ತೇರದಾಳ ೨೯-೦೯-೨೦೧೦
ಹಿರಿಯರ ಮಾರ್ಗದರ್ಶನದಲ್ಲಿ ಬ್ಯಾಂಕಿನ ಪ್ರಗತಿಗೆ ಸಿದ್ದ-ಸವದಿ
|
ತೇರದಾಳದ ಎಮ್ ವಿಪಿ ಐಟಿಸಿಯಲ್ಲಿ ಜರುಗಿದ ಶ್ರೀಪ್ರಭುಲಿಂಗ ನಗರ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಸದಸ್ಯರ ಪ್ರಶ್ನೆಗಳಿಗೆ ಸಂಘದ ಅಧ್ಯಕ್ಶ ಧನಪಾಲ ಸವದಿ ಉತ್ತರಿಸುತ್ತಿರುವುದು. |
ಶ್ರೀಪ್ರಭುಲಿಂಗ ನಗರ ಪತ್ತಿನ ಸಹಕಾರಿ ಸಂಘ ಪ್ರಗತಿಯತ್ತ ಸಾಗಿದೆ, ಉಪಾಧ್ಯಕ್ಶರು.ಸರ್ವಸದಸ್ಯರು ನೀಡುತ್ತಿರುವ ಸಹಕಾರದಿಂದ ಬ್ಯಾಂಕ್ ನೂತನ ಕಟ್ಟಡ ಹೊಂದಲಿರುವದು ಸಂತಸದಾಯಕವಾಗಿದೆ.ಹಿರಿಯರಮಾರ್ಗದರ್ಶನದಲ್ಲಿ
ಪ್ರ್ಗತಿಗೆ ಸದಾಕಾಲ ಕಾಯ್ ಮಾಡುತ್ತಿರುವುದಾಗಿ ಸಂಘದ ಅಧ್ಯಕ್ಶ ಧನಪಾಲ ಸವದಿ ಇಂದಿಲ್ಲಿ ಹೇಳಿದರು.
ಇಲ್ಲಿಯ ವಿನಾಯಕ ವಿದ್ಯಾವರ್ಧಕ ಸಂಘದ ವಾರ್ಷಿಕ ಸರ್ವ ಸಾದಾರಣ ಸಭೆಯಲ್ಲಿ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಅವರು ಸಾಧಕ ಬಾಧಕಗಳನ್ನು ಗಮನಿಸಿ ಸದಸ್ಯರ ಬೇಡಿಕೆಗಳಿಗೆ ಸ್ಪಂದಿಸಲಾಗುವುದು.ಸಂಘಕ್ಕೆ ಬರಬೇಕಾದ ಬಾಕಿ ಹಣದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗುವದೆಂದು ಭರವಸೆ ನೀಡಿದರು.
ಸಭೆಯಲ್ಲಿ ಬಡ್ಡಿದರ ಏರಿಕೆ,ಸಾಲ ವಸೂಲಿ ಬಗ್ಗೆ ಬಿರುಸಿನ ಚರ್ಚೆಗಳಾದವು.
ಹಿರಿಯರಾದ ವಿರುಪಾಕ್ಷಪ್ಪ ಖವಾಸಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ನೇಕಾರರ ಸಹಕಾರಿ ಸಂಘದ ಉಪಾಧ್ಯಕ್ಷ ಶಿವಪ್ಪ ಖವಾಸಿ.ಎಮ್.ಎಮ್. ಜೈನರ್. ನಿರಿಂಜನ ಪಟ್ಟಣಶೆಟ್ಟಿ.ಪುರಸಭೆ ಮಾಜಿ ಅಧ್ಯಕ್ಷರಾದ ಮಲ್ಲಪ್ಪಣ್ಣ ದಾನಿಗೊಂಡ. ಪ್ರವೀಣ ಪಿ.ನಾಡಗೌಡ, ಬಾಲಚಂದ್ರ ಯಾದವಾಡ, ಬಸವರಾಜ ಹಂಜಿ, ಮಹಾವೀರ ಕೋರಿಗೇರಿ, ಉಪಾಧ್ಯಕ್ಷ ರಮೇಶ ಪಟ್ಟಣಶೆಟ್ಟಿ, ಇನ್ನಿತರರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಮಹಾವೀರ ಚವಜ ಬ್ಯಾಂಕಿನ ವಾರ್ಷಿಕ ವರದಿ ವಾಚಿಸಿದರು. ೧೩೪೩ಸದಸ್ಯರನ್ನೊಳಗೊಂಡ ಸಂಘ, ೧,೩೫,೮೮,೫೩೯ರೂ.ಗಳಷ್ಟು ಠೇವಣಿ ಹೊಂದಿದೆಯೆಂದರು. ೭೮೮೪೨೩೯ರೂ.ಗಳ ಸಾಲ ವಿತರಿಸಲಾಗಿದೆ. ೨೦೦೯-೧೦ನೇ ಸಾಲಿನಲ್ಲಿ ಸಂಘ ೧,೦೨,೧೪೨(೧.೨ಲಕ್ಷ ರೂಗಳಷ್ಟು) ಲಾಭ ಗಳಿಸಿದೆಯೆಂದು ವಿವರಿಸಿದರು.
ಸಂಘದ ಅಧ್ಯಕ್ಷ ಧನಪಾಲ ಸವದಿ ಆರಂಭದಲ್ಲಿ ಸ್ವಾಗತಿಸಿದರು. ಪ್ರಗತಿಪರ ರೈತ ಮಲ್ಲಿನಾಥ ಬೋಳಗೊಂಡ ವಂದಿಸಿದರು.