Tuesday, August 31, 2010

ಅನ್ನಪೂರ್ಣಾ. ಗು. ಮುಚ್ಚಂಡಿಯವರಿಂದ ಅನ್ನ ಪ್ರಸಾದ ಸಮಿತಿಗೆ 25,000 ರೂ.ಗಳ ದೇಣಿಗೆ

ತೇರದಾಳ: ೩೧-೦೮-೨೦೧೦

ಚಿತ್ರ ವರದಿ: ಮ.ಕೃ. ಮೇಗಾಡಿ, ತೇರದಾಳ. ೯೮೪೪೦೮೮೧೩೩

ತೇರದಾಳದ ಶ್ರೀಪ್ರಭುಲಿಂಗೇಶ್ವರ ಅನ್ನ ಪ್ರಸಾದ ಸಮಿತಿ ಅಧ್ಯಕ್ಷ ’ಸಿದ್ದು ಮಹಾಕಾಳಿ’ಯವರಿಗೆ ’ಅನ್ನಪೂರ್ಣಾ ಗು.ಮುಚ್ಚಂಡಿ’ ೨೫ ಸಾವಿರ ರೂ.ಗಳನ್ನು ದೇಣಿಗೆಯಾಗಿ ನೀಡಿದರು. ಗದಗ ಅಕ್ಕಮಹಾದೇವಿಯವರು ಚಿತ್ರದಲ್ಲಿದ್ದಾರೆ.
     ಇಲ್ಲಿಯ ಶ್ರೀಅಲ್ಲಮಪ್ರಭು ಕಲ್ಯಾಣಮಂಟಪದಲ್ಲಿ ಹಮ್ಮಿಕೊಂಡಿರುವ ಪ್ರಭುಲಿಂಗಲೀಲೆ ಪ್ರವಚನದಲ್ಲಿ ಶ್ರೀಪ್ರಭುಲಿಂಗೇಶ್ವರ ಅನ್ನ ಪ್ರಸಾದ ಸಮಿತಿಗೆ ೨೫ಸಾವಿರ ರೂ.ಗಳ ದೇಣಿಗೆ ನೀಡಿದ ಅನ್ನಪೂರ್ಣ ಗು. ಮುಚ್ಚಂಡಿಯವರನ್ನು ಸತ್ಕರಿಸಿ ಆಶೀರ್ವಚನ ನೀಡುತ್ತ ಯಾವುದೋ ಕೆಲಸಕ್ಕೆ ಅನವಶ್ಯಕ ಖರ್ಚು ಮಾವುವುದಕ್ಕಿಂತ ಉದಾರ ಗುಣ ಬೆಳೆಸಿಕೊಳ್ಳಬೇಕು. ದಾನ ಮಾಡುವ ಭಾವನೆ ಪುಣ್ಯವಂತರಿಗೆ ಮಾತ್ರ ಲಭಿಸುವದು. ಉದಾರ ದಾನಿಗಳು ಸಿಗುವುದೇ ಅಪರೂಪವೆಂದು ಹೇಳಿದರು.
     ಪ್ರಸಾದ ಸಮಿತಿಯ ಸಿದ್ದು ಮಹಾಕಾಳಿ ದೇಣಿಗೆಯನ್ನು ಸ್ವೀಕರಿಸಿ ದಾನಿಗಳಿಗೆ ಅಭಿನಂದಿಸಿದರು. ಲಗಮನ್ನ ಮಿರ್ಜಿ, ಲಕ್ಷ್ಮಣ ಯಡವಣ್ಣವರ, ಶ್ರೀಶೈಲ ಮೇಗಾವಿ, ಸಿದ್ದಪ್ಪ ಗುಡ್ಡಿ, ರ‍್ಯಾವಪ್ಪ ತುಕ್ಕನ್ನವರ, ದತ್ತು ರಜಪುತ, ಕಮಲಕ್ಕ ವಾಲಿ, ಮಲ್ಲಯ್ಯ ಬೃಂಗಿ ಈ ಸಂದರ್ಭದಲ್ಲಿದ್ದರು.
      ಮೌಲಾ ಮೋಮಿನ್ ಪ್ರಾರ್ಥಿಸಿದರು. ಶಿಕ್ಷಕ ಮ.ಕೃ.ಮೇಗಾಡಿ ನಿರೂಪಿಸಿದರು. ಎಮ್.ಸಿ. ಕುಂಚಗನೂರ ವಂದಿಸಿದರು.

