Friday, October 26, 2012

Namma Golbhanvi Special

ಕಿತ್ತುಹೋದ ರಸ್ತೆ ತುಂಬಿನಿಂತ ಚರಂದಿ ಸರಿಪಡಿಸಲು ಆಗ್ರಹ;













ತೆರದಾಳ: ಸಮೀಪದ ಗೊಲಬಾವಿ ಗ್ರಾಮದ ವಾರ್ಡ ನಂ2ರಲ್ಲಿ ಸುವರ್ಣ ಗ್ರಾಮೆ ಯೋಜನೆಯಲ್ಲಿ ನಿರ್ಮಿಸಿದ  ರಸ್ತೆಕಾಮಗಾರಿಗಳು ಕಳಪೆಯಾಗಿವೆ ಎಂದು ಮಾರುತಿ, ರೆಳೆಕರ ಆರೊಪಿಸಿದ್ದಾರೆ.
ಗ್ರಾಮ ಪಂಚಾಯತಿ ಹತ್ತಿರ 1ಕೋಟಿ ರೂ,ಅನುದಾನದಡಿಯಲ್ಲಿ ಸುವರ್ಣಗ್ರಾಮ ಯೋಜನೆಯಲ್ಲಿ ಮಾಡಿದ ರಸ್ತೆಗಳು ಚರಂಡಿಗಳು ಕಿತ್ತುಹೋಗಿದ್ದು ಅಲ್ಲಲ್ಲಿ ಚರಂಡಿಗಳು ತುಂಬಿ ನಿಂತಿವೆ ಆ ಚರಂಡಿಗಳನ್ನು ಸ್ವಚ್ಚಮಾಡುವ ದಿಕ್ಕು ಇಲ್ಲಾ ಯಲ್ಲವ್ವಾ ,ಕರಿಗಾರ ಮಾತನಾಡಿ ನಮಗ ಗಟಾರ ಯಾತಕ್ಕ ಬೇಕ್ರಿ, ಅದನ್ನು ಮುಚ್ಚಿ ಬಿಡ್ರಿ, ಅದರಿಂದ ಬಾಳ ತೊಂದರಿ ಆಗೆತರಿ. ಇಲ್ಲಿ ಸೊಳ್ಳೆ ಹೆಚ್ಚಾಗಿ ನಮಗ ರೋಗ ಬರಾಕ ಹತ್ಯಾವ ಎಂದು ಹೆಳಿದಳು. ಈ ವಾರ್ಡಗೆ  ಸರಿಯಾಗಿ ನೀರು ಬರಾಂಗಿಲ್ಲ ನೀರು ಬರುವ ಪೈಪಗಳು ಅಲ್ಲಲ್ಲಿ ಕಟ್ಟ ಆಗ್ಯಾವ ಎಲ್ಲಿಂದಲೊ ನೀರು ತಂದು ಜೀವನ ಸಾಗಿಸಾಕ ಹತ್ತೆವು ಕಿತ್ತು ಹೋದ ರಸ್ತೆ ತುಂಬಿ ನಿಂತ ಚರಂಡಿಗಳನ್ನು ಸ್ವಚ್ಚ ಮಾಡಿ ಮತ್ತು ಪೈಪಗಳನ್ನು ಸರಿಯಾಗಿ ಜೋಡಿಸಿ ನೀರು ಸರಬರಾಜು ಮಾಡಬೇಕು ಎಂದು ಮಾರುತಿ ರೇಳೇಕರ, ಮಾರುತಿ ಕರಿಗಾರ, ಲಕ್ಕಪ್ಪ ಮಂಗಳವೇಡಿ, ನಿಂಗಪ್ಪಾ ತೇಜನ್ನವರ. ಸುಲೆಮಾನ ಮುಕ್ಕೇರಿ, ಮಾರುತಿ ಬಂಗೆನ್ನವರ, ಪ್ರಬು ಬಂಗೆನ್ನವರ ಮತ್ತು ಪ್ರಭು ಎಸ. ಹೂಗಾರ ಆಗ್ರಹಿಸಿದ್ದಾರೆ. 

ಶ್ರೀ ಬಿ.ಡಿ.ಹಿರೆಮೇತ್ರಿ 


Wednesday, October 24, 2012

Venkataramana Govinda Goooooooooovinda...






































