ಸರ್ವೆ ನೆಪದಲ್ಲಿ ಜಾಗೆಯನ್ನು ಕಸಿದುಕೊಳ್ಳುವ ಹುನ್ನಾರ.
ತೇರದಾಳ: ತೇರದಾಳ ಪಟ್ಟಣದ ದೇವರಾಜ ನಗರ ಸರ್ವೆ ನಂ. 552. ರಲ್ಲಿ ದೇವದಾಸಿ ಕಾಲನಿಯಲ್ಲಿ ದೀನ ದಲಿತರು 20-25 ವರ್ಷಗಳ ವರೆಗೆ ವಾಸವಾಗಿದ್ದು, ಈಗ ಕುಟುಂಬದ ಸದಸ್ಯರ ಸಂಖ್ಯೆ ಹೆಚ್ಚಿಗೆ ಆಗಿದ್ದು ಇರುವ ಜಾಗೆ ನಮಗೆ ಸಾಲದಾಗಿದ್ದು, ದೇವದಾಸಿ ಪುನರ್ವಸತಿ ನಿಗಮ ಹಾಗೂ ಕರ್ನಾಟಕ ಯಾಂತ್ರಿಕ ಮಗ್ಗಗಳ ನಿಗಮವು ದೇವದಾಸಿಯರ ಹಾಗೂ ಅವರ ಕುಟುಂಬ ಹಾಗೂ ದೀನ ದಲಿತರ ಅಭಿವೃದ್ಧಿಗಾಗಿ ನೀಡಲ್ಪಟ್ಟ ಜಾಗೆಯನ್ನು ಪುರಸಭೆ ತೇರದಾಳ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳು ಹಾಗೂ ಸಿಬ್ಬಂಧಿ ವರ್ಗ ಇವರುಗಳು ಅಲ್ಲಿ ವಾಸವಾಗಿರುವ ಕುಟುಂಬದ ಸದಸ್ಯರುಗಳಿಗೆ ಯಾವದೇ ಸೂಚನೆ ನೀಡದೆ ಅವರ ಜಾಗೆಯನ್ನು ಅಳೆದು ಸದರಿ ಜಾಗೆಯನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಿದ್ದಾರೆ.
ದಿವಂಗತ ಮಾಜಿ ಮುಖ್ಯಮಂತ್ರಿಗಳಾದ ದೇವರಾಜ ಅರಸು ನೀಡಿದ 500 ಎಕರೆ ಜಾಗೆಯನ್ನು ಬಡವರಿಗೆ ಅಂತಾ ಕೊಟ್ಟಿದ್ದು, ಸದರಿ ಜಾಗೆಯನ್ನು ಪುರಸಭೆ ಅಧಿಕಾರಿಗಳು ಸರ್ವೆ ಕಾರ್ಯ ನಡೆಸದೇ ಕೇವಲ ದೀನ ದಲಿತರು ಹಾಗೂ ದೇವದಾಸಿಯರು ವಾಸಿಸುವಂತಹ ಜಾಗೆಯನ್ನು ಮಾತ್ರ ಸರ್ವೆ ಮಾಡುವ ನೆಪದಲ್ಲಿ ಅವರಿಂದ ಜಾಗೆಯನ್ನು ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಆದ್ದರಿಂದ ಅಲ್ಲಿರುವಂತಹ ದೇವದಾಸಿಯರು ಮತ್ತು ದೀನ ದಲಿತರಿಗೆ ತುಂಬಾ ಅನ್ಯಾಯವಾಗುತ್ತಿದೆ, ಸದರಿ ಈ ಅಳತೆ ಕಾರ್ಯವನ್ನು ಅತೀ ಶೀಘ್ರವಾಗಿ ನಿಲ್ಲಿಸಬೇಕು ಎಂದು ತುಕಾರಾಮ ರೋಡಕರ ಶಿವಾನಂದ ನಡುವಿನಕೇರಿ ಸಂಜು ಮುಗಳಖೋಡ ವಿಠ್ಠಲ ಮಾಳಗೆ, ಕಿರಣ ಶಿಂಗೆ, ನಿಂಗಪ್ಪ ಮಾಲಗಾಂವಿ, ನಿಂಗಪ್ಪ ತೇಜನ್ನವರ, ಸುಲೆಮಾನ ಮುಕ್ಕೇರಿ, ಸುಭಾಸ ನಾಸಿ, ಪ್ರಭು ಹುಗಾರ ಆಗ್ರಸಿದರು ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
No comments:
Post a Comment