ಜಾಡಾರ ಓಣಿಯಲ್ಲಿರುವ ಶ್ರೀ ಅಲ್ಲಮಪ್ರಭು ದೇವಸ್ಥಾನದಲ್ಲಿ ಶಾಸಕರಿಗೆ ಸನ್ಮಾನ

ತೇರದಾಳ: ಶುಕ್ರವಾರ ೨೭-೦೮-೨೦೧೦

ಚಿತ್ರ ವರದಿ: ಮ.ಕೃ. ಮೇಗಾಡಿ, ತೇರದಾಳ. ೯೮೪೪೦೮೮೧೩೩

ತೇರದಾಳ ಕಿಲ್ಲಾಭಾಗ ಜಾಡರ ಓಣಿಯಲ್ಲಿರುವ ಶ್ರೀಅಲ್ಲಮಪ್ರಭು ದೇವಸ್ಥಾನದಲ್ಲಿ ಶುಕ್ರವಾರ ಚಾವಡಿ ಸರ್ಕಲ್, ಕಿಲ್ಲಾಭಾಗ ಜಾಡರ ಓಣಿಯಲ್ಲಿರುವ ಶ್ರೀ ಅಲ್ಲಮಪ್ರಭು ದೇವಸ್ಥಾನ ಹಾಗೂ ನೇಕಾರ ಬಾಂದವರ ಪರವಾಗಿ ಶಾಸಕ ಸಿದ್ದು ಸವದಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೃಷ್ಣಾ ಮೇಗಾಡಿ, ಚನ್ನಪ್ಪ ಚರೂಟಿ, ಉಸ್ಮಾಣ ಥರಥರಿ, ಶ್ರೀಶೈಲ ಮೇಗಾಡಿ, ಪರಪ್ಪ ತೊದಲಬಾಗಿ, ಶಂಕರ ಕಲ್ಲೊಳ್ಳಿ ಚಿತ್ರದಲ್ಲಿದ್ದಾರೆ.
   ಸನ್ಮಾನ ಸ್ವಿಕರಿಸುತ್ತಾ ಈ ದೇವಸ್ಥಾನಕ್ಕೆ ಶಾಸಕರ ನಿಧಿ ಅಲ್ಲದೇ ಸಂಸದರ ನಿಧಿಯಿಂದಲೂ ಹೆಚ್ಚಿನ ಅನುದಾನ ಒದಗಿಸಲು ಪ್ರಯತ್ನಿಸುವ ಭರವಸೆಯನ್ನಿತ್ತರು.


"ಅಭಿವೃದ್ದಿ ಕೆಲಸಗಳಿಗೆ ನಾಗರಿಕರ ಸಹಕಾರ ಅಗತ್ಯ"- ಸವದಿ
     ಪಟ್ಟಣದಲ್ಲಿ ಅಭಿವೃದ್ದಿ ಕಾರ್ಯಗಳಿಗೆ ಹೆಚ್ಚಿನ ಒತ್ತು ನಿಡಲಾಗಿದ್ದು, ಗುಣಮಟ್ಟದ ಕೆಲಸಗಳಿಗೂ ಗಮನ ನಿಡಲಾಗುವುದು, ಅಭಿವೃದ್ದಿ ಕೆಲಸಗಳಿಗೆ ಅಡತಡೆಯಾಗದಂತೆ ನಾಗರಿಕರು ಸಹಕರಿಸಬೇಕು. ಕಳಪೆ ಕಾಮಗಾರಿ ಮಾಡಿದವರ ವಿರುದ್ದ ಕ್ರಮಕೈಗೊಳ್ಳಲೂ ಹಿಂದೇಟು ಹಾಕುವುದಿಲ್ಲವೆಂದು ಶಾಸಕ ಸಿದ್ದು ಸವದಿ ಇಂದಿಲ್ಲಿ ಎಚ್ಚರಿಸಿದರು.