ತೇರದಾಳ : ನವರಾತ್ರಿ ನಿಮಿತ್ಯ ನಗರದ ಕಿಲ್ಲಾಭಾಗದಲ್ಲಿರುವ ಶ್ರೀವೆಂಕಟೇಶ್ವರ ದೇವಸ್ಥಾನದ ವೆಂಕಟರಮಣ ರಥೋತ್ಸವವು ಬುಧವಾರ ಶೃದ್ಧಾ ಭಕ್ತಿಯಿಂದ ಸಂಭ್ರಮದಿಂದ ಜರುಗಿತು.
ರಾಜ್ಯ ಸರಕಾರದ ಮುಖ್ಯಸಚೇತಕರು, ಶಾಸಕ ಸಿದ್ದು ಸವದಿ, ಉಪೇಂದ್ರ ದೇಶಪಾಂಡೆ, ಗುರುರಾಜ ಕುಲಕಣರ್ಿ, ಬಾಳು ದೇಶಪಾಂಡೆ, ಸುರೇಶ ರೇಣಕೆ, ಹರೀಷ ಕುಲಕಣರ್ಿ, ಷಣ್ಮುಖ ಗಾಡದಿ, ಪ್ರಫುಲ್ ದೇಶಪಾಂಡೆ ಸೇರಿದಂತೆ ಗಣ್ಯರು, ಮಾತೆಯರು ಯುವಕರು ಪಾಲ್ಗೊಂಡಿದ್ದರು.
ದೇವಸ್ಥಾನದಿಂದ ಆರಂಭವಾದ ರಥೋತ್ಸವವು ಕಿಲ್ಲಾಭಾಗ, ಚಾವಡಿ ಸರ್ಕಲ್, ಪೇಠಭಾಗ, ನಡುಪೇಟೆ, ಜವಳಿ ಬಾಜಾರ ಮೂಲಕ ಶ್ರೀಸಿದ್ಧರಾಮೇಶ್ವರ ಗಲ್ಲಿ ಮೂಲಶ್ರಿವೆಂಕಟೇಶ್ವರ ದೇವಸ್ಥಾನದಲ್ಲಿ ಪೂಜೆ ನಂತರ ಕಿಲ್ಲಾಭಾಗದ ದೇವಸ್ಥಾನಕ್ಕೆ ಮರಳಿತು. ಕನರ್ಾಟಕ, ಮಹಾರಾಷ್ಟ್ರದ ವಿವಿದೆಡೆಗಳಿಂದಲೂ ಸದ್ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ರಥೋತ್ಸವದ ಸಂದರ್ಭದಲ್ಲಿ ಸಕಲ ಸದ್ಭಕ್ತರು ನೈವೆದ್ಯ, ಫಲ-ಪುಷ್ಪ, ಕಾಯಿ ಅಪರ್ಿಸಿ, ಮುತೈದೆಯರು ಆರತಿ ಮಾಡಿದರು. ಅರ್ಚಕರು ವೆಂಕಟರಮಣ ಗೋವಿಂದ, ಗೋವಿಂದಾ ಎನ್ನುತ್ತ ಜೈಘೋಷಗಳೊಂದಿಗೆ ರಥೋತ್ಸವ ಸಡಗರದಿಂದ ನೆರವೇರಿತು.

Monday, October 22, 2012

ದೇವರಾಜನಗರ ಬಡಜನರಿಗೆ ನೋಟಿಸ್ : ಡಾ|| ದಾನಿಗೊಂಡ ಖಂಡನೆ



1) ದೇವರಾಜನಗರದ ನಿವಾಸಿಗಳ ಸಮಸ್ಯೆಯನ್ನು ತೇರದಾಳ ಪುರಸಭೆ ಅಧ್ಯಕ್ಷರಿಗೆ ಮನವರಿಕೆ ಮಾಡಿಕೊಡುತ್ತಿರುವ ಡಾ||ಮಹಾವೀರ ದಾನಿಗೊಂಡ 

2) ಮುಖ್ಯಾಧಿಕಾರಿಗಳ ಜೊತೆಯಲ್ಲಿ ನೋಟಿಸ ಬಂದ ವಿಷಯ ಚರಚಿಸುತ್ತಿರುವವರು

3) ತೇರದಾಳ ಪುರಸಭೆಗೆ ಮುತ್ತಿಗೆ ಹಾಕಿದ್ದ ದೇವರಾಜನಗರದ ನಿವಾಸಿಗಳನ್ನುದ್ಧೇಶಿಸಿ ಡಾ||ಮಹಾವೀರ ದಾನಿಗೊಂಡ ಮಾತನಾಡಿದರು. 

