Sunday, September 5, 2010

ಶಾಂತಿ ಸೌಹಾರ್ಧತೆಯಿಂದ ಜಾತ್ರೆ, ರಮಜಾನ್ ಹಬ್ಬ ಆಚರಿಸಲು ಕರೆ

ತೇರದಾಳ:

ತೇರದಾಳದ ಪೋಲಿಸ್ ಠಾಣೆಯಲ್ಲಿ ನಡೆದ ಜಾತ್ರೆ, ರಮಜಾನ್ ಹಬ್ಬದ ಶಾಂತಿ ಸಭೆಯನ್ನುದ್ಧೇಶಿಸಿ ಪಿಎಸ್‍ಐ ಆರ್.ಆರ್.ಪಾಟಿಲ ಮಾತನಾಡಿದರು.
ಪಟ್ಟಣದಲ್ಲಿ ಶಾಂತಿ ಸೌಹಾರ್ಧತೆ ನೆಲೆಸಲು ಪೊಲೀಸರೊಂದಿಗೆ ನಾಗರಿಕರು ಸಹಕರಿಸಬೇಕು. ಯಾವುದೇ ಧರ್ಮದ ಹಬ್ಬವೇ ಇರಲಿ, ಜಾತ್ರೆಯೇ ಇರಲಿ ಸಾರ್ವಜನಿಕರು ಕೋಮು ಸಾಮರಸ್ಯದೊಂದಿಗೆ, ಸಹಕಾರದೊಂದಿಗೆ ಹಬ್ಬಗಳನ್ನು ಆಚರಿಸಿದಾಗ ಅದಕ್ಕೊಂದು ಮಹತ್ವ ಬರುವದೆಂದು ಪಿಎಸ್‍ಐ ಆರ್.ಆರ್.ಪಾಟೀಲ ಇಂದಿಲ್ಲಿ ಹೇಳಿದರು.

ಪುರಸಭಾಧ್ಯಕ್ಷೆ ಶಶಿಕಲಾ ಪರಪ್ಪ ಗೌಡರ ಅಧ್ಯಕ್ಷತೆ ವಹಿಸಿದ್ದರು.

ಪ್ರವೀಣ ಪಿ. ನಾಡಗೌಡ, ಆನಂದ ನಡುವಿನಕೇರಿ, ಬಸವರಾಜ ಬಾಳಿಕಾಯಿ, ಮಲ್ಲು ತುಬಚಿ, ಪುರಸಭಾಸದಸ್ಯ ಅಜೀತ ಮಗದುಮ್, ನೇಮಣ್ಣ ಸಾವಂತನವರ್, ಅಪ್ಪಾಸಾಬ ಆಲಗೂರ, ಜಿಲಾಣಿ ಜಮಾದಾರ್ ಮಾತನಾಡಿದರು.

ಕೈಮಗ್ಗ ಉತ್ಪನ್ನಗಳನ್ನು ಖರೀದಿಸಿ ನೇಕಾರರಿಗೆ ಪ್ರೋತ್ಸಾಹಿಸಲು ಕರೆ

ತೇರದಾಳ: 04-09-2010
ತೇರದಾಳದ ಶ್ರೀಮಂತ ಮಗದುಮ್ ಕಾಂಪ್ಲೆಕ್ಸ್‍ನಲ್ಲಿ ಶನಿವಾರದಿಂದ
ಆರಂಭಗೊಂಡ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ
ಶಿಬಿರವನ್ನು ಪುರಸಭಾಧ್ಯಕ್ಷಎ ಶಶಿಕಲಾ ಗೌಡರ ಉದ್ಘಾಟಿಸಿದರು.
 ದೇವೇಂದ್ರ ಸಂಕಾನಟ್ಟಿ, ಶಿವಾನಂದ ಕಲಾದಗಿ,
ಎಮ್.ಸಿ.ಮಹಾದೇವಯ್ಯ, ಎಸ್.ಜಿ.ಒಂಟಿ
ಇನ್ನಿತರರು ಚಿತ್ರದಲ್ಲಿದ್ದಾರೆ.




