ತೇರದಾಳದ ಐತಿಹಾಸಿಕ ಭಗವಾನ ನೇಮಿನಾಥ ಗೋಂಕ ಜಿನಲಯದಲ್ಲಿ ರವಿವಾರ ಸಂಜೆಯಿಂದ ಆರಂಭಗೊಂಡಿರುವ ದಶಲಕ್ಷಣ ಪರ್ವವನ್ನು ಜವಳಿ ವ್ಯಾಪರಿ ಪ್ರಕಾಶ ಬಾಬಗೊಂಡ ಉದ್ಘಾಟಿಸಿದರು. ಉಡಕೇರಿ ಶ್ರೀಧರ ಪಾಟೀಲ. ಪರಪ್ಪ ನಂದಗಾಂವ, ರಾಜು ಸವದತ್ತಿ ಚಿತ್ರದಲ್ಲಿದ್ದಾರೆ.
ಚಿನ್ನದ ಪದಕ ಪಡೆದ ಯುವಕನಿಗೆ ಸನ್ಮಾನ
ತೇರದಾಳದ ಐತಿಹಾಸಿಕ ಭಗವಾನ ನೇಮಿನಾಥ ಗೋಂಕ ಜಿನಾಲಯದಲ್ಲಿ ರವಿವಾರ ಸಂಜೆಯಿಂದ ಆರಂಭಗೊಂಡಿರುವ ದಶಲಕ್ಷಣ ಪರ್ವದಲ್ಲಿ ಚೆನೈ ಅಣ್ಣಾ ವಿಶ್ವವಿದ್ಯಾನಿಲಯದಿಂದ ಎಮ್‍ಟೆಕನಲ್ಲಿ ಪ್ರಥಮ ರ‍್ಯಾಂಕ್ ಗಳಿಸಿ ಚಿನ್ನದ ಪದಕ ಪಡೆದ ಸ್ಥಳೀಯ ಯುವ ಪ್ರತಿಭಾನ್ವಿತ ರಾಜು ಪರಪ್ಪ ಸವದತ್ತಿಯವರನ್ನು ಗೋಂಕ ಜಿನಾಲಯದ ವತಿಯಿಂದ ಸನ್ಮಾನಿಸಲಾಯಿತು. ಭೂಪಾಲ ನಾರಿಗೊಂಡ, ಸದಲಗಿ, ಶ್ರೀಧರ ಪಾಟೀಲ ಚಿತ್ರದಲ್ಲಿದ್ದಾರೆ. |
ಭಾದ್ರಪದ ಮಾಸ ಎಲ್ಲ ಮಾಸಗಳಿಗೆ ಚಕ್ರವರ್ತಿಯಾಗಿದೆ. ಈ ಮಾಸದಲ್ಲಿ ಆಚರಿಸುವ ದಶಲಕ್ಷಣ ಪರ್ವವು ಅತ್ಮನನ್ನು ಶುದ್ದಿಕರಿಸುವುದಾಗಿದೆ. ಈ ಪರ್ವದಲ್ಲಿ ಲೀನವಾಗಿ ಆಚರಿಸಿದರೆ ಸಾರ್ಥಕತೆ ಉಂಟಾಗಿ ಆತ್ಮಕಲ್ಯಾಣವಾಗುವುದೆಂದು ಉಡಕೇರಿಯ ಶ್ರೀಧರ ಪಾಟೀಲ ರವಿವಾರ ರಾತ್ರಿ ಹೇಳಿದರು.
ಇಲ್ಲಿಯ ಐತಿಹಾಸಿಕ ಭಗವಾನ ನೇಮಿನಾಥ ಗೋಂಕ ಜಿನಾಲಯದಲ್ಲಿ ಆರಂಭಗೊಂಡಿರುವ ದಶಲಕ್ಷಣ ಪರ್ವವನ್ನುದ್ದೇಶಿಸಿ ಉತ್ತಮ ಕ್ಷಮಾ ಧರ್ಮದ ಕುರಿತು ಉಪನ್ಯಾಸ ನೀಡಿದ ಅವರು ಕ್ಷಮಾದಿಂದ ಪ್ರಗತಿ, ಕ್ರೋದದಿಂದ ಅವನತಿಯಾಗುವದು. ಅಹಂಕಾರ,ಕ್ರೋಧ್, ಲೋಭದಿಂದ ಹಾನಿಯೇ ಜಾಸ್ತಿಯಾಗುವದೆಂದು ಅಭಿಪ್ರಾಯಪಟ್ಟರು.
ಪ್ರಗತಿಪರ ರೈತ ಪರಪ್ಪ ಭ.ನಂದಗಾಂವರ ಅಧ್ಯಕ್ಷತೆಯಲ್ಲಿ, ಸ್ಥಳಿಯ ಜವಳಿ ವ್ಯಾಪಾರಿ ಪ್ರಕಾಶ ಬಾಬಗೊಂಡ ದಶಲಕ್ಷಣ ಪರ್ವವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಶುಭ ಕೋರಿದರು.
ಇದೇ ಸಂದರ್ಭದಲ್ಲಿ ಚೆನೈ ಅಣ್ಣಾ ವಿಶ್ವವಿದ್ಯಾನಿಲಯದಿಂದ ಎಮ್‍ಟೆಕ್‍ನಲ್ಲಿ ಪ್ರಥಮ ರ‍್ಯಾಂಕ್ ಗಳಿಸಿ ಚಿನ್ನದ ಪದಕ ಪಡೆದ ಸ್ಥಳೀಯ ಯುವ ಪ್ರತಿಭಾನ್ವಿತ ರಾಜು ಪರಪ್ಪ ಸವದತ್ತಿಯವರನ್ನು ಗೋಂಕ ಜಿನಾಲಯದ ವತಿಯಿಂದ ಸನ್ಮಾನಿಸಲಾಯಿತು.
No comments:
Post a Comment