Wednesday, October 6, 2010

Deshiya kleyannu ulisi belesalu Umashri Kare

ದೇಶೀಯ ಕಲೆಗಳನ್ನು ಉಳಿಸಿ ಬೆಳೆಸಲು ಉಮಾಶ್ರೀ ಕರೆ



ತೇರದಾಳ ಸಮೀಪದ ನಾವಲಗಿ ಗ್ರಾಮದಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತ ಇಲಾಖೆ, ಬಿಜಾಪುರ ಜಿಲ್ಲಾ ಭೂಮಿ ಬಳಗ, ತೇರದಾಳದ ಶ್ರೀಅಲ್ಲಮಪ್ರಭು ಕರ್ಮವೀರ ಕಲಾ ಸಾಹಿತ್ಯ ಸಂಸ್ಕೃತ ವೇದಿಕೆ ಸಂಯುಕ್ತಾಶ್ರಯದಲ್ಲಿ ಎರೆಡು ದಿನಗಳ ಶ್ರೀಕೃಷ್ಣ ಪಾರಿಜಾತ ಭಾಗವತರ ಸಮಾವೇಶದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕ್ರತ ಚಿತ್ರನಟಿ ಉಮಾಶ್ರೀ ಮಾತನಾಡಿದರು. ನಾಗರಾಳದ ನಿಂಗಪ್ಪಯ್ಯ ಶ್ರೀ, ಬೀಳಗಿ ಶಿವಾನಂದ ಶೈಲ ಶ್ರೀ,ಡಾ.ಬಾಳಾಸಾಹೇಬ ಲೋಕಾಪುರ, ಡಾ.ವಿಜಯಕುಮಾರ ಕಟಗಿಹಳ್ಳಿಮಠ, ಹನಮಂತ ಬರಗಾಲ ಚಿತ್ರದಲ್ಲಿದ್ದಾರೆ.

ಬನಹಟ್ಟಿ,೩-ಮನುಷ್ಯನ ಮನಸ್ಸಿಗೆ ಅಹ್ಲಾದನ್ನುಂಟು ಮಾಡುವಂತಹವು ಜನಪದ ಕಲೆಗಳು. ಉತ್ತರ ಕರ್ನಾಟಕದಲ್ಲಿ ಇಂದಿಗೂ ಜನಪದ ಕಲೆಗಳು ಜೀವಂತವಾಗಿವೆ. ಆದರೆ ಇಂದಿನ ಯುವಕರು ಆಧುನಿಕ ಸಂಗೀತಕ್ಕೆ ಒಗ್ಗಿರುವದು ಶೋಚನೀಯ. ಆಧುನಿಕ ತಲೆಮಾರಿನ ಕಲಾವಿದರು ದೇಶೀಯ ಕಲೆಗಳನ್ನು ಉಳಿಸಿ ಬೆಳೆಸಲು ಪ್ರಯತ್ನಿಸಬೇಕೆಂದು ರಾಷ್ಟ್ರಪ್ರಶಸ್ತಿ ವಿಜೇತ ಹಿರಿಯ ಕಲಾವಿದೆ ಉಮಾಶ್ರೀ ಕರೆ ನೀಡಿದರು.

ಇಲ್ಲಿಗೆ ಸಮೀಪದ ನಾವಲಗಿ ಗ್ರಾಮದ ಹನುಮಾನ ದೇವಸ್ಥಾನದಲ್ಲಿ ಭಾಗವತ ಕಲಾವಿದ ದಿ.ಕಲ್ಲಪ್ಪ ಪಟ್ಟಣಶೆಟ್ಟಿ ಸ್ಮರಣಾರ್ಥವಾಗಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಿಜಾಪುರ ಜಿಲ್ಲಾ ಭೂಮಿ ಬಳಗ, ತೇರದಾಳದ ಶ್ರೀಅಲ್ಲಮಪ್ರಭು ಕರ್ಮವೀರ ಕಲಾ ಸಾಹಿತ್ಯ ಸಂಸ್ಕೃತ ವೇದಿಕೆ ಸಂಯುಕ್ತಾಶ್ರಯದಲ್ಲಿ ಎರೆಡು ದಿನಗಳ ಶ್ರೀಕೃಷ್ಣ ಪಾರಿಜಾತ ಭಾಗವತರ ಸಮಾವೇಶದಲ್ಲಿ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು ನೈಜ ಕಲಾವಿದರು ಕೆಲಸವಿಲ್ಲದೇ ನರಳಿ ಮೂಲೆಗುಂಪಾಗುತ್ತಿದ್ದಾರೆ. ಅವರ ಬದುಕಿಗೆ ನೆಲೆ ಒದಗಿಸಲು ಸರಕಾರ ಯೋಜನೆಗಳನ್ನು ರೂಪಿಸಬೇಕೆಂದು ಆಗ್ರಹಿಸಿದರು.

