"ನಾನಿದ್ದ ನಾಡು"
ನಾನಿದ್ದ ನಾಡು ಕವಿ ಪುಂಗವರ ಬೀಡು
ಅದೋ ಮಹಾತ್ಮರ ಜನ್ಮದ ನಾಡು
ಅಲ್ಲಿ ತುಂಬಿತ್ತು ಪ್ರೀತಿ ವಾತ್ಸಲ್ಯದ ಅಂಶ
ಅದನ್ನ ದ್ವಂಸ ಮಾಡಿತು ಈ ವಿದೇಶಿ ವಂಶ ||೧||
ನಾನಿದ್ದ ನಾಡು ವೀರ ಸನ್ಯಾಸಿಗಳ ನೆಲೆಬೀಡು
ಅದೋ ನನ್ನ ಪುಣ್ಯದ ನಾಡು
ಅಲ್ಲಿ ಹತ್ತಿತ್ತು ಭಯೋತ್ಪಾದನೆಯ ಭೀತಿ
ಅದನ್ನು ಹಚ್ಚಿತು ವಿದೇಶಿ ಸಂಸ್ಕೃತಿ ||೨||
ಜಾತಿ ಬೇದಗಳಿಲ್ಲದ ಈ ನನ್ನ ನಾಡು
ಹಚ್ಚ ಹಸಿರಿನಿಂದ ತುಂಬಿದ ಈ ನಮ್ಮ ಕಾಡು
ನಮ್ಮ ನಾಡು ಕನ್ನಡ ನಾಡು
ಅದುವೇ ಈ ಜನ್ಮದ ನೆಲೆಬೀಡು ||೩||
ನಮ್ಮ ಭಾಷೆ ಕನ್ನಡ ಭಾಷೆ
ಅದನ್ನು ಆಕ್ರಮಿಸಿತು ಈ ಕೆಂಪು ಮೂತಿಯ ಭಾಷೆ
ಕನ್ನಡ್ ಭಾಷೆ ಬಿದಿರು ನಿನೆಂದೆದೂ ಕೂಸೆ
ಅದರ ಮೇಲಿರಲಿ ಈ ನಿನ್ನ ಆಸೆ ||೪||
ವರ್ಷವೂ ಬರುವುದು ದೀಪಾವಳಿ
ಅದಕ್ಕೆ ಮಾಡುವೆವು ದೀಪದ ಹಾವಳಿ
ಪ್ರೀತಿಸು ಈ ನಿನ್ನ ಜನತೆಯನು
ಬಿಡದಿರು ಈ ನಿನ್ನ ಅಂತರಂಗವನು ||೫||
- ಸಂಜುಕುಮಾರ. ಪ. ಅಥಣಿ
(ಡಿ.ಇಡಿ. ಪ್ರಥಮ ವರ್ಷ)
No comments:
Post a Comment