Thursday, March 27, 2014

ಮೋದಿಯವರನ್ನು ಪ್ರಧಾನಿಯನ್ನಾಗಿಸಲು ಬಿಜೆಪಿ ಗೆಲುವಿಗೆ ಶ್ರಮಿಸಲು ಗದ್ದಿಗೌಡರ ಕರೆ



ತೇರದಾಳದ ಇಮ್ರಾನ್ ನದಾಫ ಅವರ ತೋಟದಲ್ಲಿ ಬುಧವಾರ ನಡೆದ ಕೆಜೆಪಿಯಿಂದ ಬಿಜೆಪಿಗೆ ಆಗಮಿಸಿದ ಕಾರ್ಯಕರ್ತರ ಸಭೆಯನ್ನುದ್ಧೇಶಿಸಿ ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿದರು.


ತೇರದಾಳದ ಇಮ್ರಾನ್ ನದಾಫ ಅವರ ತೋಟದಲ್ಲಿ ಬುಧವಾರ ನಡೆದ ಕೆಜೆಪಿಯಿಂದ ಬಿಜೆಪಿಗೆ ಆಗಮಿಸಿದ ಕಾರ್ಯಕರ್ತರ ಸಭೆಯನ್ನುದ್ಧೇಶಿಸಿ ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಬಾಳಿಕಾಯಿ ಮಾತನಾಡಿದರು.


ಬುಧವಾರ ತೇರದಾಳಕ್ಕೆ ಆಗಮಿಸಿದ ಬಿಜೆಪಿ ಅಭ್ಯಥರ್ಿ ಪಿ.ಸಿ.ಗದ್ದಿಗೌಡರ ಹಾಗೂ ಮಾಜಿ ಶಾಸಕ ಸಿದ್ದು ಸವದಿಯವರು ಡಾ.ಬಿ.ಆರ್.ಅಂಬೇಡ್ಕರ್ರ ಕಂಚಿನ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.


ತೇರದಾಳ : ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಕಾರ್ಯಕರ್ತರು ಪ್ರಾಮಾಣಿಕವಾಗಿ ಬಿಜೆಪಿ ಪಕ್ಷದ ಗೆಲುವಿಗೆ ಶ್ರಮಿಸಬೇಕು. ಮುಂದಿನ ಪ್ರಧಾನಿ ನರೇಂದ್ರ ಮೋದಿಯವರಾಗಬೇಕು. ಆ ನಿಟ್ಟಿನಲ್ಲಿ ಕಾರ್ಯಕರ್ತರು ಪಕ್ಷ ಸಂಘಟನೆ ಜೊತೆಗೆ ಮತದಾರರಿಗೆ ಸರಿಯಾಗಿ ತಿಳುವಳಿಕೆ ನೀಡುವ ಮೂಲಕ ಪಕ್ಷದ ಗೆಲುವಿಗೆ ಬದ್ಧರಾಗಬೇಕೆಂದು ಬಾಗಲಕೋಟ ಲೋಕಸಭಾ ಬಿಜೆಪಿ ಅಭ್ಯಥರ್ಿ ಪಿ.ಸಿ.ಗದ್ದಿಗೌಡರ ಹೇಳಿದರು.
ಇಲ್ಲಿಯ ಇಮ್ರಾನ್ ನದಾಫ ಅವರ ತೋಟದಲ್ಲಿ ನಡೆದ ಕೆಜೆಪಿಯಿಂದ ಬಿಜೆಪಿಗೆ ಆಗಮಿಸಿದ ಕಾರ್ಯಕರ್ತರ ಸಭೆಯನ್ನುದ್ಧೇಶಿಸಿ ಮಾತನಾಡಿದ ಅವರು ಕಾರ್ಯಕರ್ತರ ಸಮಸ್ಯೆಗಳಿಗೆ, ಜನಪರ ಕಾರ್ಯಗಳಿಗೆ ಸದಾ ಸ್ಪಂಧಿಸಲಾಗುವುದೆಂದರು.
ಮಾಜಿ ಶಾಸಕ ಸಿದ್ದು ಸವದಿ ಮಾತನಾಡಿ ದೇಶದ ಅಭಿವೃದ್ಧಿಗಾಗಿ, ಮೋದಿಯವರನ್ನು ಪ್ರಧಾನಿಯನ್ನಾಗಿಸಲು ಪಕ್ಷದ ಕಾರ್ಯಕರ್ತರು ದುಡಿಯಬೇಕೆಂದು ಕರೆಯಿತ್ತರು.
ಸ್ಥಳೀಯ ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಬಾಳಿಕಾಯಿ ಪ್ರಾಸ್ತಾವಿಕವಾಗಿ ಮಾತನಾಡಿ ಹಿಂದೇ ತಮಗೆ ಸಾಕಷ್ಟು ತೊಂದರೆಗಳಾಗಿದ್ದರೂ, ಆದ ನೋವುಗಳನ್ನೆಲ್ಲ ಮರೆತು ಮೋದಿಯವರಿಗಾಗಿ ಬಿಜೆಪಿ ಗೆಲುವಿಗೆ ಪ್ರಾಮಾಣಿಕವಾಗಿ ದುಡಿಯುತ್ತೇವೆ ಎಂದರು. ಮುಂದಿನ ದಿನಗಳಲ್ಲಿ ಕಾರ್ಯಕರ್ತರ ಬೇಕು ಬೇಡಿಕೆಗಳಿಗೆ ನೇರವಾಗಿ ಸಂಪಕರ್ಿಸಲಾಗುವುದೆಂದರು.
ಬಸಪ್ಪ ಮುಕರಿ, ನ್ಯಾಯವಾದ ವಿನೋದ ಪತ್ತಾರ, ಇಮ್ರಾನ ನದಾಫ, ಸುರೇಶ ತಳ್ಳಿ, ಸುರೇಶ ಅಕಿವಾಟ, ಅಲ್ಲಯ್ಯ ದೊಡಮನಿ, ಸತ್ಯಪ್ಪ ಮಹಿಷವಾಡಗಿ, ರಾಜು ಮುಕ್ಶಟ್ಟಿ, ಇಬ್ರಾಹಿಮ್ ಹನಗಂಡಿ, ಈಶ್ವರ ಕಾಡದೇವರ, ಶಂಕರ ಹೊಸಮನಿ ಪಾಲ್ಗೊಂಡಿದ್ದರು.
ಮಲಾಬಾದಿ ಸ್ವಾಗತಿಸಿ, ನಿರೂಪಿಸಿದರು. ರಾಜು ಸರಿಕರ ವಂದಿಸಿದರು. ತೇರದಾಳ, ರಬಕವಿ-ಬನಹಟ್ಟಿ, ಬಿಸನಾಳ, ಮದಬಾಂವಿ, ಕೆಸರಗೊಪ್ಪ ಗ್ರಾಮಗಳಿಂದ ನೂರಾರು ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.


No comments:

Post a Comment

Test

Test 1