Thursday, October 14, 2010

Durga Devi at Kallatti

Terdal 14-10-2010

Durga Devi
ತೇರದಾಳದ ಕಲ್ಲಟ್ಟಿಯಲ್ಲಿ ನಾಡಹಬ್ಬ ದಸರಾ. ನವರಾತ್ರಿ ನಿಮಿತ್ಯ ಶ್ರೀಆದಿಶಕ್ತಿ ತರುಣ ಮಂಡಳಿಯವರು ಕಾಮಣ್ಣನ ಕಟ್ಟೆಯಲ್ಲಿ ಪ್ರತಿಷ್ಠಾಪಿಸಿದ ನಾಡದೇವಿ ಶ್ರೀಆದಿಶಕ್ತಿಯ ಮೂರ್ತಿ ಆಕರ್ಷಕವಾಗಿದೆ. ನಿತ್ಯ ಬೆಳಿಗ್ಗೆ ಮತ್ತು ಸಂಜೆ ವಿಶೇಷ ಪೂಜಾ ಸಮಾರಂಭ ನಡೆಯುವದು. ಸದ್ಭಕ್ತರು ಶ್ರೀದೇವಿ ದರ್ಶನಕ್ಕೆ ಆಗಮಿಸುತ್ತಿದ್ದಾರೆ.

ಧಾರ್ಮಿಕ ಪ್ರಜ್ಞೆ. ಸತ್ಸಂಗದ ಮಹತ್ವ ಅರಿಯಲು ಕರೆ

Terdal 10-10-2010

ತೇರದಾಳ.೧೦-ಇಂದಿನ ಕಲುಷಿತ ವಾತಾವರಣದಲ್ಲಿ ಪ್ರತಿಯೊಬ್ಬರೂ ಆಧ್ಯಾತ್ಮಿಕ ಪ್ರಜ್ಞೆ. ಸತ್ಸಂಗದಲ್ಲಿ ಪಾಲ್ಗೊಳ್ಳುವ ಮೂಲಕ ಜೀವನ ಸಾರ್ಥಕಪಡಿಸಿಕೊಳ್ಳಬೇಕು. ತರುಣ ಮಂಡಳಿ ಕಳೆದ ೧೩ವರ್ಷಗಳಿಂದ ಆದಿಶಕ್ತಿಯ ಮೂರ್ತಿ ಪ್ರತಿಷ್ಠಾಪಿಸಿ ಜನಜಾಗೃತಿ ಕಾರ್ಯಕ್ರಮ ಸಂಘಟಿಸುತ್ತಿರುವದು ಶ್ಲಾಘಾನೀಯವೆಂದು ವಲಯ ಕಸಾಪ ಅಧ್ಯಕ್ಷ ಮ, ಕೃ. ಮೇಗಾಡಿ ಹೇಳಿದರು.

ಇಲ್ಲಿಯ ಕಲ್ಲಟ್ಟಿಯ ಶ್ರೀಆದಿಶಕ್ತಿ ತರುಣ ಮಂಡಳಿಯವರು ನಾಡಹಬ್ಬ ದಸರಾ ಪ್ರಯುಕ್ತ ಹಮ್ಮಿಕೊಂಡಿರುವ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು ಆದಿಶಕ್ತಿಯ ದಿವ್ಯಪ್ರಭಾವದಿಂದ ನಾಡು ಸುಖ-ಶಾಂತಿ-ನೆಮ್ಮದಿ ಕಾಣಲೆಂದು ಹಾರೈಸಿದರು.
ಹಿರಿಯರಾದ ರುದ್ರಪ್ಪಣ್ಣ ವಂಟಗುಡಿ ಅಧ್ಯಕ್ಷತೆ ವಹಿಸಿದ್ದರು.

ಆದಿಶಕ್ತಿಯ ಪುರಾಣ ಪ್ರವಚಣವನ್ನು ಬುರ್ಲಟ್ಟಿಯ ಶಿವಶಂಕರ ಬಡಿಗೇರ ಶರಣರು ನಡೆಸಿಕೊಟ್ಟು ಬದುಕು ಹಸನಾಗಲು ಸನ್ಮಾರ್ಗದತ್ತ ನಡಿಗೆ ಇರಬೇಕೆಂದರು.
ರಾಮಣ್ಣ ಹೊಸಮನಿ. ಪ್ರಭುರಾಯ ಬಜಂತ್ರಿ. ಪಾಂಡು ಹುದ್ದಾರ. ನಾಗರಾಜ ಮುದಕನ್ನವರ. ಅಪ್ಪಾಸಿ ಹೊಸಮನಿ. ಉಮ್ಮಣ್ಣ ರಾವಳ. ಅಲ್ಲಪ್ಪ ಖವಾಸಿ ಉಪಸ್ಥಿತರಿದ್ದರು.
ನಿರಂಜನ ಬಡಿಗೇರ. ಸತ್ಯಪ್ಪ ದಾಸರ ಪ್ರಾರ್ಥಿಸಿದರು. ಅಲ್ಲಪ್ಪ ಇಂಗಳಗಿ ಸ್ವಾಗತಿಸಿದರು. ಸಿದ್ದು ಅಥಣಿ ಕಾರ್ಯಕ್ರಮ ನಿರೂಪಿಸಿದರು. ಮಲ್ಲಯ್ಯ ಬೃಂಗಿ ಮಂಗಲ ಗೀತೆ ಹಾಡಿದರು.