ಕೈಮಗ್ಗ ನೇಕಾರರಿಗೆ ವಿವಿಧ ರೀತಿಯ ತರಬೇತಿಗಳನ್ನು ಸಂಘಟಿಸುವುದರ ಮೂಲಕ, ಅವರನ್ನು ಆರ್ಥಿಕವಾಗಿ ಸಬಲಗೊಳಿಸುಬ ದೃಷ್ಟಿಯಿಂದ ಅಭಿವೃದ್ಧಿ ಯೋಜನೆ ಸರಕಾರದಿಂದ ಜಾರಿಯಾಗಿದೆ. ಗ್ರಾಹಕರು ಕೈಮಗ್ಗ ಉತ್ಪನ್ನಗಳನ್ನು ಖರೀದಿಸಿ ನೇಕಾರರಿಗೆ ಪ್ರೋತ್ಸಾಹಿಸಬೇಕೆಂದು ಯೋಜನಾ ಆಡಳಿತಾಧಿಕಾರಿ ದೇವೇದ್ರ ಸಂಕಾನಟ್ಟಿ ರಬಕವಿ, ಇಂದಿಲ್ಲಿ ಹೇಳಿದರು


ಇಲ್ಲಿಯ ಶ್ರೀಮಂತ ಮಗದುಮ್ ಕಾಂಪ್ಲೆಕ್ಸ್‍ನಲ್ಲಿ ಕೇಂದ್ರ ಕೈಮಗ್ಗ ಜವಳಿ ಮಂತ್ರಾಲಯ ಹೊಸದೆಹಲಿ, ಕೈಮಗ್ಗಜವಳಿ ಇಲಾಖೆ ಬೆಂಗಳೂರು ಹಾಗೂ ಬನಗಟ್ಟಿಯ ಸಮಗ್ರ ಕೈಮಗ್ಗ ಅಭಿವೃದ್ಧಿ ಯೋಜನೆಯಡಿ ಇಂದಿನಿಂದ ದಿ.೧೧ರವರೆಗೆ ನಡೆಯುವ ಬನಹಟ್ಟಿ ಕ್ಲಸ್ಟರ್‌ನಿಂದ ಕೈಮಗ್ಗ ಉತ್ಪನ್ನಗಳ ವಿಶಿಷ್ಟ ಸಂಗ್ರಹಗಳ ಪ್ರದರ್ಶನ ಮತ್ತು ಮಾರಾಟ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಕೈಮಗ್ಗ ನೇಕಾರರಿಗೆ, ವೈಯಕ್ತಿಕ ನೇಕಾರರಿಗೆ, ಮಾಲೀಕ ನೇಕಾರರಿಗೆ ಈ ಯೋಜನೆಯಡಿ ಸಲಕರಣೆ, ವಿನ್ಯಾಸ ತಯಾರಿಕೆ ಹೀಗೆ ವಿವಿಧ ರೀತಿಯಾಗಿ ತರಬೇತಿಯನ್ನು ಆಯೋಜಿಸಿ ತಿಳುವಳಿಕೆ ನೀಡುವುದರಿಂದ ಆರ್ಥಿಕವಾಗಿ ಸಬಲರನ್ನಾಗಿಸಲು ಸಾಧ್ಯವಿದೆಯೆಂದರು.

ಪುರಸಭಾಧ್ಯಕ್ಷೆ ಶಶಿಕಲಾ ಪರಪ್ಪ ಗೌಡರ ಜ್ಯೋತಿ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿ ಗ್ರಾಹಕರು ಈ ಶಿಬಿರದ ಲಾಭ ಪಡೆದುಕೊಳ್ಳಲು ಸಲಹೆಯನ್ನಿತ್ತರು.

ಶಿಬಿರದಲ್ಲಿ ನೈಪುಣ್ಯತೆಯುಳ್ಳ ನೇಕಾರರಿಂದ ತಯಾರಿಸಲ್ಪಟ್ಟ, ವಿನ್ಯಾಸ, ವರ್ಣಗಳುಳ್ಳ ರೇಶ್ಮೆ, ಹತ್ತಿ ಸೀರೆಗಳು, ಲುಂಗಿ, ಟಾವೆಲ್, ಬೆಡ್‍ಶಿಟ್, ಹೊದಿಕೆ ಬಟ್ಟೆ, ಸೋಹಮ್ ಶರ್ಟ್‍ಗಳು ರಿಯಾಯಿತಿ ದರದಲ್ಲಿ ಕೈಮಗ್ಗ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆಯೆಂದು ಸಮೂಹ ಅಭಿವೃದ್ಧಿ ಅಧಿಕಾರಿ ಶಿವಾನಂದ ಕಲಾದಗಿ ಹೇಳಿದರು.

