ತೇರದಾಳದ ದೇವರಾಜ ನಗರದಲ್ಲಿನ ದೇವದಾಸಿ ಪುನರ್ವಸತಿ ಕಾಲನಿಯಲ್ಲಿನ ಮನೆಗಳನ್ನು ಸರ್ವೇ ನೆಪದಲ್ಲಿ ಕಸಿದುಕೊಳ್ಳುತ್ತಿರುವದನ್ನು ಖಂಡಿಸಿ ನಡೆದ ಸಭೆಯಲ್ಲಿ ಮಾಜಿ ಪುರಸಭೆ ಅಧ್ಯಕ್ಷ ಪ್ರವಿಣ ನಾಡಗೌಡ ಮಾತನಾಡಿದ್ದು.
ತೇರದಾಳ: ತೇರದಾಳ ಪಟ್ಟಣದ ದೇವರಾಜ ನಗರ ಸರ್ವೇ ನಂ. 552. ರಲ್ಲಿ ದೇವದಾಸಿ ಕಾಲನಿಯಲ್ಲಿ ದೀನ ದಲಿತರು 20-25 ವರ್ಷಗಳ ವರೆಗೆ ವಾಸವಾಗಿದ್ದು, ದೇವದಾಸಿ ಪುನರ್ವಸತಿ ನಿಗಮ ಹಾಗೂ ಕರ್ನಾಟಕ ಯಾಂತ್ರಿಕ ಮಗ್ಗಗಳ ನಿಗಮವು ದೇವದಾಸಿಯರ ಹಾಗೂ ಅವರ ಕುಟುಂಬ ಹಾಗೂ ದೀನ ದಲಿತರ ಅಭಿವೃದ್ಧಿಗಾಗಿ ನೀಡಲ್ಪಟ್ಟ ಜಾಗೆಯನ್ನು ಕಸಿದುಕೊಳ್ಳುವ ಯತ್ನ ದೇವರಾಜ ನಗರದಲ್ಲಿ ನಡೆದಿದೆ. ಇಲ್ಲಿ ಎಲ್ಲ ಸೌಕರ್ಯಗಳನ್ನು ಅಂದರೆ ರಸ್ತೆ, ವಿದ್ಯುತ, ನೀರಿನ ವ್ಯವಸ್ಥೆ, ಅಂಕನ ಪಟ್ಟಿ, ಮನೆ ಸಂ., ಪ್ರತಿಯೊಂದು ಕುಟುಂಬಕ್ಕು ಈದೆ ವಿಳಾಸವನ್ನು ಹೊಂದಿರುವ ಪಡಿತರ ಚಿಟಿಯನ್ನು ಕೊಟ್ಟಿದ್ದಾರೆ. ಇಷ್ಟೆಲ್ಲಾ ಅನುಕೂಲಗಳನ್ನು ಮಾಡಿಕೊಡಲಾಗಿ ಈಗ ಸವರ್ೆ ನೆಪದಲ್ಲಿ ಈ ಜಮಿನಿನಲ್ಲಿ ನಾವು ಮನೆಗಳನ್ನು ಕಟ್ಟಿದರು ಈ ಜಾಗೆಯನ್ನು ಪುರಸಭೆಯವರು ಕಸಿದುಕೊಳ್ಳುತ್ತಿದ್ದಾರೆ. ಸಹಾಯಕ ಅರಣ್ಯ ಸಂರಕ್ಷನಾಧಿಕಾರಿಗಳು, ಉಪವಿಭಾಗ ಜಮಖಂಡಿಯವರು ನೋಟಿಸನ್ನು ನೀಡಿರುತ್ತಾರೆ. ಕಾರಣ ನಾಳೆ ದಿ: 22-10-2012 ಸೋಮವಾರ ದಿವಸ ಮುಂಜಾನೆ 11:00ಘಂಟೆಗೆ ಪುರಸಭೆಯಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಾ|| ಎಮ್.ಎಸ್. ದಾನಿಗೊಂಡ ಹಾಗೂ ಮಾಜಿ ಪುರಸಭೆ ಅಧ್ಯಕ್ಷರು ಪ್ರವಿಣ ನಾಡಗೌಡ ತಿಳಿಸಿದರು.
ಇಂದು ಸಾಯಂಕಾಲ 4ಘಂಟೆಗೆ ದೇವರಾಜ ನಗರದ ಸಮುದಾಯ ಭವನದಲ್ಲಿ ಕೂಡಿದ ಸಭೆಯಲ್ಲಿ ಸುಮಾರು 200 ಕುಟುಂಬಗಳು ಪಾಲಗೊಂಡು ಚಚರ್ಿಸಿದರು. ಈ ಸಭೆಯಲ್ಲಿ ಸುರೇಶ ಬಾಬಗೊಂಡ, ಅಜಿತ ಮಗದುಮ, ರಮೇಶ ಧರೆನ್ನವರ, ಹರಿಶ ಕುಲಕಣರ್ಿ, ಶ್ರೀನಾಥ ಶಿಂಗೆ, ಜಾಫರ ಜಾವಿದ, ಕುಮಾರ ಮಾಂಗ ಉಪಸ್ಥಿತರಿದ್ದರು.
No comments:
Post a Comment