Saturday, November 17, 2012

Nov 6, 2012 In Terdal Streets



ಚಿಮ್ಮಡ ಸರಕಾರಿ ಕನ್ನಡ ಕವಟಿ ತೋಟದ ಶಾಲೆಯಲ್ಲಿ ನಲಿ ಕಲಿ ಸಮಾವೇಶದಲ್ಲಿ ಸಿ.ಆರ್.ಪಿ  ಬಿ.ವೈ.ಪೂಜೇರಿ ಮಾತನಾಡಿದರು.
ನಲಿಕಲಿ ಮಕ್ಕಳಲ್ಲಿ ಸಂತಸವನ್ನುಂಟು ಮಾಡುವದು-ಪೂಜಾರಿ 
ತೇರದಾಳ : ವೈವಿಧ್ಯಮಯ ಚಟುವಟಿಕೆಗಳು, ಹಾಡು, ಕುಣಿತ, ಸರಳ ಪ್ರಯೋಗಗಳ ಮೂಲಕ ಮಕ್ಕಳ ಮನಸ್ಸನ್ನು ಆಕರ್ಷಿಸುವ  ನಲಿ ಕಲಿ ಸಂತಸದಾಯಕ ಕಲಿಕೆಯಾಗಿದೆಯೆಂದು ಸಿಆರ್ಪಿ ಬಿ.ವೈ.ಪೂಜಾರಿ ಹೇಳಿದರು.
  
ಸಮಿಪದ ಚಿಮ್ಮಡ ಗ್ರಾಮದ ಸರಕಾರಿ ಕನ್ನಡ ಕಿರಿಯ ಪ್ರಾಥಮಿಕ ಕವಟಿ ತೋಟದಲ್ಲಿ ನಲಿಕಲಿ ಸಮಾವೇಶವನ್ನುದ್ಧೇಶಿಸಿ ಮಾತನಾಡಿದರು.

ಎಸ್ಡಿಎಮ್ಸಿ ಉಪಾಧ್ಯಕ್ಷ ಗುರುಬಸು ಮುಗಳಖೋಡ ಅಧ್ಯಕ್ಷತೆ ವಹಿಇಸಿದ್ದರು.
ಎಸ್.ಎಂ.ಅಮ್ಮಣಗಿ(ಕನ್ನಡ), ಎ.ಎಫ್.ಹೂಲಿ (ಇಂಗ್ಲೀಷ), ಎಲ್.ಎಮ್.ಮಾದರ(ಗಣಿತ), ಮ.ಕೃ.ಮೇಗಾಡಿ(ಪರಿಸರ ಅಧ್ಯಯನ) ವಿಷಯದ ಮೇಲೆ ಮಾದರಿಪಾಠಗಳನ್ನು ನೀಡಿದರು.
ಶ್ರೀಮತಿ ಪಿ.ಕೆ.ಜಾಧವ, ಮಂಜುಳಾ ಐಹೊಳ್ಳಿ ವೇದಿಕೆಯಲ್ಲಿದ್ದರು. ರಾಧಾ ಪ್ರಾರ್ಥಿಸಿದರು . ಆರ್.ಎಂ.ಹೊಸಮನಿ ನಿರೂಪಿಸಿದರು.


ತೇರದಾಳ ವಾರ್ಡ  ನಂ-18ರಲ್ಲಿ ಪುರಸಭೆ ನಿರ್ಲಕ್ಷ್ಯದಿಂದ ಸ್ವಚ್ಚಗೊಳ್ಳದ ಚರಂಡಿ ತೋರಿಸುತ್ತಿರುವ ಮಹಿಳೆಯರು.

