ತೇರದಾಳ.03-09-2010
ತೇರದಾಳದ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ಪುರಸಭಾಧ್ಯಕ್ಷೆ ಶಶಿಕಲಾ ಪರಪ್ಪ ಗೌಡರ ಮತ್ತು ಉಪಾಧ್ಯಕ್ಷೆ ಶಾಲವ್ವ ವಿಠ್ಠಲ ಮಾಂಗ ಅವರನ್ನು ಎಸ್ ಡಿ ಎಮ್ ಸಿ. ಶಾಲಾ ಸಿಬ್ಬಂದಿಯವರ ಸನ್ಮಾನಿಸಿದರು. |
'ಶಾಲಾ ಕಂಪೌಂಡ ಎತ್ತರಿಸಲು ಪುರಸಭೆಯಿಂದ ಸಹಾಯ - ಭರವಸೆ'
ಇಲ್ಲಿಯ ಪೇಠಭಾಗದಲ್ಲಿರುವ ಸರಕಾರಿ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ಪುರಸಭಾದ್ಯಕ್ಷೆ ಶಶಿಕಲಾ ಪರಪ್ಪ ಗೌಡರ ಮತ್ತು ಉಪಾಧ್ಯಕ್ಷೆ ಶಾಲವ್ವ ವಿಠ್ಠಲ ಮಾಂಗ ಅವರನ್ನು ಎಸ್‍ಡಿಎಮ್‍ಸಿ, ಶಾಲಾ ಸಿಬ್ಬಂದಿಯವರು ಸನ್ಮಾನಿಸಿದರು.
ಈ ಸಂದರ್ಬದಲ್ಲಿ ಮಾತನಾಡಿದ ಶಶಿಕಲಾ ಗೌಡರ, ಪ್ರಾಥಮಿಕ ಶಾಲೆಗೆ ಅವಶ್ಯವಿರುವ ಕಂಪೌಂಡೆತ್ತರಕ್ಕೆ ಸಂಬಂದಿಸಿದಂತೆ ಪುರಸಭೆಯಿಂದ ಹೆಚ್ಚಿನ ಧನಸಹಾಯ ನೀಡಲಾಗುವುದಲ್ಲದೇ, ಶಾಲಾ ಆಟದ ಮೈದಾನ ನವೀಕರಿಸಲು ಕ್ರಮಕೈಗೊಳ್ಳುವ ಭರವಸೆಯನ್ನು ನೀಡಿದರು.
ಎಸ್‌ಡಿಎಮ್‍ಸಿ ಅಧ್ಯಕ್ಷ ಶ್ರೀಶೈಲ ಮೇಗಾಡಿ ಅಧ್ಯಕ್ಷತೆ ವಹಿಸಿ ಶಾಲಾ ಅಗತ್ಯಗಳಿಗೆ ಸ್ಪಂಧಿಸಲು ಕೋರಿದರು.
ಪೂರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರವಿ ದೊಡಮನಿ. ಎಸ್.ಡಿ.ಎಮ್.ಸಿ., ಉಪಾಧ್ಯಕ್ಷ ಜನ್ನತ್ ಅಸ್ಲಂ ನದಾಫ, ಟಿಎಪಿಸಿಎಮ್‍ಎಸ್ ಅಧ್ಯಕ್ಷ ಷಣ್ಮುಖ ಗಾಡದಿ, ಅಪ್ಪು ಮಂಗಸೂಳಿ, ಮಲ್ಲಪ್ಪ ತುಬಚಿ, ಗಿರಮಲ್ಲಪ್ಪ ಕಾಲತಿಪ್ಪಿ, ರವಿ ಗುಮ್ಮನ್ನವರ, ಧರೆಪ್ಪ ಕಲಕೇರಿ, ರವಿ ಜಮಖಂಡಿ, ರಾಮು ಹಳಿಂಗಳಿ, ಮಹಾದೇವ ಮಾಳೇದ ವೇದಿಕೆಯಲ್ಲಿದ್ದರು.
ಮುದಕನ್ನವರ ಸ್ವಾಗತಿಸಿದರು. ಎ.ಆರ್.ಮುಧೋಳ ನಿರೂಪಿಸಿದರು. ಎಸ್.ಸಿ.ಬಜಂತ್ರಿ ವಂದಿಸಿದರು. ಡಿ.ಇಡಿ. ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
No comments:
Post a Comment