Saturday, October 20, 2012

ಶ್ರೀಶೈಲಂ ನವರಾತ್ರಿ ಉತ್ಸವದಲ್ಲಿ ಹಾಗೂ ಜತ್ತ ಗಣೇಶೋತ್ಸವದಲ್ಲಿ ಪ್ರದರ್ಶನ ಹೊರರಾಜ್ಯಗಳಲ್ಲೂ ಗಮನ ಸೆಳೆದ ತೇರದಾಳ ಝಾಂಝ ಪಥಕ ತಂಡ



ತೇರದಾಳ : ಆಂಧ್ರಪ್ರದೇಶದ ಶ್ರೀಶೈಲಂದಲ್ಲಿ ಪ್ರದರ್ಶನ ನೀಡುತ್ತಿರುವ ಶ್ರೀಪ್ರಭುಲಿಂಗೇಶ್ವರ ಝಾಂಝ ಪಥಕದ ಆಕರ್ಷಕ ಪ್ರದರ್ಶನ ದೃಶ್ಯ.





ತೇರದಾಳ : ಯುವಕರು ಮನಸ್ಸು ಮಾಡಿದರೆ ಸಾಧನೆ ಮಾಡಬಲ್ಲರು ಎಂಬುದಕ್ಕೆ ಇಲ್ಲಿಯ ಶ್ರೀಪ್ರಭುಲಿಂಗೇಶ್ವರ ಝಾಂಝ ಪಥಕದ ಯುವಕರ ತಂಡ ಹೊರರಾಜ್ಯಗಳಲ್ಲೂ ಮಿಂಚಿ, ತಮ್ಮ ಅದ್ಭುತ ಕಲೆ ಪ್ರದಶರ್ಿಸಿ ಮೆಚ್ಚುಗೆ ಗಳಿಸುತ್ತಿದ್ದಾರೆ. 
ಯುವಕರು ಆಸಕ್ತಿಯಿಂದ ಕ್ರೀಡೆ, ಸಂಗೀತ, ಸಾಹಿತ್ಯ, ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡರೆ ಖಂಡಿತ ಎತ್ತರಕ್ಕೆ ಬೆಳೆಯಲು ಸಾಧ್ಯವಿದೆ. ಅಂತಹ ಯುಕರ ಸಾಧನೆಗೆ ಪ್ರೋತ್ಸಾಹವನ್ನು ನೀಡಿದಾಗ ಇನ್ನು ಹೆಚ್ಚಿನ ಸಾಧನೆ ಮಾಡಿ ಊರಿಗೆ, ನಾಡಿಗೆ, ರಾಷ್ಟ್ರಕ್ಕೆ ಕೀತರ್ಿ ತರಬಲ್ಲರು. 
ಕಳೆದ 19ವರ್ಷಗಳಿಂದ ನಿರಂತರವಾಗಿ ಝಾಂಝ ಪಥಕ ಪ್ರದರ್ಶನದಲ್ಲಿ ತಮ್ಮದೇಯಾದ ಕಲೆಯನ್ನು ಪ್ರದಶರ್ಿಸುವ ಮೂಲಕ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ತೇರದಾಳದ ಶ್ರೀಪ್ರಭುಲಿಂಗೇಶ್ವರ ಝಾಂಝ ಪಥಕ ತಂಡವು ಯುವಕ ಪ್ರಕಾಶ ಹೊಸಮನಿಯವರ ನೇತೃತ್ವದಲ್ಲಿ ಮುನ್ನಡೆದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ತೇರದಾಳದ ಈ ಝಾಂಝ ಪಥಕ ತಂಡವು ಈ ವರ್ಷ ನವರಾತ್ರಿ ನಿಮಿತ್ಯ ಏರ್ಪಡಿಸಿರುವ ಶ್ರೀಭ್ರಮರಾಂಬಿಕಾ ಶ್ರೀಶ್ರೀಶೈಲ ಮಲ್ಲಿಕಾಜರ್ುನ ದೇವಸ್ಥಾನದ 9ದಿನಗಳ ಉತ್ಸವದಲ್ಲಿ ತೇರದಾಳದ ಈ ಝಾಂಝ ಪಥಕ ತಂಡದವರು ದೇವಸ್ಥಾನದವರ ಕೋರಿಕೆ ಮೇರೆಗೆ ಭಾಗವಹಿಸಿ ಅಲ್ಲಿಯವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಯುಗಾದಿ, ಶಿವರಾತ್ರಿಗಳಲ್ಲಿಯೂ ತಮ್ಮ ತಂಡ ಭಾಗವಹಿಸಿ ಉತ್ಸವಕ್ಕೆ ಮೆರಗು ನೀಡಬೇಕೆಂದು ಆಂಧ್ರಪ್ರದೇಶದ ಸುಕ್ಷೇತ್ರ ಶ್ರೀಶೈಲಂ ದೇವಸ್ಥಾನದವರು ಈ ತಂಡಕ್ಕೆ ಕೇಳುವರೆಂದರೆ ಈ ತಂಡದ ಪ್ರದರ್ಶನ ಎಷ್ಟು ಅದ್ಭುತ ಎಂಬುದನ್ನು ತಿಳಿಯಬೇಕು! ಅಲ್ಲವೇ?
