Sunday, July 24, 2011

Android Handset ಬಳಕೆದಾರರಿಗೆ ವಿಶೇಷ ಸುಚನೆ

ನಿವು ಈಗ ನಿಮ್ಮ Android ಮೊಬೖಲ್್ನಲ್ಲಿ ಕನ್ನಡ ಒದು ಹಾಗೂ ಬರೆಯಬಹುದು. ನಾನು ಈ ಬ್ಲಾಗ್ ಸದ್ಯ. ನನ್ನ Samsung galaxy 5 ನಿಂದ ಟೖಪಮಾ ಡಿದ್ದು. ಹಚ್ಚಿನ ಮಾಹಿತಿಗಾಗಿ ಮಂಬರುವ ಪೊಸ್ಟಗಳನ್ನು ವಿಕ್ಷಿಸಿ.

Wednesday, July 20, 2011

ರೈತರಿಂದ ಉಗ್ರ ಹೋರಾಟದ ಎಚ್ಚರಿಕೆ.

Terdal 20-07-2011
ಈ ಸುದ್ದಿಯ ಪ್ರಾಯೊ ಜಕರು


ತೇರದಾಳ: ಜಮಖಂಡಿ ತಾಲೂಕಿನ ತೇರದಾಳ ಸಮೀಪದ ತಮದಡ್ಡಿ ಗ್ರಾಮವು ಪ್ರತಿವರ್ಷವಾಗುವ ಮುಂಗಾರು ಮಳೆಯಿಂದ ಹಿಪ್ಪರಗಿ ಆಣೆಕಟ್ಟಿನಿಂದಾಗಿ ಮುಳುಗಡೆಯಾಗುತ್ತದೆ. ಹಳಿಂಗಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿರುವ ಈ ಗ್ರಾಮವನ್ನು ಸ್ಥಳಾಂತರಿಸಲು ದಿ: 01-06-2006 ರಂದು ಗ್ರಾ.ಪಂ. ಅಧ್ಯಕ್ಷ & ಉಪಾಧ್ಯಕ್ಷರ ನೇತೃತ್ವದಲ್ಲಿ ಠರಾವು ಪಾಸ್‍ ಮಾಡಲಾಗಿತ್ತು. ಆಣೆಕಟ್ಟಿನ ಹಿನ್ನೀರಿನಿಂದಾಗಿ ಗ್ರಾಮದ ಜನತೆ ಮಲೇರಿಯಾ & ಮತ್ತು ಇನ್ನಿತರ ರೋಗಗಳಿಗೆ ತುತ್ತಾಗುತ್ತಿದ್ದಾರು. ಈ ನಿಟ್ಟಿನಲ್ಲಿ ಗ್ರಾಮವನ್ನು ಸ್ಥಳಾಂತರಿಸಲು ೨೦೦೬ ರಲ್ಲಿ ಸ್ಥಳಿಯ ಶಾಸಕರಾದ ಮಾನ್ಯ ಶ್ರೀ ಸಿದ್ದು. ಕ. ಸವದಿಯವರಿಗೆ ಮನವಿ ನೀಡಲಾಯಿತು. ಈಗ ಸರಕಾರವು ತಮದಡ್ಡಿ ಗ್ರಾಮದ ಪುನರ್ವಸತಿ ಕೇಂದ್ರ ಸ್ಥಾಪಿಸಲು ಸ್ಥಳೀಯ ಬಡರೈತರ ಫಲವತ್ತಾದ ಜಮೀನನ್ನು ಸ್ವಾಧೀನ ಪವಿಸಿಕೊಳ್ಳುವ ಪ್ರಕ್ರಿಯೆ ಪ್ರಾರಂಭಿಸಿದೆ. ಈ ಪ್ರಕ್ರಿಯೆಯಿಂದ ಬಡರೈತರು ಆತಂಕಗೊಂಡಿದ್ದು ಕೂಡಲೇ ಈ ಪ್ರಕ್ರಿಯೆ ನಿಲ್ಲಿಸಿ ಸರಕಾರದ ಜಾಗದಲ್ಲಿ ಪುನರ್ವಸತಿ ಕೇಂದ್ರ ಸ್ಥಾಪಿಸಬೇಕೆಂದು ಆಗ್ರಹಿಸಿದ್ದಾರೆ.

ಈಗ ಸರಕಾರವು ಸ್ವಾಧೀನ ಪಡಿಸಿಕೊಳ್ಳಲು ಹೊರಟ ಜಮೀನು ಕಡುಬಡವರದ್ದಾಗಿದ್ದು, ಸರಕಾರದ ಈ ನಿರ್ಧಾರದಿಂದಾಗಿ ಅವರ ಉಪಜೀವನ ಮತ್ತು ದನಕರುಗಳು ಜೀವಿಸಲು ಸಾಧ್ಯವಾಗುವುದಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಎಲ್ಲ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಸರಕಾರ ತನ್ನ ಈ ಉದ್ಧಟತನ ಮುಂದುವರೆಸಿದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಸ್ಥಳಿಯ ರೈತರು ಎಚ್ಚರಿಕೆ ನೀಡಿದ್ದಾರೆ.



Test

Test 1