್ರಕರಣದ ವಿಚಾರಣೆ ನಡೆಯುತ್ತಿರುವುದರಿಂದ ಬಸವರಾಜ ಸಲ್ಲಿಸಿದ ನಾಮಪತ್ರ ತಿರಸ್ಕ್ರತಗೊಂಡಿತು.
      ಅಲ್ಲದೇ ಒಟ್ಟು ೧೦ಜನ ನಾಮಪತ್ರ ಸಲ್ಲಿಸಿದ್ದರು. ಹಿಂತೆಗೆದುಕೊಳ್ಳುವ ಕೊನೆಯ ದಿನ ೮ಜನ ನಾಮಪತ್ರವಾಪಸ್ಸು ಪಡೆದಾಗ ಕಣದಲ್ಲಿ ಇದೀಗ ರೂಪಾ ಬಸವರಾಜ ಬಾಳಿಕಾಯಿ ಮತ್ತು ಮುರಗೆಪ್ಪ ತುಳಜಪ್ಪ ಅಥಣಿ ಪಕ್ಷೇತರರಾಗಿ ಉಳಿದಿದ್ದಾರೆ. ರೂಪಾ ಅವರು ತಮ್ಮ ಪತಿಯ ನೋವು, ಅವಮಾನದ ವಿರುದ್ಧ ಚುನಾವಣಾ ಕಣದಲ್ಲಿ ನಿಂತು ಗೆಲುವಿಗಾಗಿ ನಿರಂತರ ಶ್ರಮಿಸುತ್ತಿದ್ದರೆನ್ನಲಾಗಿದೆ. ಇನ್ನೊಂದೆಡೆ ಈ ಹಿಂದಿನ ಚುನಾವಣೆಯಲ್ಲಿ ನಿಂತು ಸೋಲನ್ನಪ್ಪಿದ್ದ ಮುರಗೆಪ್ಪನವರು ಅನುಕಂಪದ ಅಲೆ ನನ್ನ ಮೇಲಿದೆಯೆಂದು ತಿಳಿದು ಗೆಲುವಿಗಾಗಿ ಹೋರಾಡುತ್ತಿದ್ದಾರೆನ್ನಲಾಗಿದೆ. ಇವರಿಬ್ಬರ ಮಧ್ಯ ಇದೀಗ ನೇರ ಸ್ಪರ್ಧೆ ಏರ್ಪಟ್ಟಿದೆ. ಗೆಲುವು ಯಾರಿಗೆ ದೊರೆಯುವದೆಂಬುದು ಜನರಿಗೆ ಕುತೂಹಲ ಮೂಡಿಸಿದೆ.
      ಪುರಸಭೆ ಆಡಳಿತ ಪಕ್ಷವಾದ ಬಿಜೆಪಿಯು ತನ್ನ ಅಭ್ಯರ್ಥಿಯನ್ನಾಗಿ ಮುರಗೆಪ್ಪನವರನ್ನು ಕಣಕ್ಕಿಳಿಸಲು ಬಿಜೆಪಿ ಒಂದು ಗುಂಪು ಬಯಸಿತ್ತಾದರೂ, ಕಾರ್ಯಕರ್ತರ ವಿರೋಧದಿಂದಾಗಿ ಸಾಧ್ಯವಾಗಲಿಲ್ಲ. ಆದರೆ, ಬಿಜೆಪಿಯಿಂದ ಯಾವುದೇ ಅಭ್ಯರ್ಥಿಗೆ ಬಿ.ಪಾರಂ ನೀಡಿಲ್ಲವಾಗಿದ್ದರೂ ಪಕ್ಷೇತರರಾಗಿ ಸ್ಪರ್ಧಿಸಿರುವ ಈ ಇಬ್ಬರಲ್ಲಿ ಯಾರೇ ಜಯಗಳಿಸಿದರೂ ಬಿಜೆಪಿಯನ್ನೇ ಪ್ರತಿನಿಧಿಸುವದು ಖಚಿತವೆನ್ನಲಾಗಿದೆ. ಆದರೂ ಮುಂದಿನದು ಹೇಗೆ ಎಂಬುದನ್ನು ಕಾದು ನೋಡಬೇಕಷ್ಟೇ!!

Wednesday, September 22, 2010

ಕರ್ಮ ನಿರ್ಮೂಲನೆಗೆ ಕಿಚಡಿ ಪ್ರಸಾದ-ಓಲೇಮಠಶ್ರೀ


ತೇರದಾಳ ಸಮೀಪದ ಜಂಗಮಕ್ಷೇತ್ರ ಚಿಮ್ಮಡ ಗ್ರಾಮದ ಶ್ರೀಪ್ರಭುದೇವರ ಕಿಚಡಿ ಜಾತ್ರೆಯ ವಿಶೇಷ ಸಮಾರಂಭದ ಸಾನಿಧ್ಯ ವಹಿಸಿ ಜಮಖಂಡಿ ಓಲೇಮಠದ ಡಾ.ಚನ್ನಬಸವ ಮಹಾಸ್ವಾಮಿಗಳು ಮತನಾಡಿದರು. ಹಂದಿಗುಂದ ಶ್ರೀ ಶಿವಾನಂದ ಶ್ರೀ.ಅಡವಯ್ಯ ಶಾಸ್ತ್ರೀಗಳು.ಬಿ.ಆರ್.ಆಜೂರೆ ಚಿತ್ರದಲ್ಲಿದ್ದಾರೆ.

