Sunday, September 5, 2010

ಕೈಮಗ್ಗ ಉತ್ಪನ್ನಗಳನ್ನು ಖರೀದಿಸಿ ನೇಕಾರರಿಗೆ ಪ್ರೋತ್ಸಾಹಿಸಲು ಕರೆ

ತೇರದಾಳ: 04-09-2010
ತೇರದಾಳದ ಶ್ರೀಮಂತ ಮಗದುಮ್ ಕಾಂಪ್ಲೆಕ್ಸ್‍ನಲ್ಲಿ ಶನಿವಾರದಿಂದ
ಆರಂಭಗೊಂಡ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ
ಶಿಬಿರವನ್ನು ಪುರಸಭಾಧ್ಯಕ್ಷಎ ಶಶಿಕಲಾ ಗೌಡರ ಉದ್ಘಾಟಿಸಿದರು.
 ದೇವೇಂದ್ರ ಸಂಕಾನಟ್ಟಿ, ಶಿವಾನಂದ ಕಲಾದಗಿ,
ಎಮ್.ಸಿ.ಮಹಾದೇವಯ್ಯ, ಎಸ್.ಜಿ.ಒಂಟಿ
ಇನ್ನಿತರರು ಚಿತ್ರದಲ್ಲಿದ್ದಾರೆ.




ಕೈಮಗ್ಗ ನೇಕಾರರಿಗೆ ವಿವಿಧ ರೀತಿಯ ತರಬೇತಿಗಳನ್ನು ಸಂಘಟಿಸುವುದರ ಮೂಲಕ, ಅವರನ್ನು ಆರ್ಥಿಕವಾಗಿ ಸಬಲಗೊಳಿಸುಬ ದೃಷ್ಟಿಯಿಂದ ಅಭಿವೃದ್ಧಿ ಯೋಜನೆ ಸರಕಾರದಿಂದ ಜಾರಿಯಾಗಿದೆ. ಗ್ರಾಹಕರು ಕೈಮಗ್ಗ ಉತ್ಪನ್ನಗಳನ್ನು ಖರೀದಿಸಿ ನೇಕಾರರಿಗೆ ಪ್ರೋತ್ಸಾಹಿಸಬೇಕೆಂದು ಯೋಜನಾ ಆಡಳಿತಾಧಿಕಾರಿ ದೇವೇದ್ರ ಸಂಕಾನಟ್ಟಿ ರಬಕವಿ, ಇಂದಿಲ್ಲಿ ಹೇಳಿದರು


ಇಲ್ಲಿಯ ಶ್ರೀಮಂತ ಮಗದುಮ್ ಕಾಂಪ್ಲೆಕ್ಸ್‍ನಲ್ಲಿ ಕೇಂದ್ರ ಕೈಮಗ್ಗ ಜವಳಿ ಮಂತ್ರಾಲಯ ಹೊಸದೆಹಲಿ, ಕೈಮಗ್ಗಜವಳಿ ಇಲಾಖೆ ಬೆಂಗಳೂರು ಹಾಗೂ ಬನಗಟ್ಟಿಯ ಸಮಗ್ರ ಕೈಮಗ್ಗ ಅಭಿವೃದ್ಧಿ ಯೋಜನೆಯಡಿ ಇಂದಿನಿಂದ ದಿ.೧೧ರವರೆಗೆ ನಡೆಯುವ ಬನಹಟ್ಟಿ ಕ್ಲಸ್ಟರ್‌ನಿಂದ ಕೈಮಗ್ಗ ಉತ್ಪನ್ನಗಳ ವಿಶಿಷ್ಟ ಸಂಗ್ರಹಗಳ ಪ್ರದರ್ಶನ ಮತ್ತು ಮಾರಾಟ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಕೈಮಗ್ಗ ನೇಕಾರರಿಗೆ, ವೈಯಕ್ತಿಕ ನೇಕಾರರಿಗೆ, ಮಾಲೀಕ ನೇಕಾರರಿಗೆ ಈ ಯೋಜನೆಯಡಿ ಸಲಕರಣೆ, ವಿನ್ಯಾಸ ತಯಾರಿಕೆ ಹೀಗೆ ವಿವಿಧ ರೀತಿಯಾಗಿ ತರಬೇತಿಯನ್ನು ಆಯೋಜಿಸಿ ತಿಳುವಳಿಕೆ ನೀಡುವುದರಿಂದ ಆರ್ಥಿಕವಾಗಿ ಸಬಲರನ್ನಾಗಿಸಲು ಸಾಧ್ಯವಿದೆಯೆಂದರು.

ಪುರಸಭಾಧ್ಯಕ್ಷೆ ಶಶಿಕಲಾ ಪರಪ್ಪ ಗೌಡರ ಜ್ಯೋತಿ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿ ಗ್ರಾಹಕರು ಈ ಶಿಬಿರದ ಲಾಭ ಪಡೆದುಕೊಳ್ಳಲು ಸಲಹೆಯನ್ನಿತ್ತರು.

ಶಿಬಿರದಲ್ಲಿ ನೈಪುಣ್ಯತೆಯುಳ್ಳ ನೇಕಾರರಿಂದ ತಯಾರಿಸಲ್ಪಟ್ಟ, ವಿನ್ಯಾಸ, ವರ್ಣಗಳುಳ್ಳ ರೇಶ್ಮೆ, ಹತ್ತಿ ಸೀರೆಗಳು, ಲುಂಗಿ, ಟಾವೆಲ್, ಬೆಡ್‍ಶಿಟ್, ಹೊದಿಕೆ ಬಟ್ಟೆ, ಸೋಹಮ್ ಶರ್ಟ್‍ಗಳು ರಿಯಾಯಿತಿ ದರದಲ್ಲಿ ಕೈಮಗ್ಗ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆಯೆಂದು ಸಮೂಹ ಅಭಿವೃದ್ಧಿ ಅಧಿಕಾರಿ ಶಿವಾನಂದ ಕಲಾದಗಿ ಹೇಳಿದರು.

ಎಸ್.ಜಿ.ಒಂಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಎಸ್.ಎನ್.ಬಿಡಕರ್, ಬಿ.ಎಸ್.ಹಿರೇಮಠ, ಕೆ.ಕೆ.ನಡಗಡ್ಡಿ ಹಾಜರಿದ್ದರು.

ಪಾರಗಾಂವಕರ ಸ್ವಾಗತಿಸಿ ವಂದಿಸಿದರು.

No comments:

Post a Comment

Test

Test 1