ಎಸ್.ಜಿ.ಒಂಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಎಸ್.ಎನ್.ಬಿಡಕರ್, ಬಿ.ಎಸ್.ಹಿರೇಮಠ, ಕೆ.ಕೆ.ನಡಗಡ್ಡಿ ಹಾಜರಿದ್ದರು.

ಪಾರಗಾಂವಕರ ಸ್ವಾಗತಿಸಿ ವಂದಿಸಿದರು.

Saturday, September 4, 2010

ತೇರದಾಳದ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ಪುರಸಭಾಧ್ಯಕ್ಷೆ ಮತ್ತು ಉಪಾಧ್ಯಕ್ಷೆಯವರನ್ನು ಸನ್ಮಾನಿಸಿದರು

 ತೇರದಾಳ.03-09-2010

ತೇರದಾಳದ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿ
 ಪುರಸಭಾಧ್ಯಕ್ಷೆ ಶಶಿಕಲಾ ಪರಪ್ಪ ಗೌಡರ ಮತ್ತು ಉಪಾಧ್ಯಕ್ಷೆ ಶಾಲವ್ವ ವಿಠ್ಠಲ ಮಾಂಗ
ಅವರನ್ನು ಎಸ್ ಡಿ ಎಮ್ ಸಿ. ಶಾಲಾ ಸಿಬ್ಬಂದಿಯವರ ಸನ್ಮಾನಿಸಿದರು.
'ಶಾಲಾ ಕಂಪೌಂಡ ಎತ್ತರಿಸಲು ಪುರಸಭೆಯಿಂದ ಸಹಾಯ - ಭರವಸೆ'

ಇಲ್ಲಿಯ ಪೇಠಭಾಗದಲ್ಲಿರುವ ಸರಕಾರಿ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ಪುರಸಭಾದ್ಯಕ್ಷೆ ಶಶಿಕಲಾ ಪರಪ್ಪ ಗೌಡರ ಮತ್ತು ಉಪಾಧ್ಯಕ್ಷೆ ಶಾಲವ್ವ ವಿಠ್ಠಲ ಮಾಂಗ ಅವರನ್ನು ಎಸ್‍ಡಿಎಮ್‍ಸಿ, ಶಾಲಾ ಸಿಬ್ಬಂದಿಯವರು ಸನ್ಮಾನಿಸಿದರು.
      ಈ ಸಂದರ್ಬದಲ್ಲಿ ಮಾತನಾಡಿದ ಶಶಿಕಲಾ ಗೌಡರ, ಪ್ರಾಥಮಿಕ ಶಾಲೆಗೆ ಅವಶ್ಯವಿರುವ ಕಂಪೌಂಡೆತ್ತರಕ್ಕೆ ಸಂಬಂದಿಸಿದಂತೆ ಪುರಸಭೆಯಿಂದ ಹೆಚ್ಚಿನ ಧನಸಹಾಯ ನೀಡಲಾಗುವುದಲ್ಲದೇ, ಶಾಲಾ ಆಟದ ಮೈದಾನ ನವೀಕರಿಸಲು ಕ್ರಮಕೈಗೊಳ್ಳುವ ಭರವಸೆಯನ್ನು ನೀಡಿದರು.
      ಎಸ್‌ಡಿಎಮ್‍ಸಿ ಅಧ್ಯಕ್ಷ ಶ್ರೀಶೈಲ ಮೇಗಾಡಿ ಅಧ್ಯಕ್ಷತೆ ವಹಿಸಿ ಶಾಲಾ ಅಗತ್ಯಗಳಿಗೆ ಸ್ಪಂಧಿಸಲು ಕೋರಿದರು.
      ಪೂರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರವಿ ದೊಡಮನಿ. ಎಸ್.ಡಿ.ಎಮ್.ಸಿ., ಉಪಾಧ್ಯಕ್ಷ ಜನ್ನತ್ ಅಸ್ಲಂ ನದಾಫ, ಟಿಎಪಿಸಿಎಮ್‍ಎಸ್ ಅಧ್ಯಕ್ಷ ಷಣ್ಮುಖ ಗಾಡದಿ, ಅಪ್ಪು ಮಂಗಸೂಳಿ, ಮಲ್ಲಪ್ಪ ತುಬಚಿ, ಗಿರಮಲ್ಲಪ್ಪ ಕಾಲತಿಪ್ಪಿ, ರವಿ ಗುಮ್ಮನ್ನವರ, ಧರೆಪ್ಪ ಕಲಕೇರಿ, ರವಿ ಜಮಖಂಡಿ, ರಾಮು ಹಳಿಂಗಳಿ, ಮಹಾದೇವ ಮಾಳೇದ ವೇದಿಕೆಯಲ್ಲಿದ್ದರು.
ಮುದಕನ್ನವರ ಸ್ವಾಗತಿಸಿದರು. ಎ.ಆರ್.ಮುಧೋಳ ನಿರೂಪಿಸಿದರು. ಎಸ್.ಸಿ.ಬಜಂತ್ರಿ ವಂದಿಸಿದರು. ಡಿ.ಇಡಿ. ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

