ಚಿತ್ರ ವರದಿ: ಮ.ಕೃ. ಮೇಗಾಡಿ, ತೇರದಾಳ. ೯೮೪೪೦೮೮೧೩೩
೧)ತೇರದಾಳದಲ್ಲಿ ಹೋದ ವರ್ಷ ನಡೆದ ಕುಸ್ತಿಪಂದ್ಯಾವಳಿಯ ದೃಶ್ಯ |
೨)ಸೇರಿದ್ದ ಅಪಾರ ಜನಸ್ಥೋಮ |
ಇಂದಿನ ವಿಜ್ಞಾನ ತಂತ್ರಜ್ಞಾನ ಕಂಪ್ಯೂಟರ ಯುಗದಲ್ಲಿ ಕ್ರಿಕೆಟ, ಟೆನಿಸ, ಚೆಸ್‍ನಂತಹ ತಾರಾ ವರ್ಚಸ್ಸಿನ ಕ್ರೀಡೆಗಳ ಭರಾಟೆಯಲ್ಲಿ ಗ್ರಾಮೀಣ ಕ್ರೀಡೆಗಳಾದ ಕಬಡ್ಡಿ, ಕುಸ್ತಿ, ಖೋ ಖೋ, ಪಗಡೆಯಾಟಗಳು ಮಸುಕಾಗಿವೆ ಎಂಬ ಕೊರಗನ್ನು ತೇರದಾಳದ ಹಿರಿಯರು ಸುಳ್ಳು ಮಾಡಿ, ಕುಸ್ತಿಗೆ ಮಾನ್ಯತೆ ನೀಡಿ ಅದರ ಉಳಿವಿಗೆ ಟೊಂಕಕಟ್ಟಿ ನಿಂತಿದ್ದಾರೆ. ಬೇರೆ ಬೇರೆ ರಾಜ್ಯಗಳ ಕುಸ್ತಿಪಟುಗಳನ್ನು ಖ್ಯಾತ ಕುಸ್ತಿಪಟುಗಳನ್ನು ಕರೆಯಿಸಿ, ಉಚಿತವಾಗಿ ಅಭಿಮಾನಿಗಳಿಗೆ ತೋರಿಸಿ ಸಂಭ್ರಮಿಸುತ್ತಾರೆ. ನೋಡುಗರು ಖುಷಿ ಪಡುತ್ತಾರೆ.
ಪ್ರತಿ ವರ್ಷದಂತೆ ಈ ವರ್ಷವೂ ಶ್ರಾವಣ ಮಾಸದ ಕೊನೆಯ ಸೋಮವಾರ ನಡೆಯುವ ಶ್ರೀಅಲ್ಲಮಪ್ರಭುದೇವರ ಜಾತ್ರೆಯಂಗವಾಗಿ ಜಾತ್ರೆಯ ಮರುದಿನ ಮಂಗಳವಾರ ದಿ.೭ರಂದು ಅಸಂಖ್ಯಾತ ಕುಸ್ತಿ ಅಭಿಮಾನಿಗಳ ಸಮ್ಮುಖದಲ್ಲಿ ಅಂತರಾಜ್ಯ ಕುಸ್ತಿ ಪಂದ್ಯವಳಿ ನಡೆಯುವದು. ಈ ಬಾರಿ ಕುಸ್ತಿ ಪಂದ್ಯಾವಳಿ ಉದ್ಘಾಟನೆಗೆ ಹರಗುರುಚರಮೂರ್ತಿಗಳು, ರಾಜ್ಯದ ಸಚಿವರು, ಶಾಸಕರು ಆಗಮಿಸಲಿದ್ದಾರೆ.
ಕರ್ನಾಟಕ, ಮಹಾರಾಷ್ಟ್ರ, ಪಂಜಾಬ, ಮಧ್ಯಪ್ರದೇಶ, ದಿಲ್ಲಿ, ಗೋವಾ ರಾಜ್ಯಗಳಿಂದ ಕುಸ್ತಿಪಟುಗಳು ಆಗಮಿಸಿ ತಮ್ಮ ತೋಳ್ಬಲ, ಚಾಕ್ಯತೆ, ಕೌಶಲ್ಯ ತೋರಿಸಲಿದ್ದಾರೆ.
No comments:
Post a Comment