Thursday, December 6, 2012

Agni Duranta

ದ್ವೇಷಕ್ಕೆ ಗುಡಿಸಲಿಗೆ ಬೆಂಕಿ-ದನಕರುಗಳ ಸಾವು, ಲಕ್ಷಾಂತರ ರೂಗಳಷ್ಟು ಹಾನಿ















ತೇರದಾಳ : ಸುನೀತಾ ಮತ್ತು ಪ್ರಕಾಶ ಎಂಬುವವರು ಓಡಿ ಹೋಗಿದ್ದರಿಂದ ಅವರ ಎರೆಡು ಮನೆಯವರ ಮಧ್ಯೆ ದ್ವೇಷದಿಂದಾಗಿ ಪರಪ್ಪ ಯಮನಪ್ಪ ಸಾವಳಗಿ ಎಂಬುವವರ ಗುಡಿಸಲುಗಳು, ದನಕರುಗಳು ಬಲಿಯಾದ ಘಟನೆ ನಡೆದ ಬಗ್ಗೆ ಪೊಲೀಸರಿಂದ ಇಂದು ಮಾಹಿತಿ ದೊರಕಿದೆ. ಈ ಕುರಿತು ಪಿಎಸ್ಐ ಸುಂದರೇಶ ಹೊಳೆಣ್ಣವರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಪರಪ್ಪ ಯಮನಪ್ಪ ಸಾವಳಗಿ ಎಂಬುವವರು ಪೊಲೀಸರಿಗೆ ದೂರು ನೀಡಿದ್ದು ಅದರ ವಿವರ ಇಂತಿದೆ. ದೂರು ನೀಡಿರುವ ಪರಪ್ಪ ನಿನ್ನೆ ಮದ್ಯಾನ್ಹ ಊಟ ಮುಗಿಸಿ ಹೊರಗಡೆ ಬಂದಾಗ ತಮ್ಮ ಮನೆ ಹತ್ತಿರದ ಗುಡಿಸಲಿಗೆ ಬೆಂಕಿ ಹಚ್ಚಿ ಮನಬಂದಂತೆ ಚೀರಾಡಿ, ಕೂಗಾಡಿ, ಕೇ ಕೇ ಹಾಕುತ್ತಿದ್ದ ಬಸಪ್ಪ ಶಂಕರೆಪ್ಪ ಸಾವಳಗಿ, ಪ್ರಕಾಶ ಶಂಕರೆಪ್ಪ ಸಾವಳಗಿ, ಮಲ್ಲಪ್ಪ ಶಂಕರೆಪ್ಪ ಸಾವಳಗಿ ಇವರನ್ನು ಹಿಡಿಯಲು ಹೋದರೆ ಅವರು ಕಬ್ಬಿನ ಪಡದಲ್ಲಿ ಪರಾರಿಯಾಗಿದ್ದಾರೆನ್ನಲಾಗಿದೆ.
  ಪಿರ್ಯಾದಿದಾರರು ಮತ್ತು ಆರೋಪಿತರು ಸಂಬಂಧಿಕರಾಗಿದ್ದು, ಸುನಿತಾ(19), ಪ್ರಕಾಶ (21) ಓಡಿ ಹೋಗಿದ್ದರಿಂದ ಅವರ ಮನೆಯವ ಮಧ್ಯೆ ದ್ವೇಷದಿಂದಾಗಿ ಈ ಘಟನೆ ಸಂಭವಿಸಿದೆಯೆನ್ನಲಾಗಿದೆ.
ಈ ಘಟನೆಯಲ್ಲಿ ಗರ್ಭಧರಿಸಿದ ಜರ್ಸಿ ಆಕಳು, 4ಎಮ್ಮೆ, ಟಗರು, ಮೇಕೆ, ಎಮ್ಮೆ ಕರು, ಆಕಳ ಕರು ಸುಟ್ಟು ಸತ್ತಿವೆ. 4ಗೊಂಜಾಳ ಚೀಲ, 3ಗೋದಿ ಚೀಲ ಕಾಳುಕಡಿ ಸುಟ್ಟಿದ್ದರಿಂದ ಒಟ್ಟು 1ಕ್ಷ 70ಸಾವಿರ ರೂ. (1,70,000 ರೂ.)ಗಳಷ್ಟು ಹಾನಿ ಸಂಭವಿಸಿದೆಯೆಂದು ಪೊಲೀಸರಿಗೆ ದೂರು ನೀಡಲಾಗಿದೆ.