Friday, September 3, 2010

ತೇರದಾಳದಿಂದ ಬಾಗಲಕೊಟ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿಗೆ ಆಯ್ಕೆ

ತೇರದಾಳ-03-09-2010
ಮ.ಕೃ.ಮೇಗಾಡಿ
ಕಳೆದ ೧೫ವರ್ಷಗಳಿಂದ ಶಿಕ್ಷಣ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಗಮನಾರ್ಹ ಸಾದನೆ ಮಾಡುವುದರ ಮೂಲಕ ಗುರುತಿಸಿಕೊಂಡಿರುವ ಚಿಮ್ಮಡ ಜಾಂಗನೂರ ತೋಟದ ಕಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕರಾದ ಮ.ಕೃ.ಮೇಗಾಡಿಯವರು ಶಿಕ್ಷಣ ಇಲಾಖೆ ಕೊಡಮಾಡುವ ೨೦೧೦-೧೧ನೇ ಸಾಲಿನ ’ಬಾಗಲಕೋಟ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದರೆಂದು ಇಲಾಖಾ ಪ್ರಕಟಣೆ ತಿಳಿಸಿದೆ.

ಗ್ರಾಮೀಣ ಭಾಗದಲ್ಲಿಯೇ ಹೆಚ್ಚಿನ ಸೇವೆ ಸಲ್ಲಿಸುವ ಆಶಯ, ಅಲ್ಲಿಯ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕುವಂತಾಗಬೇಕು. ಆ ನಿಟ್ಟಿನಲ್ಲಿ ಮೇಗಾಡಿಯವರು ತಮ್ಮ ಬೋಧನಾ ಕೌಶಲ್ಯದಿಂದ, ಮಾತುಗಾರಿಕೆಯಿಂದ, ಬರವಣಿಗೆಯಿಂದ ಅದಿಕಾರಿಗಳು, ಗ್ರಾಮಸ್ಥರು ಹೀಗೆ ಎಲ್ಲರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.

ಕಾರ್ಯಕ್ರಮಗಳಲ್ಲಿ ಉತ್ತಮ ನಿರೂಪಕರಾಗಿರುವ ಇವರು ಡೈಟ್ ಇಲಕಲ್, ಡಿ.ಇಡಿ ಪ್ರಾಚಾರ್ಯರ ಸಂಘದವರ ಸಹಯೋಗದಲ್ಲಿ ಕೆಂಧೂಳಿಯವರು ಹೊರತಂದಿರುವ ’ಅಕ್ಷರ ಮೂರಕ್ಷರ’ ಎಂಬ ಧ್ವನಿಸುರುಳಿ ಸಿಡಿಯಲ್ಲಿ ನಿರೂಪಣೆ ಮಾಡಿದ್ದಾರೆ. ಅಲ್ಲದೇ ಅಡಿಕೆ ಎಲೆ ಅಜ್ಜಿಗೆ, ಆನೆ ಬೇಕು.. ಎಂಬ ಹಾಡನ್ನು ಹಾಡಿದ್ದಾರೆ. ಕಳೆದ ಪೆಬ್ರುವರಿಯಲ್ಲಿ ಗದಗನಲ್ಲಿ ನಡೆದ ೭೬ನೇ ಅಖಿಲ ಭರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಮ್ಮಿಕೊಂಡಿದ್ದ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಕವನ ವಾಚಿಸಿದ್ದರು. ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ, ಶ್ರೀಅಲ್ಲಮಪ್ರಭು ಕರ್ಮವೀರ ಕಲಾ ಸಾಹಿತ್ಯ ಸಂಸ್ಕೃತಿ ವೇದಿಕೆ ಅಧ್ಯಕ್ಷರಾಗಿ ಸಾಹಿತ್ಯ ವಾತಾವರಣ ನಿರ್ಮಾಣ, ಪ್ರತಿಭಾನ್ವಿತರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದ್ದಾರೆ.