1993ರ ಆರಂಭದಲ್ಲಿ ಈ ತಂಡ ಝಾಂಝ ಪಥಕದ ಮೂಲಕ ತೇರದಾಳದ ಆರಾಧ್ಯದೈವ ಶ್ರೀಅಲ್ಲಮಪ್ರಭುದೇವರ ಶ್ರಾವಣ ಮಾಸದಲ್ಲಿ ನಡೆಯುವ ಜಾತ್ರೆಯಲ್ಲಿ, ದೀಪಾವಳಿ ಕಡೇಪಾಡ್ಯೆಯಂದು ನಡೆಯುವ ಹಾಗೂ ಸಂಕ್ರಮಣದಂದು ನಡೆಯುವ ಪಲ್ಲಕ್ಕಿ ಉತ್ಸವದಲ್ಲಿ ತಮ್ಮ ಕಲಾ ಪ್ರದರ್ಶನ ಸೇವೆ ಆರಂಭಿಸಿದರು. ಅಲ್ಲಿಂದ ಇಲ್ಲಿಯವರೆಗೆ ವಿವಿಧ ಬಗೆಯ ಆಕರ್ಷಕ ಕವಾಯತ್ತುಗಳೊಂದಿಗೆ ಮೈನವಿರೇಳಿಸುವ ಭಂಗಿಗಳೊಂದಿಗೆ ಪ್ರದರ್ಶನ ನೀಡುವಲ್ಲಿ ಸಿದ್ಧಹಸ್ತರಾಗಿ ಜನಮನ ಗಮನ ಸೆಳೆದರು.
ನಂತರ ಮಹಾರಾಷ್ಟ್ರದ ಜತ್ತದಲ್ಲಿ ಗಣೇಶೋತ್ಸವದಲ್ಲಿ ಪ್ರದರ್ಶನ ನೀಡರುವ ಈ ತಂಡ, 2005ರಲ್ಲಿ ಸುಪ್ರಸಿದ್ಧ ಮೈಸೂರ ದಸರಾ ಮೆರವಣಿಗೆಯಲ್ಲಿಯೂ ಭಾಗವಹಿಸಿ ಸೈ ಎನಿಸಿಕೊಂಡಿದೆ. ಆಂದ್ರದ ಶ್ರೀಶೈಲಂದಲ್ಲಿ ಶಿವರಾತ್ರಿ, ನವರಾತ್ರಿ, ಶ್ರಾವಣ ಮಾಸದಲ್ಲಿ ನಡೆಯುವ ವಿಶೇಷ ಉತ್ಸವಗಳಲ್ಲಿ, ರಾಯಚೂರ ಜಿಲ್ಲೆ ಶಕ್ತಿನಗರದ ಸುಗರೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಝಾಂಝ ಪಥಕ ಪ್ರದರ್ಶನ ನೀಡಿ ಬೆಳೆಯುತ್ತಿದೆ. 
ಈ ತಮಡದಲ್ಲಿರುವ ಯುವಕರು : ಪ್ರಕಾಶ ಹೊಸಮನಿ (ತಂಡದ ನಾಯಕರು), ಮಹಾದೇವ ಹೊಸಮನಿ, ಚಿದಾನಂದ ಹೊಸಮನಿ, ಭೀಮಶಿ ಕುಂಚನೂರ, ಚನ್ನಪ್ಪ ಕಾಲತಿಪ್ಪಿ, ಪ್ರಕಾಶ ಮೂಡಲಗಿ, ಪರಪಸಪ್ಪ ಕುಂಚನೂರ, ಪರಪಸಪ್ಪ ನಿವರ್ಾಣಿ, ಶೀವನಿಂಗ ತೇಗೂರ, ಶಿವಲಿಂಗ ಕಾಲತಿಪ್ಪಿ, ಈರಪ್ಪ ಬಾಳಿಕಾಯಿ, ಸಂತೋಷ ಜಮಖಂಡಿ, ಪ್ರಕಾಶ ಕಾಳಿ, ಚಿದಾನಂದ ರಾವಳ, ಶ್ರೀಕಾಂತ ಮರಿಗೊಂಡ, ಮಹಾದೇವ ಮಾಳಿ, ಹನಮಂತ ನಿವರ್ಾಣಿ, ಹನಮಂತ ಅಂಟ್ಯಾಳಿ, ಸದಾಶಿವ ಹೊಸಟ್ಟಿ ಈ ತಂಡದಲ್ಲಿರುವ ಸದಸ್ಯರಾಗಿದ್ದಾರೆ.
ಕನರ್ಾಟಕವಷ್ಟೆ ಅಲ್ಲ, ಆಂದ್ರಪ್ರದೇಶ, ಮಹಾರಾಷ್ಟ್ರಗಳಲ್ಲಿಯೂ ಝಾಂಝ ಪಥಕದ ಗಮನಾಹ್ ಪ್ರದರ್ಶನ ನೀಡುತ್ತಿರುವ ತೇರದಾಳದ ಶ್ರೀಪ್ರಭುಲಿಂಗೇಶ್ವರ ಝಾಂಝ ಪಥಕದ ಯುವಕರ ತಂಡ ದೇಶದ ಪ್ರಮುಖ ಉತ್ಸವಗಳಲ್ಲಿ ಭಾಗವಹಿಸಿ, ಪ್ರದರ್ಶನ ನೀಡಿ ಬೆಳೆಯಲಿ.

No comments:

Post a Comment

Test

Test 1