ಮುನಿಸಿಪಾಲಿಟಿಗಳು ಕರ್ತವ್ಯ ಲೋಪವೆಸಗಿದ್ದಾರೆ.
ಕರ್ನಾಟಕ ರಾಜ್ಯದಲ್ಲಿರುವ ನಗರ ಸ್ಥಳೀಯ ಸಂಸ್ಥೆಗಳಾದ ನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್‍ಗಳಲ್ಲಿ ಜಾಡಮಾಲಿ, ಲೋಡರ್, ಸ್ವಚ್ಛತಾ ಕಾರ್ಮಿಕರು, ವಾಟರ್‌ಮ್ಯಾನ್, ಎಲೆಕ್ಟ್ರಿಷಿಯನ್, ಡ್ರೈವರ್, ಕಂಪ್ಯೂಟರ್/ಡಾಟಾಎಂಟ್ರಿ ಆಪರೇಟರ್ ಮತ್ತು ಕಛೇರಿ ಸಹಾಯಕರಾಗಿ ಹತ್ತು-ಹದಿನೈದು ವರ್ಷಗಳಿಂದ ಸಾವಿರಾರು ಕಾರ್ಮಿಕರು ದುಡಿಯುತ್ತಲೇ ಬಂದಿದ್ದಾರೆ. ಅದರಂತೆ ಪುರಸಭೆ ತೇರದಾಳದಲ್ಲಿ ಮೇಲೆ ತಿಳಿಸಿದಂತೆ ಎಲ್ಲ ವಿಭಾಗಗಳು ಸೇರಿ ಸುಮಾರು ೪೬ ಜನರು ಗುತ್ತಿಗೆ ಆಧಾರದ ಮೇಲೆ ಕಳೆದ ೧೪-೧೫ ವರ್ಷಗಳಿಂದ ದುಡಿಯುತ್ತಾ ಬಂದಿದಾರೆ.
ದಿ: ೧೭-ಅಗಷ್ಟ್೨೦೧೨ ರಂದು ಆಯುಕ್ತರು, ಪೌರಾಢಳಿತ ನಿರ್ದೇಶನಾಲಯ ಬೆಂಗಳೂರು, ಇವರು, ಗುತ್ತಿಗೆ ಕಾರ್ಮಿಕರಿಗೆ ನೀಡಬೇಕಾದ ಸೌಲಭ್ಯಗಳ ಬಗ್ಗೆ ಸುತ್ತೋಲೆ ಹೊರಡಿಸಿದರು. ಅದನ್ನು ಜಾರಿ ಮಾಡದ ಮುನಿಸಿಪಾಲಿಟಿಗಳು ಕರ್ತವ್ಯ ಲೋಪವೆಸಗಿ, ಕಾನೂನಿಗೆ ಅಗೌರವತೋರುತಿದ್ದಾರೆಂದು ಇಂದು ದಿ: ೦೪-೧೦-೨೦೧೨ ರಂದು ಎಲ್ಲಾ ಮುನಿಸಿಪಾಲಿಟಿಗಳ ಎದುರು ಒಂದು ದಿನದ ಧರಣಿ ಸತ್ಯಾಗ್ರಹಕ್ಕೆ ರಾಜ್ಯ ಸಂಘ ಕರೆ ನೀಡಿತ್ತು. ಅದರಂತೆ ತೇರದಾಳ ಪುರಸಭೆ ಕಾರ್ಮಿಕರು ಇಂದು ಇಲ್ಲಿ ಒಂದು ದಿನದ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.
No comments:
Post a Comment