Tuesday, August 31, 2010

ಏಳು ತಿಂಗಳಿನಿಂದ ಸಂಬಳಕ್ಕಗಿ ಏಳುಬೀಳು!

ಸಂಬಳವಿಲ್ಲದೇ ಪರಿತಪಿಸುತ್ತಿರುವ ಸ್ವೀಪರ ಇಕ್ಬಾಲ!!

ಚಿತ್ರವರದಿ: ಮ.ಕೃ.ಮೇಗಾಡಿ, ತೇರದಾಳ, ೯೮೪೪೦೮೮೧೩೩


ತೇರದಾಳ,೧-ಕಳೆದ ೨೩ವಷಗಳಿಂದ ಬಸ್ ನಿಲ್ದಾಣದಲ್ಲಿ ಸ್ವೀಪರ್(ಕಸಗೂಡಿಸಿ, ನೀರು ಹೊಡೆಯುವದು) ಅಂತಾ ಕೆಲಸ ನಿರ್ವಹಿಸುತ್ತಿರುವ ವ್ಯಕ್ತಿ, ಅಲ್ಪ, ಸಂಬಳದಲ್ಲೇ ಜೀವನ ನಿರ್ವಹಣೆ ಸಾಧ್ಯವಾಗದೇ ದಿನನಿತ್ಯ ನಿಲ್ದಾಣದೊಳಗೆ ಬಂದು ಹೋಗುವವರಿಗೆ, ಗುರುತಿನವರಿಗೆ ’ನನ್ನ ಜೀವನಕ್ಕಷ್ಟ ಸಹಾಯ ಮಾಡ್ರಿ, ಇಲ್ಲಿ ಕೆಲ್ಸ ಮಾಡ್ತಿನಿ, ಆದ್ರ ಕೊಡೊ ಪಗಾರ ೪೫೦ ರೂ. ಸಾಹೇಬ್ರ ಹ್ಯಾಗಾದ್ರ ಮಾಡಿ ನನ್ನ ಪಗಾರ ಹೆಚ್ಚಿಗಿ ಮಾಡಿಸ್ರಿ....’ ಎಂದು ಗೋಗರೆಯುತ್ತಾನೆ! ಕಳೆದ ಏಳು ತಿಂಗಳಿನಿಂದ ಸಂಬಳ ಬಾರದೇ ತುಂಬ ಕಷ್ಟದಲ್ಲಿ ಪರಿತಪಿಸುತ್ತಿರುವ ಈತನ ಬಗ್ಗೆ ಕನಿಷ್ಟ ಅನುಕಂಪ ತೋರಿಸದ ಸಾರಿಗೆ ಇಲಾಖೆ ಮೇಲಾಧಿಕಾರಿಗಳು! ಈ ಕುರಿತು ಅನೇಕ ಬಾರಿ ನಾಗರಿಕರೇ ಸ್ವತಃ ಪತ್ರ ಬರೆದರೂ ಪ್ರಯೋಜನವಾಗಿಲ್ಲವೆಂದರೆ, ಇಲಾಖೆಯ ಕಾರ್ಯವೈಕರಿ ಬಗ್ಗೆ ವಾಕರಿಕೆ ಬರುತ್ತದೆ.



ನಾಲ್ಕು ಜನ ಹೆಣ್ಣು ಮಕ್ಕಳು, ನಾಲ್ಕು ಗಂಡು ಮಕ್ಕಳ ತುಂಬು ಸಂಸಾರ ಹೊಂದಿರುವ ಇಕ್ಬಾಲ ಹುಸೇನ ಮುರಸಲ್ ಮನಮಿಡಿಯುವ ಕಥೆಗೆ ಸ್ಪಂದಿಸುವವರಾರು?

     ಹುಬ್ಬಳ್ಳಿ ಎಮ್.ಡಿ ಯವರಿಗೆ ಊರಿನ ನಾಗರಿಕರೆಲ್ಲರು ಪತ್ರ ಬರೆದರು ಇಲ್ಲಿನವರೆಗೆ ಯಾವುದೆ ಪ್ರಯೋಜನವಾಗಿರುವುದಿಲ್ಲ.

ಆಗ್ರಹ: ಇದರ ಬಗ್ಗೇ ಕೂಡಲೇ ಗಮನ ಹರಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸ್ಥಳಿಯ ಘಟಕದ ಪ್ರ.ಕಾರ್ಯದರ್ಶಿ ಮೃತ್ಯುಂಜಯ ತೆಳಗಿನಮನಿ, ಮಾಜಿ ಅಧ್ಯಕ್ಷ ಅಪ್ಪಾಸಾಬ ಆಲಗೂರ, ಗಿರಮಲ್ಲಪ್ಪ ಕೊಕಟನೂರ, ಸೈಯದ್ ಕರೋಷಿ, ಶಿವನಿಂಗ ಬಿರಾದಾರ, ಚನ್ನಪ್ಪ ಮಾಳಿ, ಮಹಾತ್ಮಾ ಪುಲೆ ಸಮತಾ ಸೇನಾ ಕೇಂದ್ರದ ಅಧ್ಯಕ್ಷ ಮಲ್ಲು ಬಾಳಿಕಾಯಿ, ಶ್ರೀಅಲ್ಲಮಪ್ರಭು ಕರ್ಮವೀರ ಕಲಾ ಸಾಹಿತ್ಯ ಸಂಸ್ಕೃತಿ ವೇದಿಕೆ, ತೇರದಾಳ ವಲಯ ಕನ್ನಡ ಸಾಹಿತ್ಯ ಪರಿಷತ್ತು, ಶ್ರೀ ಕುವೆಂಪು ಕನ್ನಡ ಯುವಕ ಸಂಘದ ಪದಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುವರೇ ಕಾದು ನೋವ್ಬೇಕು!!

No comments:

Post a Comment

Test

Test 1