ಕಿರಿಯ ವಯಸಿನ್ನಲ್ಲಿ ಅಪಾರ ಸಾಧನೆ.

'ಇವರ ಪ್ರತಿಭೆ, ಕ್ರಿಯಾಶೀಲತೆಗೆ ಅನೇಕ ಸಂಘ-ಸಂಸ್ಥೆಗಳು ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿವೆ.'
      ಅತ್ಯುತ್ತಮ ಯುವ ಬರಹಗಾರ ಪ್ರಶಸ್ತಿ, ಸೌಹಾರ್ಧ ಸಹಕಾರಿ ಪ್ರಶಸ್ತಿ, ವೃತ್ತಿ-ಪ್ರವೃತ್ತಿ ಪ್ರಶಸ್ತಿ, ಉತ್ತರ ಕರ್ನಾಟಕ ಯುವ ಶ್ರೇಷಠ ಸಾಹಿತಿ ಪ್ರಶಸ್ತಿ, ಮಾಧ್ಯಮ ಕ್ಷೇತ್ರ ನಕ್ಷತ್ರ ಪ್ರಶಸ್ತಿ ಪಡೆದಿರುವ ಇವರು ಶಿಕ್ಷಣ ಇಲಾಖೆಯ ಬಾಗಲಕೋಟ ನವನಗರದ ಕಲಾಭವನದಲ್ಲಿ ಜರುಗಲಿರುವ ಸಮಾರಂಭದಲ್ಲಿ ಇದೇ ರವಿವಾರ ದಿ.೫ರಂದು ಮ.ಕೃ. ಮೇಗಾಡಿಯವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆಯೆಂದು ಇಲಾಖಾ ಪ್ರಕಟಣೆ ತಿಳಿಸಿದೆ.
     ಇಂತಹ ಒಬ್ಬ ಪ್ರತಿಭನ್ವಿತ ವ್ಯಕ್ತಿ ನಮ್ಮ ಈ "ಇನ್ ತೇರದಾಳ ಸ್ಟ್ರಿಟ್ಸ" ಬ್ಲಾಗಗೆ ವರದಿಗಳನ್ನು ಕಳಿಸುವುದು ನಿಜಕ್ಕು ನಮಗೆ ಹೆಮ್ಮೆಯವಿಷಯ. ನಮ್ಮ ಓದುಗರ ಪರವಗಿ ಹಾಗೂ ಬ್ಲಾಗ ತಂಡದವತಿಯಿಂದ ಅಭಿನಂದಿಸುತ್ತೆವೆ.

Thursday, September 2, 2010

'In Terdal Streets' reaching far behind expectations.

Visitors Statistics
Visiters to this blog from May 2010 to 2nd  September 2010
India     -  155
U.S.A    -   47
Canada  -    5
U.K.       -   1 
___________
Total     -  208

Thanks to one and all who are visiting this Site. And also those who are promoting this blog.

ಮಹಿಳೆಯರಿಂದ ಗಣೇಶ ಮೂರ್ತಿಗಳ ತಯಾರಿಕೆ

ತೇರದಾಳ ೨೯-೦೮-೨೦೧೦


ಚಿತ್ರ ವರದಿ: ಮ.ಕೃ. ಮೇಗಾಡಿ, ತೇರದಾಳ. ೯೮೪೪೦೮೮೧೩೩

ತೇರದಾಳದ ಶ್ರೀಅಲ್ಲಮಪ್ರಭು ಮಹಿಳಾ ಗುಡಿ ಕೈಗಾರಿಕೆಯವರು ಆಕರ್ಷಕ ಗಣೇಶ ಮೂರ್ತಿಗಳನ್ನು ತಯಾರಿಸಿ ಬಣ್ಣ ತುಂಬಿ ಗಣೇಶ ಹಬ್ಬಕ್ಕೆ ಸಿದ್ಧತೆಯಲ್ಲಿ ತೊಡಗಿದ್ದಾರೆ.