4) ಪ್ರತಿಭಟನೆಗೆ ಬಂದ ಜನರು ಡಾ|| ಮಹಾವೀರ ದಾನಿಗೊಂಡರವರ ಮಾತುಗಳನ್ನು ಕೆಳುತ್ತಿರುವವರು. 

ತೇರದಾಳ : ಕಳೆದ 30ವರ್ಷಗಳಿಂದ ಇಲ್ಲಿಯ ದೇವರಾಜನಗರ ಸ.ನಂ.552ರಲ್ಲಿ ಜನರು ವಾಸಿಸುತ್ತಿದ್ದು, ಅಂತವರಿಗೆ ಧಿಡೀರನೇ ನೊಟಿಸ್ ಜಾರಿ ಮಾಡಿರುವ ಅರಣ್ಯ ಇಲಾಖೆ ಕ್ರಮ ರಾಜಕೀಯ ಪ್ರೇರಿತವಾಗಿದ್ದು, ಅಲ್ಲಿರುವ ಜನರಿಗೆ ಅನ್ಯಾಯವಾದರೆ ಸುಮ್ಮನಿರಲಾಗದೆಂದು ಡಾ.ಮಹಾವೀರ ಎಸ್. ದಾನಿಗೊಂಡ ಹೇಳಿದರು.
ಇಲ್ಲಿಯ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು ಬಡವರು ಜಾಗೆ ಇರದಿದ್ದಾಗ ಅಲ್ಲಿ ವಾಸವಾಗಿ ನೆಮ್ಮದಿಯಿಂದ ಇರುವಾಗ ನೋಟಿಸ್ ಜಾರಿ ಮಾಡಿ ಅವರಿಗೆ ಅನ್ಯಾಯ ಮಾಡಲು ಮುಂದಾಗಿರುವದು ಎಷ್ಟರಮಟ್ಟಿಗೆ ಸರಿ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಪ್ರವೀಣ ಪಿ.ನಾಡಗೌಡ ಮಾತನಾಡಿ ದೇವರಾಜನಗರದಿಂದ ಪುರಸಭೆಗೆ 6ಜನ ಸದಸ್ಯರು ಆಯ್ಕೆಯಾಗಿರುವಾಗ, ಅದು ಅರಣ್ಯ ಇಲಾಖೆಯ ಜಾಗೆ ಹೇಗಾಗುತ್ತದೆ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಯುವಧುರೀಣ ವಕ್ತಾರ ಹರೀಷ ಕುಲಕರ್ಣಿ   ಪುರಸಭಾಧ್ಯಕ್ಷ ಸುರೇಶ ತಳ್ಳಿ, ರಮೇಶ ಕಿತ್ತೂರ ಮಾತನಾಡಿದರು.
ಪುರಸಭೆ ಮುಖ್ಯಾಧಿಕಾರಿ ಮಾತನಾಡಿ ಅರಣ್ಯ ಇಲಾಖೆ ನೋಟಿಸ್ ಜಾರಿ ಮಾಡಿದ ಬಗ್ಗೆ ತಮಗೆ ತಿಳಿದಿಲ್ಲ. 50ಎಕರೆ ಜಮೀನು ಪುರಸಭೆ ವ್ಯಾಪ್ತಿಗೆ ಬರುತ್ತದೆ. ಅಲ್ಲಿದ್ದವರಿಗೆ ನೋಟಿಸ್ ಜಾರಿ ಮಾಡಲು ಬರುವುದಿಲ್ಲ. ಈ ಕುರಿತು ಚರ್ಚಿಸಿ ಜನರಿಗೆ ಅನ್ಯಾಯವಾಗದಂತೆ ಕ್ರಮಕೈಗೊಳ್ಳಲಾಗುವದೆಂದರು.
ರಮೇಶ ಧರೆನ್ನವರ, ಪಪ್ಪು ಜಮಾದಾರ, ಮುನ್ನಾ ತಾಂಬೋಲಿ, ಬಸವರಾಜ ಗಾತಾಡೆ ಹಾಗೂ ದೇವರಾಜನಗರದ ನಿವಾಸಿಗಳು ಈ ಸಂದರ್ಭದಲ್ಲಿದ್ದರು.

ಚಿತ್ರ ಹಾಗೂ ವರದಿ ಮನೋಜ ಯಾದವಾಡ

Test

Test 1