Sunday, August 21, 2011

ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

Terdal 21-08-2011

ತೇರದಾಳ ಭಗ್ಯೋದಯ ಶಿಕ್ಷಣ ಸಂಸ್ಥೆಯಲ್ಲಿ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಹಮ್ಮಿಕೊಂಡಿದ್ದ ಕಾರ‍್ಯಕ್ರಮದಲ್ಲಿ ಕೃಷ್ಣನ ವೇಷದಾರಿ ಧರಿಸಿದ ಚಿಣ್ಣರು.




ಪಟ್ಟಣದ ಭಾಗ್ಯೋದಯ ಶಿಕ್ಷಣ ಸಂಸ್ಥೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು. ಶಾಲಾ ಪಾಲಕರು ತಮ್ಮ ತಮ್ಮ ಪುಠಾಣಿ ಮಕ್ಕಳನ್ನು ಕೃಷ್ಣನ ವೇಷದಾರಿ ಹಾಕಿ ಸಂಭ್ರಮಪಟ್ಟರು. ಶಾಲೆಯಲ್ಲಿ ತೊಟ್ಟಿಲು ಕಾರ‍್ಯಕ್ರಮ ನಡೆಸಲಾಯಿತು. ಆಕರ್ಷಣೆಯ ವೇಷ ಧರಿಸಿದ್ದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. (ಪ್ರಥಮ) ಸಮರ್ಥ ಶೇಗುಣಸಿ, ಸೃಷ್ಠಿ ಹಾದಿಮನಿ. (ದ್ವಿತೀಯ) ಓಂಕಾರ ಬಾಳಿಕಾಯಿ, ಸಂಜೀವಿನಿ ಪತ್ತಾರ. (ತೃತಿಯ) ಭೂಷಣ ಸಪ್ತಸಾಗರ, ಸಹನಾ ಅಥಣಿ ವಿಜೇತ ಚಿಣ್ಣರು. ಸಂಸ್ಥೆಯ ಅಧ್ಯಕ್ಷ ನಾರಾಯಣ ಪತ್ತಾರ, ವಿನೋದ ಪತ್ತಾರ, ಶಿವಾನಂದ ಚಿಂಚಲಿ, ಸದಾಶಿವ ಕೊಡತೆ, ಶಿಲ್ಪಾ ಶೆಟ್ಟಿ, ರಾಜೇಶ್ವರಿ ಜಮಖಂಡಿಹಿರೇಮಠ ಸೇರಿದಂತೆ ಮತ್ತಿತರರು ಇದ್ದರು.




Tuesday, August 9, 2011

ಆತ್ಮಹತ್ಯೆ ಬೇಡ



ಅಂತರಜಾಲಾಡಿ

ಆತ್ಮಹತ್ಯೆ ಬೇಡ

ಖಿನ್ನತೆ ಒಂದು ಬಹುಸಾಮಾನ್ಯ ಖಾಯಿಲೆ. ಇದು ಹೆಚ್ಚಾಗಿ ಹಲವು ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಭಾವನೆ ಸಾಮಾನ್ಯವಾಗಿ ಪ್ರತಿ ವ್ಯಕ್ತಿಗೂ ಒಮ್ಮೆಯಾದರೂ ಬಂದೇ ಬರುತ್ತದೆ. ಕೆಲವರಿಗೆ ಇಂತಹ ಸಂದರ್ಭದಲ್ಲಿ ಒತ್ತಡ ತಡೆದುಕೊಳ್ಳಲಾರದೆ ಆತ್ಮಹತ್ಯೆ ಮಾಡಿಕೊಂಡೇ ಬಿಡುತ್ತಾರೆ. ಇಂತಹವರಿಗೆ ಆಪ್ತಸಲಹೆ ಅತಿ ಮುಖ್ಯ. ಅತ್ಮೀಯರಲ್ಲಿ ಹೇಳಿಕೊಳ್ಳಲಾಗುವುದಿಲ್ಲ. ಅದಕ್ಕಾಗಿಯೇ ಸಹಾಯವಾಣಿ ಇದೆ. ಅಂತರಜಾಲತಾಣವೂ ಇದೆ. ಅಂತಹ ಒಂದು ಜಾಲತಾಣ www.aasra.info. ನಿಮ್ಮ ಪರಿಚಯದವರು ಯಾರಾದರೂ ನಿಮ್ಮಲ್ಲಿ ಆಗಾಗ “ಈ ಜೀವನ ಸಾಕಾಗಿದೆ. ಸಾಯೋಣ ಅನ್ನಿಸುತ್ತಿದೆ” ಎಂದೆಲ್ಲ ಗಳಹುತ್ತಿದ್ದರೆ ಅವರಿಗೆ ಈ ಜಾಲತಾಣಕ್ಕೆ ಭೇಟಿ ನೀಡಲು ಸಲಹೆ ನೀಡಿ

-- ಗಣಕಿಂಡಿ - ೧೧೬ (ಆಗಸ್ಟ್ ೦೮, ೨೦೧೧)





Test

Test 1