Friday, April 12, 2013

ತೇರದಾಳ ಮತದಾನ ವಾಮಾಚಾರದಿಂದ ಮುಕ್ತವಾಗಿರಲೆಂದು ಹಾರೈಸಿ ಶ್ರೀ ಅಲ್ಲಮಪ್ರಭುದೇವರಲ್ಲಿ ಪೂಜೆ.



ತೇರದಾಳ: ರಾಜಕೀಯದಲ್ಲಿ ಅಧಿಕಾರದ ಗದ್ದುಗೆ ಏರಲು ಅಭ್ಯರ್ಥಿಗಳು ಪೂಜೆ-ಪುನಸ್ಕಾರ, ಹೋಮ-ಹವನ, ಇಷ್ಟಕ್ಕೆ ಮನಸ್ಸು ತೃಪ್ತವಾಗದಿದರೆ ವಾಮಾಚಾರದ ಮಾರ್ಗವು ಹಿಡಿಯುತ್ತಾರೆ. ಇಂತಹ ಅನಿಷ್ಟಗಳು ತೇರದಾಳ ಮತಕ್ಷೇತ್ರದ ಜನರ ಮೇಲೆ ಪ್ರಭಾವ ಬೀಳಬಾರದು ಎಂದು ಡಾ|| ಎಂ. ಎಸ್. ದಾನಿಗೊಂಡ, ಅಜಿತ ಮಗದುಮ, ಮಹಾವೀರ ಕುಳ್ಳಿ, ಸುರೇಶ ಬಾಬಗೊಂಡ, ಹರೀಶ ಕುಲಕರ್ಣಿ, ಮತ್ತಿತರರು ಶ್ರೀ ಅಲ್ಲಮ ಪ್ರಭು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. 

Thursday, April 11, 2013

ಸ್ವಾಭಿಮಾನಕ್ಕಾಗಿ ಸಂಘರ್ಶ - ತೇರದಾಳ ಮತಕ್ಷೆತ್ರದಿಂದ ಕಾಂಗ್ರೇಸ್ಸಿನ ಬಂಡಾಯ ಅಭ್ಯರ್ಥಿ


ತೇರದಾಳ: ತೇರದಾಳ ಮತಕ್ಷೆತ್ರದಲ್ಲಿ ಪ್ರಬಲ ಪಕ್ಷವಾಗಿರುವ ಕಾಂಗ್ರೇಸ್ ತೇರದಾಳ ಮತಕ್ಷೆತ್ರವನ್ನು ಪ್ರತಿನಿಧಿಸಲು ಸ್ಥಳೀಯ ಅಭ್ಯರ್ಥಿಗೆ ಅವಕಾಶ ಕೊಡದೆ ಅನ್ಯಾಯ ಮಾಡುತಿದ್ದಾರೆ. ಮತ್ತು ಇದರ ವಿರುದ್ಧ ಸ್ಥಳಿಯ ಕಾಂಗ್ರೇಸ್ ಮುಖಂಡರು ಹಾಗೂ ಕಾರ್ಯ ಕರ್ತರು ಇದಕ್ಕೆ ದಿಟ್ಟ ಉತ್ತರ ನೀಡುವುದಕ್ಕಾಗಿ ಈ ಬಾರಿಯ ವಿಧನಸಭಾ ಚುನಾವನೆಯಲ್ಲಿ ಸ್ವತಂತ್ರ ಅಭ್ಯರ್ಥಿಯನ್ನು ಕಣಕ್ಕೆ  ಇಳಿಸಲು ನಿರ್ಧರಿಸಿದ್ದಾರೆ ಎಂದು ಡಾ|| ಎಂ. ಎಸ್. ದಾನಿಗೊಂಡ ತಿಳಿಸಿದ್ದಾರೆ. 

Test

Test 1