     ಪುರಸಭೆ ನೂತನ ಅದ್ಯಕ್ಷೆ ಶಶಿಕಲಾ ಪರಪ್ಪ ಗೌಡರ ಅಧ್ಯಕ್ಷತೆ ವಹಿಸಿ ಸನ್ಮಾನ ಸ್ವೀಕರಿಸಿ, ಪಟ್ಟಣದ ಜನತೆಯ ಆಶೋತ್ತರಗಳಿಗೆ ಸ್ಪಂದಿಸಿ ಪುರಸಭೆಯಿಂದ ಹೆಚ್ಚಿನ ನೆರವು ಒದಗಿಸಲಾಗುವದೆಂದರು.

   ಪುರಸಭೆ ಉಪಾಧ್ಯಕ್ಷೆ ಶಾಲವ್ವ ವಿಠ್ಠಲ ಮಾಂಗ, ಮುಖ್ಯಾಧಿಕಾರಿ ಗೋಪಾಲ ಕಾಸೆಯವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

    ಪುರಸಭೆ ಸದಸ್ಯರಾದ ರಮೇಶ ಕಿತ್ತೂರ, ಉಸ್ಮಾನ ಥರಥರಿ, ಇಸಾಕ ಮೋಮಿನ್, ಟಿ.ಎ.ಪಿ.ಸಿ.ಎಮ್.ಎಸ್. ಅಧ್ಯಕ್ಷ ಷಣ್ಮುಖ ಗಾಡದಿ, ಪುರಸಭಾ ಮಾಜಿ ಅಧ್ಯಕ್ಷ ನಿಂಗಪ್ಪಣ್ಣ ಮಾಲಗಾಂವಿ, ಸುರೇಶ ರೇಣಕೆ ಇನ್ನಿರರು ಉಪಸ್ಥಿತರಿದ್ದರು.

ಏಳು ತಿಂಗಳಿನಿಂದ ಸಂಬಳಕ್ಕಗಿ ಏಳುಬೀಳು!

ಸಂಬಳವಿಲ್ಲದೇ ಪರಿತಪಿಸುತ್ತಿರುವ ಸ್ವೀಪರ ಇಕ್ಬಾಲ!!