Tuesday, October 12, 2010

ಕಣ್ಮರೆಯಾದ ಮಗನಿಗಾಗಿ ಹೆತ್ತವರ ಹುಡುಕಾಟ;

Terdal : 08-10-2010



ತೇರದಾಳ. ೮-ಸ್ಠಳೀಯ್ ಪೋಲೀಸ್ ಠಾಣೆ ವ್ಯಾಪ್ತಿಗೆ ಬರುವ ರಬಕವಿಯ ಸಾಗರ ಮಹಾಲಿಂಗಪ್ಪ ಮುತ್ತೂರ (೨೩) ಎಂಬ ಯುವಕ ಆಗಸ್ಟ್ ೧೪ರಿಂದ ಕಾಣೆಯಾಗಿದ್ದಾನೆಂದು ಪೋಲೀಸ್ ಠಾಣೆಯಲ್ಲಿ ಪ್ರಕರಣ ಇಂದು ದಾಖಲಾಗಿದೆ.

ಬೆಳಗಾವಿ ಕೆ.ಎಲ್.ಇ ಕಾಲೇಜಿನಲ್ಲಿ ಬಿ.ಇ.ಸಿವಿಲ್ ವ್ಯಾಸಂಗ ಮಾಡುತ್ತಿದ್ದ ಸಾಗರ ಮಾನಸಿಕವಾಗಿ ಅಸ್ವಸ್ಥನಲ್ಲ. ಆರೋಗ್ಯಪೂರ್ಣನೂ ಆಗಿದ್ದಾನೆ. ಆದರೆ ಆತ ಮನೆಯಿಂದ ಯಾವ ಉದ್ದೇಶಕ್ಕಾಗಿ ಹೋದ ಎಂಬುದು ತಿಳಿದಿಲ್ಲವೆಂದು ಮನೆಯವರು ಹೇಳುತ್ತಿದ್ದಾರೆ. ಎಲ್ಲ ಕಡೆಗೆ ಹುಡುಕಾಡಿದರೂ ಸಿಗದಿದ್ದಾಗ, ಸಾಗರನ ಪಾಲಕರು ಇದೀಗ ಪೋಲೀಸರ ಮೊರೆ ಹೋಗಿದ್ದಾರೆ.

ಮನೆ ಬಿಟ್ಟು ಹೋಗುವಾಗ ಕರಿ ಬಣ್ಣದ ಪ್ಯಾಂಟ್. ಬಿಳಿ ಅಂಗಿ ಧರಿಸಿದ್ದನು. ೫ಫೂ,೧೦ಇಂ, ಎತ್ತರ, ಕನ್ನಡ, ಹಿಂದಿ. ಇಂಗ್ಲೀಷ ಮಾತನಾಡಬಲ್ಲ. ತೆಳ್ಳಗಿನ ಮೈಕಟ್ಟು ಹೊಂದಿರುವ ಈತ ಗೋದಿಗೆಂಪು ಬಣ್ಣ ಹೊಂದಿದ್ದಾನೆ, ಈತನ ಸುಳಿವು ಸಿಕ್ಕವರು ಕೊಡಲೇ (೦೮೩೫೩) ೨೫೫೧೩೩ಗೆ ಇಲ್ಲವೆ, ಆರ್, ಆರ್, ಪಾಟೀಲ ಠಾಣಾಧಿಕಾರಿ ೯೪೮೦೮೦೩೯೫೯ಗೆ ಸಂಪರ್ಕಿಸಲು ಪೋಲಿಸರು ಕೋರಿದ್ದಾರೆ.

Saturday, October 9, 2010

ಸಂಭ್ರಮದ ದಸರಾ ಪ್ರಯುಕ್ತ ಆದಿಶಕ್ತಿ ಮೆರವಣಿಗೆ

Terdal


photo will be uploaded later "sorry for the inconvenience"


ತೇರದಾಳ ಕಲ್ಲಟ್ಟಿಯ ಆದಿಶಕ್ತಿ ತರುಣ ಮಂಡಳಿಯವರು ನಾಡಹಬ್ಬ ದಸರಾ ಪ್ರಯುಕ್ತ ಶುಕ್ರವಾರ ನಾಡದೇವಿ ಆದಿಶಕ್ತಿಯ ಭವ್ಯ ಮೆರವಣಿಗೆಯನ್ನು ಪಟ್ಟಣದಲ್ಲಿ ಹಮ್ಮಿಕೊಂಡಿದ್ದರು.

