ಗ್ರಂಥಪಾಲಕರಿಲ್ಲದ ಚಿಮ್ಮಡ ಗ್ರಂಥಾಲಯ!
ತೇರದಾಳ ಮತಕ್ಷೇತ್ರದ ಚಿಮ್ಮಡ ಗ್ರಾಮದಲ್ಲಿ ಗ್ರಂಥಾಲಯ ಕಟ್ಟಡವಿದೆ, ಗ್ರಂಥಪಾಲಕರಿಲ್ಲದ ಚಿಮ್ಮಡ ಗ್ರಾಮದ ಗ್ರಂಥಾಲಯ! |
ಚಿಮ್ಮಡ : ಗ್ರಾಮೀಣ ಭಾಗದ ಜನರಿಗೂ ಪತ್ರಿಕೆಗಳ ಮಹತ್ವ ತಿಳಿಯಲಿ, ಅವರಿಗೂ ಉಚಿತವಾಗಿ ದಿನಪತ್ರಿಕೆ, ವಾರಪತ್ರಿಕೆ, ವಿವಿಧ ಬಗೆಯ ಪುಸ್ತಕಗಳ ಜ್ಞಾನ ಲಭಿಸುವಂತಾಗಲೆಂದು ಸರಕಾರ ಗ್ರಾಮೀಣ ಭಾಗದಲ್ಲಿಯೂ ಗ್ರಂಥಾಲಯಗಳನ್ನು ತೆರೆದು ಒಳ್ಳೆಯ ಕಾರ್ಯ ಮಾಡಿದೆ. ಆದರೆ ಜಮಖಂಡಿ ತಾಲೂಕಿನ ದೊಡ್ಡ ಗ್ರಾಮವೆಂಬ ಹೆಗ್ಗಳಿಕೆಗೆ ಪಾತ್ರವಾದ, ತೇರದಾಳ ಮತಕ್ಷೇತ್ರದ ಅಲ್ಲಮಪ್ರಭುದೇವರ ಕಿಚಡಿ ಜಾತ್ರೆಯಿಂದ ಸುಪ್ರಸಿದ್ಧವಾದ ಚಿಮ್ಮಡ ಗ್ರಾಮದಲ್ಲಿ ಮಾತ್ರ ಗ್ರಂಥಾಲಯ ಕಟ್ಟಡವಿದೆ, ಗ್ರಂಥಪಾಲಕರಿಲ್ಲದೇ, ಗುಡಿಯಿದೆ, ಪೂಜಾರಿಯಿರದ ಹಾಳು ದೇಗುಲವಾದಂತಾಗಿದೆ!!
ಇಲ್ಲಿ ಒಳಗೆ ಪತ್ರಿಕೆಗಳು ಬಿದ್ದಿರುತ್ತವೆ, ಆದರೆ ಗ್ರಂಥಪಾಲಕರಿಲ್ಲದ್ದರಿಂದ ಗ್ರಾಮಸ್ಥರಿಗೆ ಗ್ರಂಥಾಲಯದ ಸದುಪೊಯೋಗವಾಗುತ್ತಿಲ್ಲವೆಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಕಳೆದ 3ವರ್ಷಗಳ ಹಿಂದೆ ಗಣಪತಿ ಗುಡಿಯ ಹತ್ತಿರ ಗ್ರಂಥಾಲಯವಿತ್ತು. ನಂತರ ಗ್ರಾಮಪಂಚಾಯತಿಯವರು ಒಂದು ಕೊಠಡಿ ವ್ಯವಸ್ಥೆ ಕಲ್ಪಿಸಿ, ಬಸ್ ನಿಲ್ದಾಣ ಬಳಿ ಗ್ರಂಥಾಲಯ ಆರಂಭಿಸಿದಾಗ, ಅಲ್ಲಿ ಗ್ರಂಥಪಾಲಕರಿದ್ದರು. ಅವರು ನಿಧನರಾದ ಮೇಲೆ, ಗ್ರಾಮದ ಸರಕಾರಿ ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿಗಳ ಮನೆಗೆ ವರ್ಗವಾಗಿ ಅಲ್ಲಿ ಗ್ರಂಥಾಲಯ ಆರಂಭಿಸಿದ್ದಾರೆ.
ಗ್ರಂಥಪಾಲಕರಿಲ್ಲದ್ದರಿಂದ ಕೇವಲ ಕಟ್ಟಡದ ಮೇಲೆ ಗ್ರಾಮ ಪಂಚಾಯತ ಗ್ರಂಥಾಲಯ ಚಿಮ್ಮಡ ಎಂಬ ನಾಮಫಲಕ ಬಿಟ್ಟರೆ, ಅದು ಕೀಲಿ ಹಾಕಿದ ಕಟ್ಟಡವಾಗಿದೆ. ಅಲ್ಲಿ ನಾಮಫಲಕ ಮಾತ್ರ ರಾರಾಜಿಸುತ್ತದೆ. ಜೊತೆಗೆ ಕೆಳಗಡೆ ಸಮೂಹ ಸಂಪನ್ಮೂಲ ಕೇಂದ್ರವೆಂತಲೂ ಬರೆಸಲಾಗಿದೆ. ಕೆಲವೊಮ್ಮೆ ಶಿಕ್ಷಣ ಇಲಾಖೆಯ ಸಿಆರ್ಪಿಯವರು ಅದನ್ನು ಬಳಕೆ ಮಾಡುತ್ತಿರುವದು ಕಂಡುಬಂದರೂ, ನಿಧರ್ಿಷ್ಟವಾಗಿ ಅದು ಯಾವ ಉದ್ಧೇಶಕ್ಕಾಗಿ ಕಟ್ಟಡವಿದೆಯೆಂಬುದನ್ನು ಸಂಬಂಧಿಸಿದವರೆ ಹೇಳಬೇಕಾಗಿದೆ?
No comments:
Post a Comment