ಅಲ್ಲಮಪ್ರಭು ಸದ್ಭಾವನಾ ಪ್ರಶಸ್ತಿ ಐವರಿಗೆ ಪ್ರದಾನ

ತೇರದಾಳ: 19-09-2010



ತೇರದಾಳದ ಶ್ರೀಅಲ್ಲಮಪ್ರಭು ಸದ್ಭಾವನಪ್ರಶಸ್ತಿ ಪುರಸ್ಕೃತರು: ಮಾತೋಶ್ರೀ ಅಕ್ಕಮಹಾದೇವಿ. ಎಮ್.ಜಿ.ದಾಸರ, ಕೃಷ್ಣಾ ಕೆ.ಎಮ್., ರೇಣುಕಾಬಾಯಿ ಮಾಲಾಪುರ, ಶೇಖರ ವೈ.ಕಾಖಂಡಕಿಯವರಿಗೆ ಶ್ರೀಅಲ್ಲಮಪ್ರಭು ಕಲ್ಯಾಣ ಮಂಟಪದಲ್ಲಿ ಪ್ರಶಸ್ತಿಯನ್ನು ಮಹಿಳಾ ಗುಡಿ ಕೈಗಾರಿಕೆ ವತಿಯಿಂದ ಪ್ರದಾನ ಮಾಡಲಾಯಿತು. ಐವರು ಚಿತ್ರದಲ್ಲಿದಾರೆ.

ಸಸಾಲಟ್ಟಿಯಲ್ಲಿ ನಲಿಕಲಿ ಕಾರ್ಯಾಗಾರ

ತೇರದಳ: 18-09-2010



ತೇರದಳ ಸಮೀಪದ ಸಸಾಲಟ್ಟಿ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮೀಣ ಮತ್ತು ನಗರ ಸಿಆರ್‌ಸಿ ವ್ಯಾಪ್ತಿಯಶಿಕ್ಷಕರಿಗಾಗಿ ಹಮ್ಮಿಕೊಂಡಿದ್ದ ನಲಿ-ಕಲಿ ಕಾರ್ಯಾಗಾರದಲ್ಲಿ ಸಿಆರ್.ಜೆ.ರಾಠೋಡ. ಶಿಕ್ಷಕ ಭಟ್, ಪ್ರಸನ್ ಪರಿಸರ ಅಧ್ಯಯನ, ಇಂಗ್ಲಿಷ ವಿಷಯದ ಮೇಲೆ ಮಾತನಾಡಿದರು.

Monday, September 20, 2010

ಪರಪ್ಪ ಪುಠಾಣಿಗೆ ಪ್ರಶಂಸಾ ಪತ್ರ ವಿತರಣೆ

ತೇರದಾಳ: ೧೯
ಚಿತ್ರ ವರದಿ: ಮ. ಕೃ. ಮೇಗಾಡಿ. ತೇರದಾಳ.

ತೇರದಾಳದ ಶ್ರೀಅಲ್ಲಮಪ್ರಭು ಕಲ್ಯಾಣ ಮಂಟಪದಲ್ಲಿ ಹಿರಿಯ ಬೈಲಾಟ ಕಲಾವಿದ ಪರಪ್ಪ ಪುಠಾಣಿಯವರನ್ನು ಶ್ರೀಅಲ್ಲಮಪ್ರಭು ಮಹಿಳಾ ಗುಡಿ ಕೈಗಾರಿಕೆ ವತಿಯಿಂದ ಸನ್ಮಾನಿಸಿ ಪ್ರಸಂಶಾಪತ್ರ ನೀಡಲಾಯಿತು. ಚಿಮ್ಮಡ ಶ್ರೀಪ್ರಭು ಸ್ವಾಮಿಗಳು. ಗದಗ ಕದಳಿವನಮಠದ ಮಾತೋಶ್ರೀ ಅಕ್ಕಮಹಾದೇವಿ, ಪರಯ್ಯ ತೆಳಗಿನಮನಿ ಚಿತ್ರದಲ್ಲಿದ್ದಾರೆ.