ಪಾರಿಜಾತದ ಭಾಹವತರ ಬಗ್ಗೆ ಕರ್ನಾಟಕದಲ್ಲಿ ಮೊದಲ ಬಾರಿಗೆ ಸಮಾವೇಶ ನಡೆದಿರುವದು ಸ್ತುತ್ಯವಾಗಿದ್ದು, ವಿದ್ವಾಂಸರು, ಸಂಶೋಧಕರು, ಜನಪ್ರತಿನಿಧಿಗಳು ಹೋರಾಟದ ಮೂಲಕ ಪಾರಿಜಾತ ಅಧ್ಯಯನ ಪೀಠವನ್ನು ನಮ್ಮ ಜಿಲ್ಲೆಯಲ್ಲಿ ಮುಖ್ಯವಾಗಿ ಕಲಾವಿದರಿಂದೊಡಗೂಡಿದ ನಾವಲಗಿ ಗ್ರಾಮದಲ್ಲಿಯೇ ಪಾರಿಜಾತ ಅಧ್ಯಯನ ಪೀಠವನ್ನು ಸ್ಥಾಪಿಸಲು ಇಚ್ಚಾಶಕ್ತಿ ಬೆಳೆಸಿಕೊಳ್ಳುವುದರು ಮೂಲಕ ಈ ಭಾಗದಲ್ಲಿ ಕಲಾವಿದರ ಬಹುದಿನಗಳ ಆಸೆ ಈಡೇರುವಂತಾಗಬೇಕೆಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಾಳಾಸಾಹೇಬ ಲೋಕಾಪುರ ಅಭಿಪ್ರಾಯಪಟ್ಟರು. ಆಶಯ ನುಡಿಗಳನ್ನಾಡಿದ ಅವರು ಶ್ರೀಕೃಷ್ಣ ಪಾರಿಜಾತದಲ್ಲಿ ಭಾಗವತರು ಪಾರಿಜಾತದ ಜೀವಾಳ. ಈ ಪಾರಿಜಾತ ಕಲೆಯನ್ನು ಕಲಾವಿದರು ಕಳೆದ ೨೨೦ವರ್ಷಗಳಿಂದ ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆಂದು ಶ್ಲಾಘಿಸಿದರು.
ತೇರದಾಳ ಶಾಸಕ ಸಿದ್ದು ಸವದಿ ಮಾತನಾಡಿ, ದೃಶ್ಯ ಮಾಧ್ಯಮಗಳ ಹಾವಳಿಯಲ್ಲಿ ದೇಶಿ ಸೊಗಡಿನ ಜನಪದ ಕಲೆಗಳು, ಕಲಾವಿದರು ಉಳಿಯಬೇಕು.ಜನಪದ ವಿಶ್ವವಿದ್ಯಾಲಯ ಜಮಖಂಡಿ ಭಾಗದಲ್ಲಿ ಸ್ಥಾಪನೆಯಾಗಬೇಕೆಂದು ಜಿಲ್ಲಾ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದ್ದು,ಕಲಾವಿದರು ಇದಕ್ಕಾಗಿ ಹೋರಾಡುವದೂ ಅಗತ್ಯವೆಂದು ಕರೆಯಿತ್ತರು.
ನಾಗರಾಳ ದಿಗಂಬರೇಶ್ವರಮಠದ ಶ್ರೀ ನಿಂಗಪ್ಪಯ್ಯ ಸ್ವಾಮಿಗಳ ಸಾನಿಧ್ಯದಲ್ಲಿ.ಬೀಳಗಿಯ ಶ್ರೀಶಿವಾನಂದ ಸ್ವಾಮಿಗಳು.ನಾವಲಗಿ ಶ್ರೀಶ್ರೀಶೈಲ ಸ್ವಾಮಿಗಳ ನೇತ್ರತ್ವದಲ್ಲಿ ಮುಗಳಖೋಡದ ಹಿರಿಯ ಭಾಗವತ ಕಲಾವಿದ ಸದಸ್ಯಸ್ವಾಮಿ ಬಬಲಾದಿಮಠ ಉದ್ಘಾಟಿಸಿದರು.
ಜನಪದ ಪರಿಷತ್ ಜಿಲ್ಲಾಧ್ಯಕ್ಷ ಡಾ.ವಿ.ಎಸ್,ಕಟಗಿಹಳ್ಳಿಮಠ, ಜಿ.ಪಂ.ಸದಸ್ಯ ಬಾಬಾಗೌಡ ಪಾಟೀಲ್.ತಾ.ಪಂ.ಸದಸ್ಯ ಹನುಮಂತ ಬರಗಾಲ.ಗ್ರಾ.ಪಂ.ಅಧ್ಯಕ್ಷೆ ರುಕ್ಮವ್ವ ಚನಾಳ. ರೇಖಾ ಕಾಂತಿ. ರವಿ ಡಪಳಾಪರ,ಶ್ರೀಶೈಲ ಪಟ್ಟಣಶೆಟ್ಟಿ ವೇದಿಕೆಯಲ್ಲಿದ್ದರು.
ರುಕ್ಮವ್ವ ಬರಗಾಲ ಸಂಗಡಿಗರ ಚೌಡಕಿಪದದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಶಿವಾನಂದ ಕರಿಗಾರ ಕಾರ್ಯಕ್ರಮ ನಿರೂಪಿಸಿದರು.ವೇದಿಕೆ ಅಧ್ಯಕ್ಷ ಮ.ಕ್ರ.ಮೇಗಾಡಿ ವಂದಿಸಿದರು.

No comments:

Post a Comment

Test

Test 1