ರಂಗನಗೌಡ ಪಾಟೀಲ ಭೇಟಿ : ಅವಳಿ ಜಿಲ್ಲಾ ಕೆಎಂಎಫ್ ನಿದರ್ೇಶಕ ರಂಗನಗೌಡ ಪಾಟೀಲ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ ಇಂತಹ ಘಟನೆಗಳು ಸಂಭವಿಸಿದಾಗ ಸರಕಾರದಿಂದ ನೆರವು ದೊರೆಯಬೇಕೆಂದರು.
ಜೆಡಿಎಸ್ ನಗರ ಘಟಕದ ಅಧ್ಯಕ್ಷ ನಿಂಗಪ್ಪ ತೇಜನ್ನವರ, ಅಶೋಕ ಸಾವಳಗಿ, ಸಂಜು ಖವಾಸಿ ಈ ಸಂದರ್ಭದಲ್ಲಿದ್ದರು. 
 



Wednesday, December 5, 2012

ಅಕ್ರಮವಾಗಿ ಗರಸು, ಮಣ್ಣು ಸಾಗಾಣಿಕೆ- ನಾಗರಿಕರ ಆರೋಪ










ತೇರದಾಳ : ಇಲ್ಲಿಯ ಅರಣ್ಯಪ್ರದೇಶದ ಗುಡ್ಡದಲ್ಲಿ ಅಧಿಕಾರಿಗಳ ಅಜಾಗರೂಕತೆಯಿಂದಾಗಿ ಅಕ್ರಮವಾಗಿ, ಗರಸು ಸಹಿತ ಮಣ್ಣುನ್ನು ಜೆಸಿಬಿಯಿಂದ ಟ್ಯಾಕ್ಟರ್ ಮತ್ತು ಟಿಪ್ಪರಗಳಲ್ಲಿ ತುಂಬಿಕೊಂಡು ಬೇರೆ ಕಡೆಗೆ ಸಾಗಿಸುತ್ತಿರುವುದು ಕಂಡುಬಂದಿದೆ. ಈ ಅಕ್ರಮ ಸರಬರಾಜು ತಡೆಗಟ್ಟುವವರ್ಯಾರು ಎಂದು ನಾಗರಿಕರು ಪ್ರಶ್ನಿಸಿದ್ದಾರೆ.
ಈ ಕುರಿತು ನಗರದ ಚಿಕ್ಕಪ್ಪ ಹೊಸಮನಿ, ಸಂಜು ಅಥಣಿ, ಕೇದಾರಿ ಪಾಟೀಲ, ತುಳಜಪ್ಪ ಕುಂಚನೂರ, ದುಂಡಪ್ಪ ಭಂಗಿ ಅಧಿಕಾರಿಗಳಿಗೆ ಪತ್ರ ಬರೆದು ಅಕ್ರಮವಾಗಿ ಸಾಗಿಸುತ್ತಿರುವ ಕಲ್ಲು, ಮಣ್ಣು, ಗರಸು ಸಾಗಾಟವನ್ನು ತಡೆಗಟ್ಟಲು ಆಗ್ರಹಿಸಿದ್ದಾರೆ.
ಹಾಡುಹಗಲೇ ತೇರದಾಳ ಗುಡ್ಡದ ಪ್ರದೇಶದಲ್ಲಿ ಅಕ್ರಮವಾಗಿ ಆರು ಜೆಸಿಬಿ, ನಾಲ್ಲವತ್ತು ಟ್ಯಾಕ್ಟರ್, ಇಪ್ಪತ್ತು ಟಿಪ್ಪರ್ಗಳು ಗುರಸು ಸಾಗಿಸುತ್ತಿದ್ದವು.  ಈ ಸಾಗಿಸುತ್ತಿರುವ ಒಂದು ಸ್ಥಳದಲ್ಲಿ ಅರಣ್ಯಾಧಿಕಾರಿ ಕೂಡ ಇದ್ದರೆಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದರಿಂದ ಅಧಿಕಾರಿಗಳು ಇದರಲ್ಲಿ ಶಾಮಿಲಾಗಿರಬಹುದೆಂದು ಶಂಕಿಸಲಾಗಿದೆಂದು ನಾಗರಿಕರು ದೂರಿನಲ್ಲಿ ತಿಳಿಸಿದ್ದಾರೆ. 

Test

Test 1