Sunday, October 3, 2010

ರಾಜ್ಯಪಾಲರಿಂದ ಪ್ರಶಸ್ತಿ- ತೇರದಾಳಕ್ಕೆ ಮತ್ತೊಂದು ಗರಿ

ತೇರದಾಳ: 02-10-2010


ತೇರದಾಳದ ಶ್ರೀವಿನಾಯಕ ವಿದ್ಯಾವರ್ಧಕ ಸಂಘದ ಎಮ್.ವಿ.ಪಂಚಾಕ್ಷರಿ ಕೈಗಾರಿಕಾ ತರಬೇತಿ ಕೇಂದ್ರಕ್ಕೆ ೨೦೦೭-೦೮ನೇ ಸಾಲಿನ ಎನ್.ಎಸ್.ಎಸ್. ಘಟಕ ಪ್ರಶಸ್ತಿಯನ್ನು ರಾಜಭವನದಲ್ಲಿ ರಾಜ್ಯಪಾಲ ಹಂಸರಾಜ ಭಾರದ್ವಾಜ ಅವರು ಪ್ರಾಚಾರ್ಯ ಎಲ್.ವಿ.ಹಿಡಕಲ್ ಅವರಿಗೆ ಮತ್ತು ಅತ್ಯುತ್ತಮ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಪ್ರಶಸ್ತಿಯನ್ನು ವಿ.ಬಿ.ಹಳ್ಳೊಳ್ಳಿಯವರಿಗೆ ಸಚಿವ ಡಿ ಸುಧಾಕರ ವಿತರಿಸಿದರು. ಖಾದ್ರಿ ನರಸಿಂಹಯ್ಯ, ಯುವಜನಸೇವಾ ಇಲಾಖೆ ಪ್ರಧಾನ ಕಾರ್ಯದರ್ಶಿ ಐ.ಆರ್.ಪೆರಮಾಳ್, ಡಾ|| ಎಸ್.ರಮಾನಂದ ಶೆಟ್ಟಿ ಚಿತ್ರದಲ್ಲಿದ್ದಾರೆ.

         ಭವಿಷ್ಯದಲ್ಲಿ ತಮ್ಮನ್ನು ಸಮರ್ಪಿಸಿ ಕೊಂಡು ಸಮೂಹ ಬೆಳವಣಿಗೆಯತ್ತ ಕಾರ್ಯನಿರ್ವಹಿಸಲು ಪ್ರೋತ್ಸಾಹಿಸಲು ೧೯೮೯ರಿಂದ ಎನ್.ಎಸ್.ಎಸ್ ಘಟಕಗಳಿಗೆ, ಕಾರ್ಯಕ್ರಮಾಧಿಕಾರಿಗಳಿಗೆ ಸರಕಾರ ರಾಜ್ಯ ಮಟ್ಟದ ಪ್ರಶಸ್ತಿಯನ್ನು ನೀಡುತ್ತಿದೆ. ಇಲ್ಲಿಯ ಪ್ರತಿಷ್ಟಿತ ಶ್ರೀ ವಿನಾಯಕ ವಿದ್ಯಾವರ್ಧಕ ಸಂಘದ ಎಮ್.ವಿ.ಪಂಚಾಕ್ಷರಿ ಕೈಗಾರಿಕಾ ತರಬೇತಿ ಕೇಂದ್ರ ರಾಷ್ಟ್ರೀಯ ಸೇವಾ ಯೋಜನೆಯ ಕೋಶ ಕೊಡಮಾಡುವ ೨೦೦೭-೦೮ ಸಾಲಿನ ಅತ್ಯುತ್ತಮ ಕಾರ್ಯಕ್ರಮಾಧಿಕಾರಿ ಪ್ರಶಸ್ತಿಯನ್ನು ರಾಜಭವನದಲ್ಲಿ ಈಚೆಗೆ ಪ್ರಧಾನ ಮಾಡಲಾಯಿತು.

         ರಾಜ್ಯಪಾಲ ಹಂಸರಾಜ ಭಾರದ್ವಾಜ ಹಾಗೂ ಯುವಜನ ಸೇವಾ ಹಾಗೂ ಬಂಧೀಖಾನೆ ಸಚಿವ ಡಿ.ಸುಧಾಕರ ಅವರು ಪ್ರಾಚಾರ್ಯ ಎಲ್.ವಿ.ಹಿಡಕಲ್‍ರಿಗೆ ಅತ್ಯುತ್ತಮ ಘಟಕ ಪ್ರಶಸ್ತಿ ಮತ್ತು ವಿ.ಬಿ.ಹಳ್ಳೊಳ್ಳಿಯವರಿಗೆ ಅತ್ಯುತ್ತಮ ಕಾರ್ಯಕ್ರಮಾಧಿಕಾರಿ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಖಾದ್ರಿ ನರಸಿಂಹಯ್ಯ, ಯುವಜನಸೇವಾ ಇಲಾಖೆ ಪ್ರಧಾನ ಕಾರ್ಯದರ್ಶಿ ಐ.ಆರ್.ಪೆರಮಾಳ್, ಡಾ.ಎಸ್.ರಮಾನಂದ ಶೆಟ್ಟಿ ಈ ಸಂದರ್ಭದಲ್ಲಿದ್ದರು.

No comments:

Post a Comment

Test

Test 1