ನವರಾತ್ರಿ ಆರಂಭ-ಭವ್ಯ ಮೆರವಣಿಗೆ
ಬರಗಾಲದ ಭೀಕರತೆ, ಸಂಕಷ್ಟ ತೊಲಗಲಿ-ನೆಮ್ಮದಿ ದೊರೆಯಲಿ : ಉಮಾಶ್ರೀ
ತೇರದಾಳ : ಈ ವರ್ಷ ನಾಡಿನ ಜನತೆ ಭೀಕರ ಬರಗಾಲದಿಂದ ನರಳುತ್ತಿದ್ದಾರೆ. ಆ ಆದಿಶಕ್ತಿ ಜನತೆಗೆ ಅನುಭವಿಸುತ್ತಿರುವ ನೋವು ಸಂಕಷ್ಟಗಳನ್ನು ಪರಿಹರಿಸಲಿ, ಜನ ನೆಮ್ಮದಿಯಿಂದ ಬದುಕಲು ಒಳ್ಳೆಯ ದಿನಗಳು ಮುಂದೆ ಬರಲೆಂದು ಕೆಪಿಸಿಸಿ ಪ್ರಧಾನ ಕಾರ್ಯದಶರ್ಿ ಶ್ರೀಮತಿ ಉಮಾಶ್ರೀ ಆಶಯ ವ್ಯಕ್ತಪಡಿಸಿದರು.
ಇಲ್ಲಿಯ ಶ್ರೀನೀಲಕಂಠೇಶ್ವರ ದೇವಸ್ಥಾನದಲ್ಲಿ ಕಲ್ಲಟ್ಟಿ ಶ್ರೀಆದಿಶಕ್ತಿ ತರುಣ ಮಂಡಳಿಯವರು ಶರನ್ನವರಾತ್ರಿ ನಿಮಿತ್ಯ ಹಾಗೂ ಮಂಡಳಿಯ 15ನೇ ವಾಷರ್ಿಕೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಶ್ರೀಆದಿಶಕ್ತಿ ಭವ್ಯ ಮೆರವಣಿಗೆಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದ ಅವರು ನಾಡಹಬ್ಬ ದಸರೆ ನಾಡಿನ ಜನತೆಗೆ ನೆಮ್ಮದಿಯನ್ನು ತರಲೆಂದು ಪ್ರಾಥರ್ಿಸಿದರು.
ಪುರಭಾಧ್ಯಕ್ಷ ಸುರೇಶ ಮುದಕನ್ನವರ(ತಳ್ಳಿ) ಅಧ್ಯಕ್ಷತೆ ವಹಿಸಿದ್ದರು. ಜಮಖಂಡಿಯ ಯೋಗಪ್ಪ ಸವದಿ(ಸಿದ್ದು ಸವದಿ ಸಹೋದರ), ಜೆಡಿಎಸ್ ಧುರೀಣ ರಂಗನಘವಡ ಪಾಟೀಲ, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಬಾಳಿಕಾಯಿ ಮಾತನಾಡಿ ಪ್ರಾಚೀನ ಕಾಲದಿಂದಲೂ ವೈಭವದಿಂದ ನಡೆಯುವ ದಸರೆ ಭಾರತೀಯ ಸಂಸ್ಕೃತಿಯಲ್ಲಿ ವಿಶಿಷ್ಟ ಸ್ಥಾನ ಪಡೆದಿದೆಯೆಂದರು.
ವೈದ್ಯ ಡಾ.ಮಹಾವೀರ ಎಸ್.ದಾನಿಗೊಂಡ, ವಿಜಯಮಹಾಂತ ನಾಡಗೌಡ, ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಸಂಜೀವ ಅಥಣಿ, ಪುರಸಭೆ ಮಾಜಿ ಅಧ್ಯಕ್ಷ ನಿಂಗಪ್ಪಣ್ಣ ಮಾಲಗಾಂವಿ, ಬಿಜೆಪಿ ಧುರೀಣರಾದ ಅಪ್ಪು ಮಂಗಸೂಳಿ, ಸುರೇಶ ರೇಣಕೆ, ಪುರಸಭಾ ಸದಸ್ಯ ಮುರುಗೇಶ ಮಿಜರ್ಿ, ಜಮಖಂಡಿ ನಗರಸಭಾ ಸದಸ್ಯ ಶ್ರೀಶೈಲ ಪಾಟೀಲ, ಅಶೋಕ ಕಾಲತಿಪ್ಪಿ ಇನ್ನಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಮೆರವಣಿಗೆಯಲ್ಲಿ ಗೋಲಬಾಂವಿಯ ಜೈಕನರ್ಾಟಕ ಕಲಾ ಸಾಂಸ್ಕೃತಿಕ ಕೈಪೆಟ್ಟು ತಂಡ, ಆಲಗೂರಿನ ಆದಿಶ್ವರ ಬ್ರಾಸ್ಬ್ಯಾಂಡ್ ತಂಡದವರು ಮೆರವಣಿಗೆಗೆ ತಮ್ಮ ಕಲೆಯಿಂದ ಮೆರಗು ತಂದರು.
ತರುಣ ಮಂಡಳಿಯ ಬಸವರಾಜ ಮುದಕನ್ನವರ ಸ್ವಾಗತಿಸಿದರು. ಸಿದ್ದು ಅಥಣಿ ನಿರೂಪಿಸಿದರು. ಅಲ್ಲಪ್ಪ ಇಂಗಳಗಿ ವಂದಿಸಿದರು. ಮೆರವಣಿಗೆಯ ನೇತೃತ್ವವನ್ನು ಬಸವರಾಜ ನಿವರ್ಾಣಿ, ಸಂಗಮೇಶ ನಿವರಗಿ, ಪ್ರಕಾಶ ಗೌಡರ, ರವಿ ವಜ್ಜರಮಟ್ಟಿ, ಸುರೇಶ ಹುದ್ದಾರ, ಅಪ್ಪಾಸಾಬ ಮಸೂತಿ, ಪ್ರಭು ಎಸ್. ಹೂಗಾರ ವಹಿಸಿದ್ದರು.
ಶ್ರೀನೀಕಂಠೇಶ್ವರ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆಯು ದೇವರಾಜನಗರ, ಮಹಾವೀರ ಸರ್ಕಲ್, ಬಸವೇಶ್ವರ ಸರ್ಕಲ್, ಕಾಳಿನ ಬಜಾರ, ನಡುಪೇಟೆ, ಶ್ರೀಪ್ರಭುದೇವರ ಅಗಸಿ ಮೂಲಕ ಕಲ್ಲಟ್ಟಿಗೆ ಆಗಮಿಸಿ ಮುಕ್ತಾಯಗೊಂಡಿತು. ನಂತರ ನಾಡದೇವಿ ಶ್ರೀದೇವಿ ಆದಿಶಕ್ತಿ ಮೂತರ್ಿಪ್ರತಿಷ್ಟಾಪಿಸಿ ಅರ್ಚಕರಿಂದ ವಿಶೇಷ ಪೂಜೆ ನೆರವೇರಿತು. ಸದ್ಭಕ್ತರು ಆದಿಶಕ್ತಿ ದರ್ಶನ ಪಡೆದುಕೊಂಡರು.
No comments:
Post a Comment