ಚರಂಡಿ ದುರಸ್ತಿಗೊಳಿಸಲು ಮಹಿಳೆಯರ ಆಗ್ರಹ

ತೇರದಾಳ:   ಪಟ್ಟಣದ ಹಲವೆಡೆಗಳಲ್ಲಿ ಪುರಸಭೆಯವರು ಚರಂಡಿ  ಮಾಡಿದ್ದಾರೆ. ಆದರೆ ಅವು ವ್ಯವಸ್ಥಿತವಾಗಿ, ಸರಿಯಾಗಿ ಆಗದ ಕಾರಣ ಚರಂಡಿಗೆ ಹರಿದು ಬರುವ ನೀರು ಮುಂದೆ ಹೋಗದೆ, ಅಲ್ಲಿಯೇ ನಿಂತು ಕಸ, ಕಡ್ಡಿ, ಕಾಗದ ತುಂಬಿ ಹೋಗಿ ಗಬ್ಬದ್ದು ನಾರುತ್ತಿವೆ. ಸೊಳ್ಳೆಗಳು ಹರಡಿ ರೋಗಗಳಿಗೆ ಆಹ್ವಾನ ನೀಡಿದಂತಾಗಿದೆಯೆಂದು ವಾರ್ಡ  ನಂ.18ರಲ್ಲಿರುವ ಮಹಿಳೆಯರು ಹೇಳುತ್ತಿದ್ದಾರೆ.

ಚರಂಡಿ ಅಭಿವೃದ್ಧಿ ಕೆಲಸಗಳನ್ನು ಸಂಬಂಧಿಸಿದ ಗುತ್ತಿಗೆದಾರರು ತಮ್ಮ ಮನ ಬಂದಂತೆ ನಿರ್ಮಾಣ  ಕೆಲಸ ಮಾಡಿ ಕೈ ತೊಳೆದುಕೊಂಡಿದ್ದಾರೆಂದು ಆರೋಪಿಸಲಾಗಿದೆ.   
ಎರಡು ದಿನಕೊಮ್ಮೆ ಸರಬರಾಜಾಗುವ ನೀರು ಹತ್ತು ಕೊಡ ತುಂಬುವಷ್ಟರಲ್ಲಿ ನಿಂತೆ ಹೋಗಿರುತ್ತದೆ. ಇನ್ನು ಚರಂಡಿ ನೀರು ಹರಿದು ಹೋಗುವುದೆಂತು? ಇದರಿಂದ ಹಗಲು-ರಾತ್ರಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ, ಇಲ್ಲಿ ವಾಸಿಸುವುದು ಕಠಿಣವಾಗಿದೆ ಎನ್ನುತ್ತಾರೆ, ಈ ವಾಡರ್ಿನ ಮಹಿಳೆಯರಾದ ಶಾಂತಾ ಗಾಡಿವಡ್ಡರ, ಪರ್ಶನಾ ಇನಾಮದಾರ, ಮೈರಾಜ ಜಮಾದಾರ, ನಾಗವ್ವ ಗಾಡಿವಡ್ಡರ, ಕೃಷ್ಣಾಬಾಯಿ ಲೋಹಾರ, ಗೋದವ್ವ ಗಾಡಿವಡ್ಡರ, ಹಣಮವ್ವ ಗಾಡಿವಡ್ಡರ ಮತ್ತಿತರರು ಹೇಳುತ್ತಾರೆ. 
  ನೀರು ಸರಿಯಾಗಿ ಹರಿದು ಹೋಗುವಂತೆ ಚರಂಡಿ ನಿರ್ಮಾಣ ಮಾಡಬೇಕು. ಪುರಸಭೆಯವರು ಅದರ ಸ್ವಚ್ಚತೆಗೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಈ ವಾರ್ಡಿನ  ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು. ಈ ವಾರ್ಡದಲ್ಲಿರುವ ಮಹಿಳಾ ಶೌಚಾಲಯಕ್ಕೆ ಪುರಸಭೆಯವರು ನೀರಿನ ವ್ಯವಸ್ಥೆ ಕಲ್ಪಿಸಬೇಕು. ಪ್ರತಿದಿನ ಕುಡಿಯುವ ನೀರಿನ ಪೂರೈಕೆಯಾಗಬೇಕು.
         ಈ ಕುರಿತು ವಾರ್ಡನ ಮಹಿಳಾ ಸದಸ್ಯೆ ಶೋಭಾ ಮಲ್ಲಪ್ಪ ಮನ್ಮಿಯವರ ಹಾಗೂ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲವೆಂದು ನಾಗರಿಕರು ತಿಳಿಸಿದ್ದಾರೆ. 



No comments:

Post a Comment

Test

Test 1