ಅಂತರಜಾಲಾಡಿ
ಆತ್ಮಹತ್ಯೆ ಬೇಡ
ಖಿನ್ನತೆ ಒಂದು ಬಹುಸಾಮಾನ್ಯ ಖಾಯಿಲೆ. ಇದು ಹೆಚ್ಚಾಗಿ ಹಲವು ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಭಾವನೆ ಸಾಮಾನ್ಯವಾಗಿ ಪ್ರತಿ ವ್ಯಕ್ತಿಗೂ ಒಮ್ಮೆಯಾದರೂ ಬಂದೇ ಬರುತ್ತದೆ. ಕೆಲವರಿಗೆ ಇಂತಹ ಸಂದರ್ಭದಲ್ಲಿ ಒತ್ತಡ ತಡೆದುಕೊಳ್ಳಲಾರದೆ ಆತ್ಮಹತ್ಯೆ ಮಾಡಿಕೊಂಡೇ ಬಿಡುತ್ತಾರೆ. ಇಂತಹವರಿಗೆ ಆಪ್ತಸಲಹೆ ಅತಿ ಮುಖ್ಯ. ಅತ್ಮೀಯರಲ್ಲಿ ಹೇಳಿಕೊಳ್ಳಲಾಗುವುದಿಲ್ಲ. ಅದಕ್ಕಾಗಿಯೇ ಸಹಾಯವಾಣಿ ಇದೆ. ಅಂತರಜಾಲತಾಣವೂ ಇದೆ. ಅಂತಹ ಒಂದು ಜಾಲತಾಣ www.aasra.info. ನಿಮ್ಮ ಪರಿಚಯದವರು ಯಾರಾದರೂ ನಿಮ್ಮಲ್ಲಿ ಆಗಾಗ “ಈ ಜೀವನ ಸಾಕಾಗಿದೆ. ಸಾಯೋಣ ಅನ್ನಿಸುತ್ತಿದೆ” ಎಂದೆಲ್ಲ ಗಳಹುತ್ತಿದ್ದರೆ ಅವರಿಗೆ ಈ ಜಾಲತಾಣಕ್ಕೆ ಭೇಟಿ ನೀಡಲು ಸಲಹೆ ನೀಡಿ
-- ಗಣಕಿಂಡಿ - ೧೧೬ (ಆಗಸ್ಟ್ ೦೮, ೨೦೧೧)
No comments:
Post a Comment