Saturday, November 17, 2012

ಮೌಲ್ಯ ಬೆಳೆಸಿಕೊಳ್ಳಲು ಉತ್ತಮ ಪುಸ್ತಕ ಓದಿ-ಕುಲಕರ್ಣಿ

ತೇರದಾಳದ ಸರಕಾರಿ ಗಂಡು ಮಕ್ಕಳ ಮಾದರಿ ಶಾಲೆಯಲ್ಲಿ ತೆಗೆಯಿರಿ ಪುಸ್ತಕ ಹೊರಗೆ-ಹಚ್ಚಿರಿ ಜ್ಞಾನದ ದೀವಿಗೆ ಎಂಬ ಶಿಕ್ಷಣ ಇಲಾಖೆಯ ವಿನೂತನ ಕಾರ್ಯಕ್ರಮದಲ್ಲಿ ಪ್ರಕಾಶರಾವ್ ಕುಲಕರ್ಣಿ ಮಾತನಾಡಿದರು.


ತೇರದಾಳ : ಇಂದಿನ ಟಿ.ವಿ.ಕಂಪ್ಯೂಟರ್ ಯುಗದಲ್ಲಿ ಓದುವ ಹವ್ಯಾಸ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ತೆಗೆಯಿರಿ ಪುಸ್ತಕ ಹೊರಗೆ-ಹಚ್ಚಿರಿ ಜ್ಞಾನದ ದೀವಿಗೆ ಎಂಬ ಶಿಕ್ಷಣ ಇಲಾಖೆಯ ವಿನೂತನ ಕಾರ್ಯಕ್ರಮದ ಮೂಲಕ ಶಾಲಾ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುತ್ತಿರುವದು ಸ್ವಾಗತಾರ್ಹ. ಮಕ್ಕಳು ಶಾಲಾ ಗ್ರಂಥಾಲಯದಲ್ಲಿರುವ ಮೌಲ್ಯಯುತ ಪುಸ್ತಕಗಳ ಜ್ಞಾನ ಪಡೆದು, ಮೌಲ್ಯಗಳನ್ನು ಬೆಳೆಸಿಕೊಂಡು ದೇಶದ ಉತ್ತಮ ಪ್ರಜೆಗಳಾಗಬೇಕೆಂದು ದೂರ ಸಂಪರ್ಕ ಇಲಾಖೆಯ ಪ್ರಕಾಶರಾವ್ ಕುಲಕರ್ಣಿ  ಕರೆಯಿತ್ತರು.
ಇಲ್ಲಿಯ ಸರಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಶಾಲೆಯಲ್ಲಿ ತೆಗೆಯಿರಿ ಪುಸ್ತಕ ಹೊರಗೆ-ಹಚ್ಚಿರಿ ಜ್ಞಾನದ ದೀವಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರವಿ ಗುಮ್ಮನ್ನವರ. ಅಪ್ಪು ಮಂಗಸೂಳಿ ಅತಿಥಿಗಳಾಗಿ ಆಗಮಿಸಿದ್ದರು.
ಜಿ.ಎಂ.ಮೋಪಗಾರ ಸ್ವಾಗತಿಸಿ, ನಿರೂಪಿಸಿದರು. ಪಿ.ಎ.ಬುರ್ಶಿ  ವಂದಿಸಿದರು.


ಪುಸ್ತಕ ಜೋಳಿಗೆ 





ಈ ಕಾರ್ಯಕ್ರಮದಂಗವಾಗಿ ಶಾಲೆಯ ಎಲ್ಲ ಮಕ್ಕಳು ಶಾಲಾ ಸಿಬ್ಬಂದಿಯೊಂದಿಗೆ ಪಟ್ಟಣದ ಮನೆ ಮನೆಗಳಿಗೆ ತೆರಳಿ 50ಪುಸ್ತಕಗಳನ್ನು ಶಾಲಾ ಗ್ರಂಥಾಲಯಕ್ಕೆ ಸಂಗ್ರಹಿಸಿದರು.



ತೆಗೆಯಿರಿ ಪುಸ್ತಕ ಹೊರಗೆ-ಹಚ್ಚಿರಿ ಜ್ಞಾನದ ದೀವಿಗೆ ಕಾರ್ಯಕ್ರಮದ  ಅಂಗವಾಗಿ ಶ್ರೀ ಪ್ರಭುಲಿಂಗ ಪದವಿಪುಉರ್ವ ಮಹಾವಿದ್ಯಾಲಯದ ಶಾಲಾ ಮಕ್ಕಳು ಹಾಗು ಸಿಬ್ಬಂದಿಗಳು ನಗರದ ಮುಖ್ಯ ಬೀದಿಗಳಲ್ಲಿ ಸಂಚರಿಸಿದರು. 






ಶ್ರೀ ಸಿದ್ದೆಶ್ವರ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಶಿಕ್ಷಣ ಇಲಾಖೆಯ ಮಹತ್ವಾಕಾಂಕ್ಷೆ ಯೋಜನೆಯಾದ ತಗೆಯಿರಿ ಪುಸ್ತಕ ಹೊರಗೆ -ಹಚ್ಚಿರಿ ಜ್ಞಾನದ ದೀವಿಗೆ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಡಾ|| ಆರ್ . ಬಿ. ಕಾಲತಿಪ್ಪಿ  ಮಾತನಾಡಿದರು

No comments:

Post a Comment

Test

Test 1