Wednesday, September 29, 2010

ತೇರದಾಳದಲ್ಲಿ ಮಾರಾಮಾರಿ; ಹಲವರಿಗೆ ಗಾಯ

Terdal 28-09-2010

ತೇರದಾಳದ ಕಲ್ಲಟ್ಟಿಯಲ್ಲಿ ಮಂಗಳವಾರ ಮಧ್ಯಾನ್ಹ ಎರಡು ಗುಂಪುಗಳ ಮಧ್ಯ ನಡೆದ ಮಾರಾಮಾರಿ ನಂತರ ಬಿಕೋ ಎನ್ನುವ ವಾತಾವರಣ ನಿರ್ಮಾಣಗೊಂಡಿತ್ತು.
ಇಲ್ಲಿಯ ಪುರಸಭೆ ವಾರ್ಡ್ ನ್ಂ.೫ಕ್ಕೆ ಸಂಬಂದಿಸಿದಂತೆ ರವಿವಾರ ಉಪಚುನಾವಣೆ ನಡೆದಿತ್ತು.ಇಂದು ಬೆಳಿಗ್ಗೆ ಫಲಿತಾಂಶ ಪ್ರಕಟವಾಗುತ್ತಿದ್ದ್ಂತೆ ಮುರಗೆಪ್ಪ ತುಳಜಪ್ಪ ಅಥಣಿ ವಿಜಯಿ ಅಭ್ಯರ್ಥಿಯ ಹಿರಿಯರು.ಅಭಿಮಾನಿಗಳು ಪಟ್ಟಣ್ದಲ್ಲಿ ವಿಜಯೋತ್ಸವದಲ್ಲಿ ಪಟಾಕಿ ಸಿಡಿಸಿ ಗುಲಾಲು ಎರಚಿ, ಜೈಕಾರ ಘೋಅಣೆಗಳನ್ನು ಕೂಗಿ ಸಂಭ್ರಮಿಸಿದರು.ಆದರೆ ಇದಾದ ನಂತರ ಮದ್ಯಾನ್ಹ ೩-೩೦ರ ಸುಮಾರಿಗೆ ಕಲ್ಲಟ್ಟಿಯಲ್ಲಿ ಕೆಲವೆಡೆ ಪಟಾಕಿ ಸಿಡಿಸಿದ ಸಂದರ್ಭದಲ್ಲಿ ಮನೆಯೊಳಗೆ ಪಟಾಕಿ ಕಿಡಿ ಸಿಡಿಸಿದಾಗ ಎರೆಡು ಗುಂಪುಗಳ ಮಧ್ಯೆ ಮಾತಿನ ಚಕಮಕಿ ಶುರುವಾಗಿ ನಂತರ ಮಾರಾಮಾರಿಯಲ್ಲಿ ಹಲವರಿಗೆ ಗಾಯಗಳಾಗಿದ್ದು, ಕಲ್ಲಟ್ಟಿಯಲ್ಲಿ ಇದೀಗ ಬಿಕೋ ಎನ್ನುವ ವಾತಾವರಣ ನಿರ್ಮಾಣಗೊಂಡಿದೆ.
ಘಟನಾ ಸ್ಥಳಕ್ಕೆ ಜಮಖಂಡಿ ಡಿವೈಎಸ್ಪಿ ರವಿನಾರಾಯಣ, ಬನಹಟ್ಟಿ ಸಿಪಿಐ ಗೋಪಲ ಜೋಗಿನ್ ಆಗಮಿಸಿ ಪರಿಶೀಲಿಸಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಾವುದೇ ತೀವ್ರತರವಾದ ಹಾನಿ ಸಂಭವಿಸದಿರುವಂತೆ ಕ್ರಮಕೈಗೊಳ್ಳಲಾಗಿದ್ದು, ಪರಿಸ್ಥಿತಿ ಶಾಂತವಾಗಿದೆಯೆಂದರು.
