1) ದೇವರಾಜನಗರದ ನಿವಾಸಿಗಳ ಸಮಸ್ಯೆಯನ್ನು ತೇರದಾಳ ಪುರಸಭೆ ಅಧ್ಯಕ್ಷರಿಗೆ ಮನವರಿಕೆ ಮಾಡಿಕೊಡುತ್ತಿರುವ ಡಾ||ಮಹಾವೀರ ದಾನಿಗೊಂಡ |
2) ಮುಖ್ಯಾಧಿಕಾರಿಗಳ ಜೊತೆಯಲ್ಲಿ ನೋಟಿಸ ಬಂದ ವಿಷಯ ಚರಚಿಸುತ್ತಿರುವವರು |
3) ತೇರದಾಳ ಪುರಸಭೆಗೆ ಮುತ್ತಿಗೆ ಹಾಕಿದ್ದ ದೇವರಾಜನಗರದ ನಿವಾಸಿಗಳನ್ನುದ್ಧೇಶಿಸಿ ಡಾ||ಮಹಾವೀರ ದಾನಿಗೊಂಡ ಮಾತನಾಡಿದರು. |
4) ಪ್ರತಿಭಟನೆಗೆ ಬಂದ ಜನರು ಡಾ|| ಮಹಾವೀರ ದಾನಿಗೊಂಡರವರ ಮಾತುಗಳನ್ನು ಕೆಳುತ್ತಿರುವವರು. |
ತೇರದಾಳ : ಕಳೆದ 30ವರ್ಷಗಳಿಂದ ಇಲ್ಲಿಯ ದೇವರಾಜನಗರ ಸ.ನಂ.552ರಲ್ಲಿ ಜನರು ವಾಸಿಸುತ್ತಿದ್ದು, ಅಂತವರಿಗೆ ಧಿಡೀರನೇ ನೊಟಿಸ್ ಜಾರಿ ಮಾಡಿರುವ ಅರಣ್ಯ ಇಲಾಖೆ ಕ್ರಮ ರಾಜಕೀಯ ಪ್ರೇರಿತವಾಗಿದ್ದು, ಅಲ್ಲಿರುವ ಜನರಿಗೆ ಅನ್ಯಾಯವಾದರೆ ಸುಮ್ಮನಿರಲಾಗದೆಂದು ಡಾ.ಮಹಾವೀರ ಎಸ್. ದಾನಿಗೊಂಡ ಹೇಳಿದರು.
ಇಲ್ಲಿಯ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು ಬಡವರು ಜಾಗೆ ಇರದಿದ್ದಾಗ ಅಲ್ಲಿ ವಾಸವಾಗಿ ನೆಮ್ಮದಿಯಿಂದ ಇರುವಾಗ ನೋಟಿಸ್ ಜಾರಿ ಮಾಡಿ ಅವರಿಗೆ ಅನ್ಯಾಯ ಮಾಡಲು ಮುಂದಾಗಿರುವದು ಎಷ್ಟರಮಟ್ಟಿಗೆ ಸರಿ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಪ್ರವೀಣ ಪಿ.ನಾಡಗೌಡ ಮಾತನಾಡಿ ದೇವರಾಜನಗರದಿಂದ ಪುರಸಭೆಗೆ 6ಜನ ಸದಸ್ಯರು ಆಯ್ಕೆಯಾಗಿರುವಾಗ, ಅದು ಅರಣ್ಯ ಇಲಾಖೆಯ ಜಾಗೆ ಹೇಗಾಗುತ್ತದೆ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಯುವಧುರೀಣ ವಕ್ತಾರ ಹರೀಷ ಕುಲಕರ್ಣಿ ಪುರಸಭಾಧ್ಯಕ್ಷ ಸುರೇಶ ತಳ್ಳಿ, ರಮೇಶ ಕಿತ್ತೂರ ಮಾತನಾಡಿದರು.
ಪುರಸಭೆ ಮುಖ್ಯಾಧಿಕಾರಿ ಮಾತನಾಡಿ ಅರಣ್ಯ ಇಲಾಖೆ ನೋಟಿಸ್ ಜಾರಿ ಮಾಡಿದ ಬಗ್ಗೆ ತಮಗೆ ತಿಳಿದಿಲ್ಲ. 50ಎಕರೆ ಜಮೀನು ಪುರಸಭೆ ವ್ಯಾಪ್ತಿಗೆ ಬರುತ್ತದೆ. ಅಲ್ಲಿದ್ದವರಿಗೆ ನೋಟಿಸ್ ಜಾರಿ ಮಾಡಲು ಬರುವುದಿಲ್ಲ. ಈ ಕುರಿತು ಚರ್ಚಿಸಿ ಜನರಿಗೆ ಅನ್ಯಾಯವಾಗದಂತೆ ಕ್ರಮಕೈಗೊಳ್ಳಲಾಗುವದೆಂದರು.
ರಮೇಶ ಧರೆನ್ನವರ, ಪಪ್ಪು ಜಮಾದಾರ, ಮುನ್ನಾ ತಾಂಬೋಲಿ, ಬಸವರಾಜ ಗಾತಾಡೆ ಹಾಗೂ ದೇವರಾಜನಗರದ ನಿವಾಸಿಗಳು ಈ ಸಂದರ್ಭದಲ್ಲಿದ್ದರು.
ಚಿತ್ರ ಹಾಗೂ ವರದಿ ಮನೋಜ ಯಾದವಾಡ
No comments:
Post a Comment