ತೇರದಾಳದಲ್ಲಿ ಅಂತಾರಾಜ್ಯ ಕುಸ್ತಿ ಸ್ಪರ್ಧೆಗೆ ಸಿದ್ದತೆ ಆರಂಭ

ತೇರದಾಳ ೨೯-೦೮-೧೦

ಚಿತ್ರ ವರದಿ: ಮ.ಕೃ. ಮೇಗಾಡಿ, ತೇರದಾಳ. ೯೮೪೪೦೮೮೧೩೩

೧)ತೇರದಾಳದಲ್ಲಿ ಹೋದ ವರ್ಷ ನಡೆದ ಕುಸ್ತಿಪಂದ್ಯಾವಳಿಯ ದೃಶ್ಯ
೨)ಸೇರಿದ್ದ ಅಪಾರ ಜನಸ್ಥೋಮ
(ತೇರದಾಳದಲ್ಲಿ ಸೆ.೭ರಂದು ಅಂತಾರಾಜ್ಯ ಕುಸ್ತಿ ನಡೆಯಲಿದ್ದು, ಅದರ ಸಿದ್ದತೆ ಕುರಿತು ವರದಿ)
     ಇಂದಿನ ವಿಜ್ಞಾನ ತಂತ್ರಜ್ಞಾನ ಕಂಪ್ಯೂಟರ ಯುಗದಲ್ಲಿ ಕ್ರಿಕೆಟ, ಟೆನಿಸ, ಚೆಸ್‍ನಂತಹ ತಾರಾ ವರ್ಚಸ್ಸಿನ ಕ್ರೀಡೆಗಳ ಭರಾಟೆಯಲ್ಲಿ ಗ್ರಾಮೀಣ ಕ್ರೀಡೆಗಳಾದ ಕಬಡ್ಡಿ, ಕುಸ್ತಿ, ಖೋ ಖೋ, ಪಗಡೆಯಾಟಗಳು ಮಸುಕಾಗಿವೆ ಎಂಬ ಕೊರಗನ್ನು ತೇರದಾಳದ ಹಿರಿಯರು ಸುಳ್ಳು ಮಾಡಿ, ಕುಸ್ತಿಗೆ ಮಾನ್ಯತೆ ನೀಡಿ ಅದರ ಉಳಿವಿಗೆ ಟೊಂಕಕಟ್ಟಿ ನಿಂತಿದ್ದಾರೆ. ಬೇರೆ ಬೇರೆ ರಾಜ್ಯಗಳ ಕುಸ್ತಿಪಟುಗಳನ್ನು ಖ್ಯಾತ ಕುಸ್ತಿಪಟುಗಳನ್ನು ಕರೆಯಿಸಿ, ಉಚಿತವಾಗಿ ಅಭಿಮಾನಿಗಳಿಗೆ ತೋರಿಸಿ ಸಂಭ್ರಮಿಸುತ್ತಾರೆ. ನೋಡುಗರು ಖುಷಿ ಪಡುತ್ತಾರೆ.

      ಪ್ರತಿ ವರ್ಷದಂತೆ ಈ ವರ್ಷವೂ ಶ್ರಾವಣ ಮಾಸದ ಕೊನೆಯ ಸೋಮವಾರ ನಡೆಯುವ ಶ್ರೀಅಲ್ಲಮಪ್ರಭುದೇವರ ಜಾತ್ರೆಯಂಗವಾಗಿ ಜಾತ್ರೆಯ ಮರುದಿನ ಮಂಗಳವಾರ ದಿ.೭ರಂದು ಅಸಂಖ್ಯಾತ ಕುಸ್ತಿ ಅಭಿಮಾನಿಗಳ ಸಮ್ಮುಖದಲ್ಲಿ ಅಂತರಾಜ್ಯ ಕುಸ್ತಿ ಪಂದ್ಯವಳಿ ನಡೆಯುವದು. ಈ ಬಾರಿ ಕುಸ್ತಿ ಪಂದ್ಯಾವಳಿ ಉದ್ಘಾಟನೆಗೆ ಹರಗುರುಚರಮೂರ್ತಿಗಳು, ರಾಜ್ಯದ ಸಚಿವರು, ಶಾಸಕರು ಆಗಮಿಸಲಿದ್ದಾರೆ.

