ತೇರದಾಳ-03-09-2010
ಮ.ಕೃ.ಮೇಗಾಡಿ |
ಕಳೆದ ೧೫ವರ್ಷಗಳಿಂದ ಶಿಕ್ಷಣ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಗಮನಾರ್ಹ ಸಾದನೆ ಮಾಡುವುದರ ಮೂಲಕ ಗುರುತಿಸಿಕೊಂಡಿರುವ ಚಿಮ್ಮಡ ಜಾಂಗನೂರ ತೋಟದ ಕಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕರಾದ ಮ.ಕೃ.ಮೇಗಾಡಿಯವರು ಶಿಕ್ಷಣ ಇಲಾಖೆ ಕೊಡಮಾಡುವ ೨೦೧೦-೧೧ನೇ ಸಾಲಿನ ’ಬಾಗಲಕೋಟ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದರೆಂದು ಇಲಾಖಾ ಪ್ರಕಟಣೆ ತಿಳಿಸಿದೆ.
ಗ್ರಾಮೀಣ ಭಾಗದಲ್ಲಿಯೇ ಹೆಚ್ಚಿನ ಸೇವೆ ಸಲ್ಲಿಸುವ ಆಶಯ, ಅಲ್ಲಿಯ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕುವಂತಾಗಬೇಕು. ಆ ನಿಟ್ಟಿನಲ್ಲಿ ಮೇಗಾಡಿಯವರು ತಮ್ಮ ಬೋಧನಾ ಕೌಶಲ್ಯದಿಂದ, ಮಾತುಗಾರಿಕೆಯಿಂದ, ಬರವಣಿಗೆಯಿಂದ ಅದಿಕಾರಿಗಳು, ಗ್ರಾಮಸ್ಥರು ಹೀಗೆ ಎಲ್ಲರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.
ಕಾರ್ಯಕ್ರಮಗಳಲ್ಲಿ ಉತ್ತಮ ನಿರೂಪಕರಾಗಿರುವ ಇವರು ಡೈಟ್ ಇಲಕಲ್, ಡಿ.ಇಡಿ ಪ್ರಾಚಾರ್ಯರ ಸಂಘದವರ ಸಹಯೋಗದಲ್ಲಿ ಕೆಂಧೂಳಿಯವರು ಹೊರತಂದಿರುವ ’ಅಕ್ಷರ ಮೂರಕ್ಷರ’ ಎಂಬ ಧ್ವನಿಸುರುಳಿ ಸಿಡಿಯಲ್ಲಿ ನಿರೂಪಣೆ ಮಾಡಿದ್ದಾರೆ. ಅಲ್ಲದೇ ಅಡಿಕೆ ಎಲೆ ಅಜ್ಜಿಗೆ, ಆನೆ ಬೇಕು.. ಎಂಬ ಹಾಡನ್ನು ಹಾಡಿದ್ದಾರೆ. ಕಳೆದ ಪೆಬ್ರುವರಿಯಲ್ಲಿ ಗದಗನಲ್ಲಿ ನಡೆದ ೭೬ನೇ ಅಖಿಲ ಭರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಮ್ಮಿಕೊಂಡಿದ್ದ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಕವನ ವಾಚಿಸಿದ್ದರು. ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ, ಶ್ರೀಅಲ್ಲಮಪ್ರಭು ಕರ್ಮವೀರ ಕಲಾ ಸಾಹಿತ್ಯ ಸಂಸ್ಕೃತಿ ವೇದಿಕೆ ಅಧ್ಯಕ್ಷರಾಗಿ ಸಾಹಿತ್ಯ ವಾತಾವರಣ ನಿರ್ಮಾಣ, ಪ್ರತಿಭಾನ್ವಿತರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದ್ದಾರೆ.
ಕಿರಿಯ ವಯಸಿನ್ನಲ್ಲಿ ಅಪಾರ ಸಾಧನೆ.
'ಇವರ ಪ್ರತಿಭೆ, ಕ್ರಿಯಾಶೀಲತೆಗೆ ಅನೇಕ ಸಂಘ-ಸಂಸ್ಥೆಗಳು ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿವೆ.'
ಅತ್ಯುತ್ತಮ ಯುವ ಬರಹಗಾರ ಪ್ರಶಸ್ತಿ, ಸೌಹಾರ್ಧ ಸಹಕಾರಿ ಪ್ರಶಸ್ತಿ, ವೃತ್ತಿ-ಪ್ರವೃತ್ತಿ ಪ್ರಶಸ್ತಿ, ಉತ್ತರ ಕರ್ನಾಟಕ ಯುವ ಶ್ರೇಷಠ ಸಾಹಿತಿ ಪ್ರಶಸ್ತಿ, ಮಾಧ್ಯಮ ಕ್ಷೇತ್ರ ನಕ್ಷತ್ರ ಪ್ರಶಸ್ತಿ ಪಡೆದಿರುವ ಇವರು ಶಿಕ್ಷಣ ಇಲಾಖೆಯ ಬಾಗಲಕೋಟ ನವನಗರದ ಕಲಾಭವನದಲ್ಲಿ ಜರುಗಲಿರುವ ಸಮಾರಂಭದಲ್ಲಿ ಇದೇ ರವಿವಾರ ದಿ.೫ರಂದು ಮ.ಕೃ. ಮೇಗಾಡಿಯವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆಯೆಂದು ಇಲಾಖಾ ಪ್ರಕಟಣೆ ತಿಳಿಸಿದೆ.
ಇಂತಹ ಒಬ್ಬ ಪ್ರತಿಭನ್ವಿತ ವ್ಯಕ್ತಿ ನಮ್ಮ ಈ "ಇನ್ ತೇರದಾಳ ಸ್ಟ್ರಿಟ್ಸ" ಬ್ಲಾಗಗೆ ವರದಿಗಳನ್ನು ಕಳಿಸುವುದು ನಿಜಕ್ಕು ನಮಗೆ ಹೆಮ್ಮೆಯವಿಷಯ. ನಮ್ಮ ಓದುಗರ ಪರವಗಿ ಹಾಗೂ ಬ್ಲಾಗ ತಂಡದವತಿಯಿಂದ ಅಭಿನಂದಿಸುತ್ತೆವೆ.
No comments:
Post a Comment