ದ್ವೇಷಕ್ಕೆ ಗುಡಿಸಲಿಗೆ ಬೆಂಕಿ-ದನಕರುಗಳ ಸಾವು, ಲಕ್ಷಾಂತರ ರೂಗಳಷ್ಟು ಹಾನಿ
ತೇರದಾಳ : ಸುನೀತಾ ಮತ್ತು ಪ್ರಕಾಶ ಎಂಬುವವರು ಓಡಿ ಹೋಗಿದ್ದರಿಂದ ಅವರ ಎರೆಡು ಮನೆಯವರ ಮಧ್ಯೆ ದ್ವೇಷದಿಂದಾಗಿ ಪರಪ್ಪ ಯಮನಪ್ಪ ಸಾವಳಗಿ ಎಂಬುವವರ ಗುಡಿಸಲುಗಳು, ದನಕರುಗಳು ಬಲಿಯಾದ ಘಟನೆ ನಡೆದ ಬಗ್ಗೆ ಪೊಲೀಸರಿಂದ ಇಂದು ಮಾಹಿತಿ ದೊರಕಿದೆ. ಈ ಕುರಿತು ಪಿಎಸ್ಐ ಸುಂದರೇಶ ಹೊಳೆಣ್ಣವರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಪರಪ್ಪ ಯಮನಪ್ಪ ಸಾವಳಗಿ ಎಂಬುವವರು ಪೊಲೀಸರಿಗೆ ದೂರು ನೀಡಿದ್ದು ಅದರ ವಿವರ ಇಂತಿದೆ. ದೂರು ನೀಡಿರುವ ಪರಪ್ಪ ನಿನ್ನೆ ಮದ್ಯಾನ್ಹ ಊಟ ಮುಗಿಸಿ ಹೊರಗಡೆ ಬಂದಾಗ ತಮ್ಮ ಮನೆ ಹತ್ತಿರದ ಗುಡಿಸಲಿಗೆ ಬೆಂಕಿ ಹಚ್ಚಿ ಮನಬಂದಂತೆ ಚೀರಾಡಿ, ಕೂಗಾಡಿ, ಕೇ ಕೇ ಹಾಕುತ್ತಿದ್ದ ಬಸಪ್ಪ ಶಂಕರೆಪ್ಪ ಸಾವಳಗಿ, ಪ್ರಕಾಶ ಶಂಕರೆಪ್ಪ ಸಾವಳಗಿ, ಮಲ್ಲಪ್ಪ ಶಂಕರೆಪ್ಪ ಸಾವಳಗಿ ಇವರನ್ನು ಹಿಡಿಯಲು ಹೋದರೆ ಅವರು ಕಬ್ಬಿನ ಪಡದಲ್ಲಿ ಪರಾರಿಯಾಗಿದ್ದಾರೆನ್ನಲಾಗಿದೆ.
ಪಿರ್ಯಾದಿದಾರರು ಮತ್ತು ಆರೋಪಿತರು ಸಂಬಂಧಿಕರಾಗಿದ್ದು, ಸುನಿತಾ(19), ಪ್ರಕಾಶ (21) ಓಡಿ ಹೋಗಿದ್ದರಿಂದ ಅವರ ಮನೆಯವ ಮಧ್ಯೆ ದ್ವೇಷದಿಂದಾಗಿ ಈ ಘಟನೆ ಸಂಭವಿಸಿದೆಯೆನ್ನಲಾಗಿದೆ.
ಈ ಘಟನೆಯಲ್ಲಿ ಗರ್ಭಧರಿಸಿದ ಜರ್ಸಿ ಆಕಳು, 4ಎಮ್ಮೆ, ಟಗರು, ಮೇಕೆ, ಎಮ್ಮೆ ಕರು, ಆಕಳ ಕರು ಸುಟ್ಟು ಸತ್ತಿವೆ. 4ಗೊಂಜಾಳ ಚೀಲ, 3ಗೋದಿ ಚೀಲ ಕಾಳುಕಡಿ ಸುಟ್ಟಿದ್ದರಿಂದ ಒಟ್ಟು 1ಕ್ಷ 70ಸಾವಿರ ರೂ. (1,70,000 ರೂ.)ಗಳಷ್ಟು ಹಾನಿ ಸಂಭವಿಸಿದೆಯೆಂದು ಪೊಲೀಸರಿಗೆ ದೂರು ನೀಡಲಾಗಿದೆ.
ರಂಗನಗೌಡ ಪಾಟೀಲ ಭೇಟಿ : ಅವಳಿ ಜಿಲ್ಲಾ ಕೆಎಂಎಫ್ ನಿದರ್ೇಶಕ ರಂಗನಗೌಡ ಪಾಟೀಲ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ ಇಂತಹ ಘಟನೆಗಳು ಸಂಭವಿಸಿದಾಗ ಸರಕಾರದಿಂದ ನೆರವು ದೊರೆಯಬೇಕೆಂದರು.
ಜೆಡಿಎಸ್ ನಗರ ಘಟಕದ ಅಧ್ಯಕ್ಷ ನಿಂಗಪ್ಪ ತೇಜನ್ನವರ, ಅಶೋಕ ಸಾವಳಗಿ, ಸಂಜು ಖವಾಸಿ ಈ ಸಂದರ್ಭದಲ್ಲಿದ್ದರು.