Saturday, January 5, 2013

101ನೇ ಸಂಚಾರಿ ಶಿವಾನುಭವ ಇಂದು

ತೇರದಾಳ : ಇಲ್ಲಿನ ನಿವೃತ್ತ ಶಿಕ್ಷಕ ಎಸ್.ಎ.ಉಪ್ಪಿನ ಅವರ ನಿವಾಸದಲ್ಲಿ ಶಿವಾನುಭವ ಸಂಘ ಮತ್ತು ಅಕ್ಕನಬಳಗದ ಆಶ್ರಯದಲ್ಲಿ 101ನೇ ಮಾಸಿಕ ಸಂಚಾರಿ ಶಿವಾನುಭವ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.
    ರವಿವಾರ ಜ.6ರಂದು ಮದ್ಯಾನ್ಹ 2-30ಕ್ಕೆ ನಡೆಯುವ ಶಿವಾನುಭವದ ಸಾನಿಧ್ಯವನ್ನು ಚಿಮ್ಮಡ ವಿರಕ್ತಮಠದ ಶ್ರೀಪ್ರಭು ಸ್ವಾಮಿಗಳು ವಹಿಸುವರು. ನಾಗರಾಳ ಆರೂಢ ಪರಮಾನಂದ ಆಶ್ರಮದ ಶ್ರೀಜ್ಞಾನೇಶ್ವರ ಸ್ವಾಮಿಗಳು, ರಾಜಯೋಗಿನಿ ಸುವಣರ್ಾ ಅಕ್ಕ, ಕಜಾಪ ತಾಲೂಕಾ ಘಟಕದ ಕೋಶಾಧ್ಯಕ್ಷ ಮಗಯ್ಯ ಸ್ವಾಮಿಗಳು ತೆಳಗಿನಮನಿ, ಸಮ್ಮುಖ ವಹಿಸುವರು. ಎಸ್.ಎ.ಉಪ್ಪಿನ ಅಧ್ಯಕ್ಷತೆ ವಹಿಸುವರು.
    ಕನರ್ಾಟಕ ಜಾನಪದ ಪರಿಷತ್ತಿನ ತಾಲೂಕಾ ಅಧ್ಯಕ್ಷ, ನೇಕಾರ ಕಲಾ ರತ್ನ-2012 ಪ್ರಶಸ್ತಿ ಪುರಸ್ಕೃತ ಶಿಕ್ಷಕ ಮ.ಕೃ.ಮೇಗಾಡಿ, ಮಹಾತ್ಮಾಪುಲೆ ಸಮತಾ ಸೇನೆ ಅಧ್ಯಕ್ಷ ಮಲ್ಲು ಬಾಳಿಕಾಯಿ, ಅಕ್ಕನಬಳಗದ ಕಮಲಕ್ಕ ವಾಲಿ, ಸುಶೀಲಕ್ಕ ಮಾಸ್ತಿ, ಸರಸ್ವತಿ ಹೂಗಾರ ಹಾಗೂ ಇನ್ನಿತರರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದೆಂದು ಶಿವಾನುಭವ ಸಂಘ ಪ್ರಕಟನೆಯಲ್ಲಿ ತಿಳಿಸಿದೆ.

Test

Test 1