Friday, October 8, 2010

sanskrit sambhashanam 1 Parichaya



Terdal

Adhikara Hastantara

Terdal 06-10-2010
ಅಧಿಕಾರ ಹಸ್ತಾಂತರ;

ಕಳೆದ ಐದು ವರ್ಷಗಳಿಂದ ತೇರದಾಳ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ ಪಿ, ಎಮ್, ಪತ್ತಾರ ಅವರು ಇಂದು ಬುಧವಾರ ಮಧ್ಯಾನ್ಹ ನೂತನ ಸಿಆರ್ ಪಿ ಆರ್.ಟಿ ಪೋತದಾರ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಹಿಂದೆ ತೇರದಾಳ ವಲಯದ ಎಲ್ಲ ಶಿಕ್ಷಕ/ಕಿಯರು ಸಹಕಾರ ನೀಡಿದ್ದಕ್ಕೆ ಕೃತಜ್ಞತೆಗಳನ್ನು ಪಿ. ಎಮ್, ಪತ್ತಾರ ಅರ್ಪಿಸಿದರು. ಸರಕಾರಿ ಕನ್ನಡ ಮಾದರಿ ಶಾಲೆ ಮುಖ್ಯೋಪಾದ್ಯಾಯನಿಯರು ಪಾಲ್ಗೊಂಡಿದ್ದರು. ಜಿ.ಎಮ್.ಮೋಪಗಾರ ವಂದಿಸಿದರು.

ತುಳಜಾಭವಾನಿ ಮೂರ್ತಿ ಪ್ರತಿಷ್ಠಾಪನೆ ೧೦ ರಂದು

Terdal 06-10-2010

ತೇರದಾಳ,೬- ಪಟ್ಟಣದಲ್ಲಿ ಶ್ರೀತುಳಜಾಭವಾನಿ ಮೂರ್ತಿ ಪ್ರತಿಷ್ಠಾಪನೆಗೆ ಗಣಪತಿ ಗಲ್ಲಿಯಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆಯೆಂದು ಸಂಘಟಕರು, ಹಿರಿಯರು ತಿಳಿಸಿದ್ದಾರೆ.
ರವಿವಾರ ದಿ. ೧೦ರಂದು ಸಾಯಂಕಾಲ ೪ಗಂಟೆಗೆ ನೂತನ ಶ್ರೀತುಳಜಾಭವಾನಿ ಮೂರ್ತಿ ಮೆರವಣಿಗೆಯು ದತ್ತ ಮಂಗಲ ಕಾರ್ಯಾಲಯದಿಂದ ಆರಂಭಗೊಂಳ್ಳುವುದು. ಮಾತೆಯರು ಕುಂಭ ಆರತಿಯೊಂದಿಗೆ ಪಾಲ್ಗೊಂಡರೆ, ಸಕಲ ವಾದ್ಯವೃಂದದ ಕಲಾವಿದರು, ಪಟ್ಟಣದ ಗಣ್ಯಮಾನ್ಯರು, ಹಿರಿಯರು, ಸದ್ಬಕ್ತರು ಭಾಗವಹಿಸಲಿದ್ದಾರೆ.
ಸೋಮವಾರ ದಿ.೧೦ರಂದು ಮುಂಜಾನೆ ೮-೩೦ಕ್ಕೆ ಜಮಖಂಡಿ ಮುತ್ತಿನಕಂತಿಮಠದ ಶ್ರೀಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮೂರ್ತಿ ಪ್ರತಿಷ್ಠಾಪಿಸುವರು.
ನಂತರ ೧೧ಗಂಟೆಗೆ ಚಿಮ್ಮಡ ವಿರಕ್ತಮಠದ ಶ್ರೀಪ್ರಭು ಸ್ವಾಮಿಗಳ ಸಾನಿಧ್ಯದಲ್ಲಿ ಸಮಾರಂಭ ಜರುಗುವದು. ಶೇಗುಣಸಿ ವಿರಕ್ತಮಠದ ಉತ್ತರಾಧಿಕಾರಿ ಶ್ರೀಮಹಾಂತ ದೇವರು ನೇತ್ರತ್ವದಲ್ಲಿ ಸ್ಥಳೀಯ ಶಾಸಕ ಸಿದ್ದು ಸವದಿ ಸಮಾರಂಭ ಉದ್ಘಾಟಿಸುವರು. ಪುರಸಭೆ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಪರಪ್ಪ ಗೌಡರ ಅಧ್ಯಕ್ಷತೆ ವಹಿಸುವರು. ಸಕಲ್ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತನು ಮನ, ಧನದಿಂದ ಸೇವೆಗೈಯಲು ಸಂಘಟಕರು ಕೋರಿದ್ದಾರೆ.

Thursday, October 7, 2010

Terdal New Button added

Terdal 07-10-2010


There is a new button added in this blog called 'Jobs' beside 'Home' button.

So please check and recommend any job related matters.


 
With regards
Manoj Yadwad

Test

Test 1