ಕಾನುನು ತಿಳುವಳಿಕೆಯಿಂದ ನೆಮ್ಮದಿ ಜೀವನ

ತೇರದಾಳ: 18-09-2010


ತೇರದಾಳದ ಶ್ರಿಪ್ರಭುಲಿಂಗ ಪದವಿಪೂರ್ವ ಮಹವಿದ್ಯಾಲಯದಲ್ಲಿ ಬನಹಟ್ಟಿಯ ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದವರು ಹಮ್ಮಿಕೊಂಡಿದ್ದ ಕಾನೂರು ಅರಿವು ನೆರವು ಕರ್ಯಕ್ರಮವನ್ನು ಸಿವಿಲ್ ನ್ಯಾಯಾಧೀಶ ಈಶ್ವರ ಉದ್ಘಾಟಿಸಿದರು. ಇಮ್.ಇಮ್.ಯಾದವಾಡ, ಪ್ರೊ.ದೊಡ್ಡಣ್ಣ ಬಜಂತ್ರಿ, ಎಸ್.ಕೆ.ಕೋರಿ, ಕೆ.ಎಸ್.ಅಕ್ಕೆನ್ನವರ ಚಿತ್ರದಲ್ಲಿದ್ದಾರೆ.

Sunday, September 19, 2010

ವಿಶ್ವೇಶ್ವರಯ್ಯನವರ ಆದರ್ಶ ಅಳವಡಿಸಿಕೊಳ್ಳಲು ಕರೆ

ತೇರದಾಳ: 17-09-2010



ತೇರದಾಳದ ಎಮ್.ವಿ.ಪಿ. ಐಟಿಸಿಯಲ್ಲಿ ಸರ್.ಎಮ್. ವಿಶ್ವೇಶ್ವರಯ್ಯನವರ ೧೫೦ನೇ ಜನ್ಮದಿನವನ್ನು ಸರಕಾರಿ ಡಿಪ್ಲೊಮಾ ಕಾಲೇಜಿನ ಪ್ರಾಚರ್ಯ ಎಸ್.ಎಸ್.ದೇಸಾಯಿ ಉದ್ಘಾಟಿಸಿದರು. ಮಗಯ್ಯ ತೆಳಗಿನಮನಿ. ಎಸ್.ಸಿ.ಸಲಬನ್ನವರ, ಜಿ.ಕೆ.ಪಟ್ಟಣಶೆಟ್ಟಿ ಚಿತ್ರದಲ್ಲಿದ್ದಾರೆ.



ಶ್ರೀ ಗಣೇಶ ವಿಸರ್ಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜನಸಾಗರ.


ಧನ್ಯವಾದಗಳು
Thank You

ದಯಮಾಡಿ ನಿಮ್ಮ ಅನಿಸಿಕೆಗಳನ್ನು ಕಮೆಂಟ್ಸ್ ವಿಭಾಗದಲ್ಲಿ ನಮೂದಿಸಿ
Please leave your comments.

Comments on different posts by blog friends.

Thank all of you for your comments. Please keep writing.
Your comments inspire us to work more on this blog.


Thursday, September 16, 2010

ತೇರದಾಳದ ವಿವಿಧ ಗಜಾನನ ಮಿತ್ರ ಮಂಡಳಿಯವರು ಪ್ರತಿಷ್ಠಾಪಿಸಿದ ಗಣೇಶನ ದರ್ಶನ ಮಾಡಬನ್ನಿ.


ಶ್ರೀ ಪ್ರಭು ಗಜಾನನ ಮಿತ್ರ ಮಂಡಳಿ, ಸಿದ್ಧೇಶ್ವರ ಗಲ್ಲಿ, ತೇರದಾಳ.



 ಗಜಾನನ ಮಿತ್ರ ಮಂಡಳಿ, ಚಾವಡಿ ಸರ್ಕಲ್, ತೇರದಾಳ.


 ಗಜಾನನ ಮಿತ್ರ ಮಂಡಳಿ, ಕಿಲ್ಲಾ ಭಾಗ, ತೇರದಾಳ.
ಮೂಲ ಗಣಪತಿ ದೇವಸ್ಥಾನ ಸೇವಾಸಮಿತಿ, ಕೆರೆ ಹತ್ತಿರ, ತೇರದಾಳ.

ಸಿದ್ಧಿವಿನಾಯಕ ಉತ್ಸವ ಸಮಿತಿ, ದೇವರಾಜ ನಗರ, ತೇರದಾಳ.
 ಗಜಾನನ ಮಿತ್ರ ಮಂಡಳಿ, ಕಲ್ಲಟ್ಟಿ, ತೇರದಾಳ.
ಗಣಪತಿ ಗುಡಿ, ದ್ವಾರಬಾಗಿಲು ಹತ್ತಿರ(ಅಗಸಿ), ತೇರದಾಳ.
 ಗಜಾನನ ಮಿತ್ರ ಮಂಡಳಿ, ಹಳೆ ಪೇಠ ಗಲ್ಲಿ, ತೇರದಾಳ.
Flag this message

ಶ್ರೀ ಗಜಾನನ ಮಿತ್ರ ಮಂಡಳಿ, ದೇಸಾರ ಬಾವಿ ಹತ್ತಿರ,ತೇರದಾಳ


May Lord Ganesha Bless You
Thank You
Visit Again.

Test

Test 1