ಕಿತ್ತುಹೋದ ರಸ್ತೆ ತುಂಬಿನಿಂತ ಚರಂದಿ ಸರಿಪಡಿಸಲು ಆಗ್ರಹ;
ತೆರದಾಳ: ಸಮೀಪದ ಗೊಲಬಾವಿ ಗ್ರಾಮದ ವಾರ್ಡ ನಂ2ರಲ್ಲಿ ಸುವರ್ಣ ಗ್ರಾಮೆ ಯೋಜನೆಯಲ್ಲಿ ನಿರ್ಮಿಸಿದ ರಸ್ತೆಕಾಮಗಾರಿಗಳು ಕಳಪೆಯಾಗಿವೆ ಎಂದು ಮಾರುತಿ, ರೆಳೆಕರ ಆರೊಪಿಸಿದ್ದಾರೆ.
ಗ್ರಾಮ ಪಂಚಾಯತಿ ಹತ್ತಿರ 1ಕೋಟಿ ರೂ,ಅನುದಾನದಡಿಯಲ್ಲಿ ಸುವರ್ಣಗ್ರಾಮ ಯೋಜನೆಯಲ್ಲಿ ಮಾಡಿದ ರಸ್ತೆಗಳು ಚರಂಡಿಗಳು ಕಿತ್ತುಹೋಗಿದ್ದು ಅಲ್ಲಲ್ಲಿ ಚರಂಡಿಗಳು ತುಂಬಿ ನಿಂತಿವೆ ಆ ಚರಂಡಿಗಳನ್ನು ಸ್ವಚ್ಚಮಾಡುವ ದಿಕ್ಕು ಇಲ್ಲಾ ಯಲ್ಲವ್ವಾ ,ಕರಿಗಾರ ಮಾತನಾಡಿ ನಮಗ ಗಟಾರ ಯಾತಕ್ಕ ಬೇಕ್ರಿ, ಅದನ್ನು ಮುಚ್ಚಿ ಬಿಡ್ರಿ, ಅದರಿಂದ ಬಾಳ ತೊಂದರಿ ಆಗೆತರಿ. ಇಲ್ಲಿ ಸೊಳ್ಳೆ ಹೆಚ್ಚಾಗಿ ನಮಗ ರೋಗ ಬರಾಕ ಹತ್ಯಾವ ಎಂದು ಹೆಳಿದಳು. ಈ ವಾರ್ಡಗೆ ಸರಿಯಾಗಿ ನೀರು ಬರಾಂಗಿಲ್ಲ ನೀರು ಬರುವ ಪೈಪಗಳು ಅಲ್ಲಲ್ಲಿ ಕಟ್ಟ ಆಗ್ಯಾವ ಎಲ್ಲಿಂದಲೊ ನೀರು ತಂದು ಜೀವನ ಸಾಗಿಸಾಕ ಹತ್ತೆವು ಕಿತ್ತು ಹೋದ ರಸ್ತೆ ತುಂಬಿ ನಿಂತ ಚರಂಡಿಗಳನ್ನು ಸ್ವಚ್ಚ ಮಾಡಿ ಮತ್ತು ಪೈಪಗಳನ್ನು ಸರಿಯಾಗಿ ಜೋಡಿಸಿ ನೀರು ಸರಬರಾಜು ಮಾಡಬೇಕು ಎಂದು ಮಾರುತಿ ರೇಳೇಕರ, ಮಾರುತಿ ಕರಿಗಾರ, ಲಕ್ಕಪ್ಪ ಮಂಗಳವೇಡಿ, ನಿಂಗಪ್ಪಾ ತೇಜನ್ನವರ. ಸುಲೆಮಾನ ಮುಕ್ಕೇರಿ, ಮಾರುತಿ ಬಂಗೆನ್ನವರ, ಪ್ರಬು ಬಂಗೆನ್ನವರ ಮತ್ತು ಪ್ರಭು ಎಸ. ಹೂಗಾರ ಆಗ್ರಹಿಸಿದ್ದಾರೆ.
ಶ್ರೀ ಬಿ.ಡಿ.ಹಿರೆಮೇತ್ರಿ