Swadeshi Movement on the eve of Gandhi Jayanti by Patanjali Yoga Peetha, Terdal
ಯೋಗ ಗುರು ಬಾಬಾ ರಾಮದೇವರವರ ಪತಂಜಲಿ ಯೋಗಪೀಠ ವತಿಯಿಂದ ಸ್ವದೇಶಿ ವಸ್ತುಗಳ ಪ್ರಚಾರ ಕಾರ್ಯಕ್ರಮದಲ್ಲಿ ಶ್ರೀ ಪ್ರಫುಲ್ ದೇಶಪಾಂಡೆ, ಸ್ವದೇಶಿ ವಸ್ತುಗಳಬಗ್ಗೆ ಮಾತನಾಡುತ್ತ: "ವಿದೇಶಿ ಕಂಪನಿಗಳು ಮೊದಲಿಗೆ ಉಚಿತ ಹಾಗೂ ಕಡಿಮೆ ಬೆಲೆಗೆ ತಮ್ಮ ವಸ್ತುಗಳನ್ನು ಮಾರಾಟ ಮಾಡುತ್ತಾರೆ. ಉದಾ- ಮೊದಲಿಗೆ ಸಂತೆಯಲ್ಲಿ ಉಚಿತ ಚಹಾ ಕುಡಿಸಿ ಜನರಿಗೆ ಚಹಾದ ರುಚಿ ಹಚ್ಚಿದರು ಇದರಂತೆ ಹೈಬ್ರೀಡ್ ಬೀಜಗಳನ್ನು ಹಾಗೂ ರಾಸಾಯನಿಕ ರಸಗೋಬ್ಬರ ರಿಯಾಯತಿ ದರದಲ್ಲಿ ಮಾರಾಟ ಮಾಡಿ ಜನರಿಗೆ ಆಸೆ ಹಚ್ಚುತ್ತಾರೆ. ಆದರೆ ಒಮ್ಮೆ ಜನರು ಅದಕ್ಕೆ ಮಾರು ಹೋದಾಗ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಾರೆ" ಎಂದು ಮಾತನಾಡಿದರು. ಇದನ್ನು ಪ್ರತಿಬಟಿಸಿ ಪ್ರತಿಬಟನಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಹಾಗೂ ಶ್ರೀ ಬಾಬಾ ರಾಮದೇವ ಅವರು ಸ್ವದೇಶಿ ವಸ್ತುಗಳನ್ನು ಪರಿಚಯಿಸಿದರು. ಇದೆ ಸಂದರ್ಭದಲ್ಲಿ ರೊಚ್ಚಿಗೆದ್ದ ಪ್ರತಿಭಟನಾಕಾರರು ವಿದೇಶಿ ವಸ್ತುಗಳನ್ನು ಸುಟ್ಟುಹಾಕಿದರು. ಸಿದ್ದು ಅಮ್ಮಣಗಿ, ಸುರೇಶ ರೇಣಕೆ, ಬಸವರಾಜ ಕಡೊಣಿ, ಸಂಜು ಕೆಸ್ತೀಕರ, ಇತರೆ ಮುಖಂಡರು ಉಪಸ್ಥಿತರಿದ್ದರು.
ಸ್ವದೇಶಿ ವಸ್ತುಗಳ ಮಾರಾಟ ಮಳಿಗೆ, ಗಣಪತಿ ಗುಡಿ ಎದುರಿಗೆ. |
No comments:
Post a Comment