ಕರ್ನಾಟಕ, ಮಹಾರಾಷ್ಟ್ರ, ಪಂಜಾಬ, ಮಧ್ಯಪ್ರದೇಶ, ದಿಲ್ಲಿ, ಗೋವಾ ರಾಜ್ಯಗಳಿಂದ ಕುಸ್ತಿಪಟುಗಳು ಆಗಮಿಸಿ ತಮ್ಮ ತೋಳ್ಬಲ, ಚಾಕ್ಯತೆ, ಕೌಶಲ್ಯ ತೋರಿಸಲಿದ್ದಾರೆ.

Wednesday, September 1, 2010

ನೇಕಾರ ಮಹಿಳೆಯರಿಗೆ ತಲಾ ೧೦ಸಾವಿರ ರೂ.ಗಳ ಚೆಕ್‌ಗಳನ್ನು ವಿತರಿಸಿದರು.

ತೇರದಳ ೨೭-೦೮-೨೦೧೦

ತೇರದಾಳದ ೩೦ ನೇಕಾರ ಮಹಿಳೆಯರಿಗೆ ತಲಾ ೧೦ಸಾವಿರ ರೂ.ಗಳಂತೆ ಚೆಕ್‌ಗಳನ್ನು ಜಿಲ್ಲಾ ನೇಕಾರರ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಶಿವಪ್ಪ ಖವಾಸಿ, ಎಮ್.ಎಮ್.ಪೂಜಾರ ಫಲಾನುಭವಿಗಳಿಗೆ ವಿತರಿಸಿದರು.
"ಮಹಿಳೆಯರಿಗೆ ಸಾಲ: ಸದುಪಯೋಗಕ್ಕೆ ಕರೆ
ಜಿಲ್ಲಾ ನೇಕಾರರ ಪತ್ತಿನ ಸಹಕಾರಿ ಸಂಘದ ವತಿಯಿಂದ ನೇಕಾರರಿಗೆ ಅನುಕೂಲ ಕಲ್ಪಿಸಲು ಅನೇಕ ಯೋಜನೆಗಳನ್ನು ಜಾರಿ ಮಾಡಲಾಗುತ್ತಿದೆ. ಅದರಲ್ಲಿ ಮಹಿಳೆಯರಿಗಾಗಿ ಅತೀ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿದ್ದು, ಆಯ್ಕೆಯಾದ ಫಲಾನುಭವಿಗಳು ಸಾಲದ ಸದುಪಯೋಗಪಡಿಸಿಕೊಳ್ಳಬೇಕೆಂದು ಜಿಲ್ಲಾ ನೇಕಾರರ ಪತ್ತಿನ ಸಂಘದ ಉಪಾಧ್ಯಕ್ಷ ಶಿವಪ್ಪ ಖವಾಸಿ (ಗುಮ್ಮಟ) ಕರೆ ನೀಡಿದರು.

ಇಲ್ಲಿಯ ನೇಕಾರ ಮಹಿಳಾ ಸಂಘಟನೆಯ ಫಲಾನುಭವಿಗಳಿಗೆ ತಲಾ ೧೦ಸಾವಿರ ರೂ.ಗಳಂತೆ ೩೦ ಮಹಿಳೆಯರಿಗೆ ಸಾಲದ ಚೆಕ್ ವಿತರಿಸಿ ಅವರು ಮಾತನಡಿದರು. ಸಂಘದ ವ್ಯವಸ್ಥಾಪಕ ಎಮ್.ಎಮ್.ಪೂಜಾರ ಮಾತನಾಡಿ ಸಂಘವು ನೇಕಾರರ ಏಳೆಗೆ ಬದ್ದವಾಗಿ ಕಾರ್ಯ ಮಾಡುತ್ತಿದೆಯೆಂದರು.

ಕೆ.ಬಿ.ಸೂಳಿಬಾಂವಿ, ಸಿ.ಆರ್.ಕುದರಿ, ಯು.ಎಸ್.ಚಿಂತಾ, ಐ.ಟಿ.ಗೌಡರ, ಎಮ್.ಎಸ್.ಅರೂಟಗಿ ಈ ಸಂದರ್ಭದಲ್ಲಿದ್ದರು.
ನೇಕಾರರ ಪತ್ತಿನ ಸಹಕಾರಿ ಸಂಘದ ಸ್ಥಳಿಯ ಶಾಖಾ ಕಾರ್ಯದರ್ಶಿ ಅಲ್ಲಪ್ಪ ಇಂಗಳಗಿ ವಂದಿಸಿದರು.

Test

Test 1