ತೇರದಾಳ ಪುರಸಭೆಯಿಂದ ದಿವ್ಯ ನಿರ್ಲಕ್ಷ.
೨೦೦೮-೦೯ ನೇ ಸಾಲಿನಲ್ಲಿ ಎಸ್.ಎಪ್.ಸಿ ಅನುದಾನದಡಿಯಲ್ಲಿ ಪುರಸಭೆ ವತಿಯಿಂದ ಗಬ್ಬೆಂದು ನಾರುತ್ತಿರುವ ಪುರಸಭೆ ನಿರ್ಮಿಸಿದ ಶೌಚಾಲಯಗಳು. ೧೮ನೇ ವಾರ್ಡ ಬಬಲಾದಿ ಸದಾಶಿವ ಮಠದ ಹತ್ತಿರವಿರುವ ಶೌಚಾಲಯ ಅನುದಾನ ಬಳಸಿ ಕಟ್ಟಿಸಿದ್ದು ಹೊರತು ೨೦೦೮-೦೯ ರಿಂದ ಇಲ್ಲಿವರೆಗೆ ಯಾರು ಇತ್ತ ಗಮನ ಹರಿಸಿಲ್ಲ. ತೇರದಾಳ ನಗರದ ಲಕ್ಕವ್ವ ದೇವಸ್ತಾನದ ಹತ್ತಿರವಿರುವ ಪುರುಷರ ಶೌಚಾಲಯಕ್ಕೆ ಸರಿಯಾದ ನೀರಿನ ವ್ಯವಸ್ಥೆ ಮತ್ತು ಸ್ವಚ್ಛತೆ ಇಲ್ಲದೆ ಅನಾಥವಾಗಿದೆ. ಸಮಸ್ಯೆಯನ್ನು ಅರಿಯಲು ಹೊದಾಗ ಅಲ್ಲಿ ಅನೇಕ ಸಮಸ್ಯಗಳಬಗ್ಗೆ ನಾಗರಿಕರು ಅಳಲು ತೊಡಿಕೊಂಡರು. ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದು, ಸರಿಯಾದ ರಸ್ಥೆ ಇಲ್ಲದಿರುವುದು, ದಾರಿ ದೀಪಗಳಿಲ್ಲದಿರುವುದು, ಸ್ತ್ರಿಯರ ಶೌಚಾಲಯ ಇಲ್ಲದಿರುವುದು, ಹೀಗೆ ಮುಂತಾದ ಸಮಸ್ಯೆಗಳನ್ನು ಹೇಳಿದರು. ನಿಂಗಪ್ಪ ತೇಜನ್ನವರ ಅವರು ಅವ್ಯವಸ್ಥಿತವಾದ ಶೌಚಾಲಯವನ್ನು ಬೇಗನೆ ಸರಿಪಡಿಸಬೇಕು. ಹಾಗೂ ಇಲ್ಲಿರುವ ಎಲ್ಲ ಸಮಸ್ಯೆಗಳಿಗೆ ಶಿಘ್ರ ಪರಿಹಾರ ಒದಗಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ನಿಂಗಪ್ಪ ತೇಜನ್ನವರ ಎಚ್ಚರಿಸಿದರು.
No comments:
Post a Comment