ಘಟನೆ ವಿವರ: ಇಂದು ೫ನೇ ವಾರ್ಡಿನ ಉಪಚುನಾವನೆ ಫಲಿತಾಂಶ ಹೊರಬಿದ್ದ ಬಳೀಕ ಪಟ್ಟಣದ ೫ನೇ ವಾರ್ಡಿನಲ್ಲಿ ವಿಜಯೋತ್ಸವ ನಡೆದು ಮದ್ಯಾನ್ಹ ಕಲ್ಲಟ್ಟಿಯಲ್ಲಿ ಜನರೆಲ್ಲ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಒಮ್ಮೆಲೆ ಗಲಾಟೆ ನಡೆಯುವ ಶಬ್ದ ಕೇಳಿ ಹೊರಬಂದು ಜನ ನೋಡುತ್ತಿದ್ದಂತೆ ಎರಡು ಗುಂಪುಗಳ ಮಧ್ಯೆ ಲಾಠಿ, ಬರ್ಚಿಯಿಂದ ಹೊಡೆದಾಟ ನೋಡಿ ಬಾಗಿಲುಗಳನ್ನು ಮುಚ್ಚಿಕೊಂಡರೆಂದು ಪ್ರತ್ಯಕದರ್ಶಿಗಳು ತಿಳಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಠಾಣಾಧಿಕಾರಿ ಆರ್.ಆರ್.ಪಾಟೀಲ ಸಿಬ್ಬಂದಿಯೊಂದಿಗೆ ಆಗಮಿಸಿ ಗಲಾಟೆಯನ್ನು ಶಮನಗೊಳಿಸಲು ಹರಸಾಹಸ ಪಡಬೇಕಾಯಿತಂತೆ.ಘಟನೆಗೆ ಕಾರಣವನ್ನು ಕೇಳಿದಾಗ ಪಿಎಸ್‌ಐ ಜನರನ್ನು ಹತೋಟಿಗೆ ತರುವಲ್ಲಿ ಪೋಲಿಸರು ನಿರತರಾಗಿದ್ದರಿಂದ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲವೆಂದರು.ಗಾಯಗೊಂಡವರನ್ನು ಆಸ್ಪತ್ರೆಗೆ ೧೦೮ವಹನದಲ್ಲಿ ಸಾಗಿಸಲಾಯಿತೆಂದು ಹೇಳಲಾಗಿದೆ.
ಪುರಸಭೆ ಮಾಜಿ ಅಧ್ಯಕ್ಶ ಬಸವರಾಜ ಬಾಳಿಕಾಯಿ, ಗಂಗಪ್ಪ ಬಾಗಿ. ಪುರಸಭೆ ಸದಸ್ಯ ಮುರುಗೇಶ ಮಿರ್ಜಿ ಸೇರಿದಂತೆ ಹಲವರಿಗೆ ಗಾಯವಾಗಿರುವ ಬಗ್ಗೆ ತಿಳಿದುಬಂದಿದೆ. ಕಲ್ಲಟ್ಟಿಯಲ್ಲಿ ಪೋಲಿಸ್ನ್ವರು ಬೀಡುಬಿಟ್ಟಿದ್ದು ಸಧ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ.
ಆರೋಪ:ಮಾರಾಮಾರಿ ಘಟನೆ ವೀಕ್ಶಣೆಗೆಂದು ಡಾ,ಅಂಬೇಡ್ಕರ್ ಸರ್ಕಲ್ ನಲ್ಲಿಯ ದಲಿತ ಯುವಕರು ಕಲ್ಲಟ್ಟಿಗೆ ಹೋದ ಸಂದರ್ಭದಲ್ಲಿ ದಲಿತ ಹುಡುಗರ ಮೇಲೆ ಕೆಲವರು ವಿನಾಕಾರಣ ಹಲ್ಲೆ ಮಾಡಿದ್ದಾರೆಂದು ಪುರಸಭೆ ಸದಸ್ಯ ಯೋಗೇಶ ರೋಡಕರ ಆರೋಪಿಸಿದ್ದಾರೆ.ಶ್
 

No comments:

Post a Comment

Test

Test 1