Thursday, September 23, 2010

ಪುರಸಭೆ ವಾರ್ಡ ೫ ರಲ್ಲಿ ನೇರ ಸ್ಪರ್ದೆ

ತೇರದಾಳ-21-09-2010
     ಇಲ್ಲಿಯ ಪುರಸಭೆಯ ಮಾಜಿ ಅಧ್ಯಕ್ಷ ಬಸವರಾಜ ಬಾಳೀಕಾಯಿ ಸದಸ್ಯತ್ವ ಅನೂರ್ಜಿತಗೊಂಡ ಹಿನ್ನೆಲೆಯಲ್ಲಿ ಸ್ಥಳೀಯ ಪುರಸಭೆ ೫ನೇ ವಾರ್ಡಿಗೆ ಇದೇ ದಿ.೨೬ರಂದು ಚುನಾವಣೆ ಜರುಗಲಿದೆ. ಬಾಳೀಕಾಯಿಯವರಿಗೆ ಪಕ್ಷದ ಬಿ.ಫಾರ್ಮ ನೀಡಬೇಕೆಂದು ಬೆಂಬಲಿತಕಾರ್ಯಕರ್ತರ ಕೂಗಿಗೆ ಸ್ಪಂದಿಸಿದ ಬಿಜೆಪಿ ಜಿಲ್ಲಾ ವರಿಷ್ಠರ ಕ್ರಮದಿಂದ ಮತ್ತು ಕ್ರಿಮಿನಲ್ ಪ್ರಕರಣದ ವಿಚಾರಣೆ ನಡೆಯುತ್ತಿರುವುದರಿಂದ ಬಸವರಾಜ ಸಲ್ಲಿಸಿದ ನಾಮಪತ್ರ ತಿರಸ್ಕ್ರತಗೊಂಡಿತು.
      ಅಲ್ಲದೇ ಒಟ್ಟು ೧೦ಜನ ನಾಮಪತ್ರ ಸಲ್ಲಿಸಿದ್ದರು. ಹಿಂತೆಗೆದುಕೊಳ್ಳುವ ಕೊನೆಯ ದಿನ ೮ಜನ ನಾಮಪತ್ರವಾಪಸ್ಸು ಪಡೆದಾಗ ಕಣದಲ್ಲಿ ಇದೀಗ ರೂಪಾ ಬಸವರಾಜ ಬಾಳಿಕಾಯಿ ಮತ್ತು ಮುರಗೆಪ್ಪ ತುಳಜಪ್ಪ ಅಥಣಿ ಪಕ್ಷೇತರರಾಗಿ ಉಳಿದಿದ್ದಾರೆ. ರೂಪಾ ಅವರು ತಮ್ಮ ಪತಿಯ ನೋವು, ಅವಮಾನದ ವಿರುದ್ಧ ಚುನಾವಣಾ ಕಣದಲ್ಲಿ ನಿಂತು ಗೆಲುವಿಗಾಗಿ ನಿರಂತರ ಶ್ರಮಿಸುತ್ತಿದ್ದರೆನ್ನಲಾಗಿದೆ. ಇನ್ನೊಂದೆಡೆ ಈ ಹಿಂದಿನ ಚುನಾವಣೆಯಲ್ಲಿ ನಿಂತು ಸೋಲನ್ನಪ್ಪಿದ್ದ ಮುರಗೆಪ್ಪನವರು ಅನುಕಂಪದ ಅಲೆ ನನ್ನ ಮೇಲಿದೆಯೆಂದು ತಿಳಿದು ಗೆಲುವಿಗಾಗಿ ಹೋರಾಡುತ್ತಿದ್ದಾರೆನ್ನಲಾಗಿದೆ. ಇವರಿಬ್ಬರ ಮಧ್ಯ ಇದೀಗ ನೇರ ಸ್ಪರ್ಧೆ ಏರ್ಪಟ್ಟಿದೆ. ಗೆಲುವು ಯಾರಿಗೆ ದೊರೆಯುವದೆಂಬುದು ಜನರಿಗೆ ಕುತೂಹಲ ಮೂಡಿಸಿದೆ.
      ಪುರಸಭೆ ಆಡಳಿತ ಪಕ್ಷವಾದ ಬಿಜೆಪಿಯು ತನ್ನ ಅಭ್ಯರ್ಥಿಯನ್ನಾಗಿ ಮುರಗೆಪ್ಪನವರನ್ನು ಕಣಕ್ಕಿಳಿಸಲು ಬಿಜೆಪಿ ಒಂದು ಗುಂಪು ಬಯಸಿತ್ತಾದರೂ, ಕಾರ್ಯಕರ್ತರ ವಿರೋಧದಿಂದಾಗಿ ಸಾಧ್ಯವಾಗಲಿಲ್ಲ. ಆದರೆ, ಬಿಜೆಪಿಯಿಂದ ಯಾವುದೇ ಅಭ್ಯರ್ಥಿಗೆ ಬಿ.ಪಾರಂ ನೀಡಿಲ್ಲವಾಗಿದ್ದರೂ ಪಕ್ಷೇತರರಾಗಿ ಸ್ಪರ್ಧಿಸಿರುವ ಈ ಇಬ್ಬರಲ್ಲಿ ಯಾರೇ ಜಯಗಳಿಸಿದರೂ ಬಿಜೆಪಿಯನ್ನೇ ಪ್ರತಿನಿಧಿಸುವದು ಖಚಿತವೆನ್ನಲಾಗಿದೆ. ಆದರೂ ಮುಂದಿನದು ಹೇಗೆ ಎಂಬುದನ್ನು ಕಾದು ನೋಡಬೇಕಷ್ಟೇ!!

No comments:

Post a Comment

Test

Test 1