ಚಿತ್ರವರದಿ: ಮ.ಕೃ.ಮೇಗಾಡಿ, ತೇರದಾಳ, ೯೮೪೪೦೮೮೧೩೩


ತೇರದಾಳ,೧-ಕಳೆದ ೨೩ವಷಗಳಿಂದ ಬಸ್ ನಿಲ್ದಾಣದಲ್ಲಿ ಸ್ವೀಪರ್(ಕಸಗೂಡಿಸಿ, ನೀರು ಹೊಡೆಯುವದು) ಅಂತಾ ಕೆಲಸ ನಿರ್ವಹಿಸುತ್ತಿರುವ ವ್ಯಕ್ತಿ, ಅಲ್ಪ, ಸಂಬಳದಲ್ಲೇ ಜೀವನ ನಿರ್ವಹಣೆ ಸಾಧ್ಯವಾಗದೇ ದಿನನಿತ್ಯ ನಿಲ್ದಾಣದೊಳಗೆ ಬಂದು ಹೋಗುವವರಿಗೆ, ಗುರುತಿನವರಿಗೆ ’ನನ್ನ ಜೀವನಕ್ಕಷ್ಟ ಸಹಾಯ ಮಾಡ್ರಿ, ಇಲ್ಲಿ ಕೆಲ್ಸ ಮಾಡ್ತಿನಿ, ಆದ್ರ ಕೊಡೊ ಪಗಾರ ೪೫೦ ರೂ. ಸಾಹೇಬ್ರ ಹ್ಯಾಗಾದ್ರ ಮಾಡಿ ನನ್ನ ಪಗಾರ ಹೆಚ್ಚಿಗಿ ಮಾಡಿಸ್ರಿ....’ ಎಂದು ಗೋಗರೆಯುತ್ತಾನೆ! ಕಳೆದ ಏಳು ತಿಂಗಳಿನಿಂದ ಸಂಬಳ ಬಾರದೇ ತುಂಬ ಕಷ್ಟದಲ್ಲಿ ಪರಿತಪಿಸುತ್ತಿರುವ ಈತನ ಬಗ್ಗೆ ಕನಿಷ್ಟ ಅನುಕಂಪ ತೋರಿಸದ ಸಾರಿಗೆ ಇಲಾಖೆ ಮೇಲಾಧಿಕಾರಿಗಳು! ಈ ಕುರಿತು ಅನೇಕ ಬಾರಿ ನಾಗರಿಕರೇ ಸ್ವತಃ ಪತ್ರ ಬರೆದರೂ ಪ್ರಯೋಜನವಾಗಿಲ್ಲವೆಂದರೆ, ಇಲಾಖೆಯ ಕಾರ್ಯವೈಕರಿ ಬಗ್ಗೆ ವಾಕರಿಕೆ ಬರುತ್ತದೆ.



ನಾಲ್ಕು ಜನ ಹೆಣ್ಣು ಮಕ್ಕಳು, ನಾಲ್ಕು ಗಂಡು ಮಕ್ಕಳ ತುಂಬು ಸಂಸಾರ ಹೊಂದಿರುವ ಇಕ್ಬಾಲ ಹುಸೇನ ಮುರಸಲ್ ಮನಮಿಡಿಯುವ ಕಥೆಗೆ ಸ್ಪಂದಿಸುವವರಾರು?

     ಹುಬ್ಬಳ್ಳಿ ಎಮ್.ಡಿ ಯವರಿಗೆ ಊರಿನ ನಾಗರಿಕರೆಲ್ಲರು ಪತ್ರ ಬರೆದರು ಇಲ್ಲಿನವರೆಗೆ ಯಾವುದೆ ಪ್ರಯೋಜನವಾಗಿರುವುದಿಲ್ಲ.

ಆಗ್ರಹ: ಇದರ ಬಗ್ಗೇ ಕೂಡಲೇ ಗಮನ ಹರಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸ್ಥಳಿಯ ಘಟಕದ ಪ್ರ.ಕಾರ್ಯದರ್ಶಿ ಮೃತ್ಯುಂಜಯ ತೆಳಗಿನಮನಿ, ಮಾಜಿ ಅಧ್ಯಕ್ಷ ಅಪ್ಪಾಸಾಬ ಆಲಗೂರ, ಗಿರಮಲ್ಲಪ್ಪ ಕೊಕಟನೂರ, ಸೈಯದ್ ಕರೋಷಿ, ಶಿವನಿಂಗ ಬಿರಾದಾರ, ಚನ್ನಪ್ಪ ಮಾಳಿ, ಮಹಾತ್ಮಾ ಪುಲೆ ಸಮತಾ ಸೇನಾ ಕೇಂದ್ರದ ಅಧ್ಯಕ್ಷ ಮಲ್ಲು ಬಾಳಿಕಾಯಿ, ಶ್ರೀಅಲ್ಲಮಪ್ರಭು ಕರ್ಮವೀರ ಕಲಾ ಸಾಹಿತ್ಯ ಸಂಸ್ಕೃತಿ ವೇದಿಕೆ, ತೇರದಾಳ ವಲಯ ಕನ್ನಡ ಸಾಹಿತ್ಯ ಪರಿಷತ್ತು, ಶ್ರೀ ಕುವೆಂಪು ಕನ್ನಡ ಯುವಕ ಸಂಘದ ಪದಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುವರೇ ಕಾದು ನೋವ್ಬೇಕು!!

Saturday, August 28, 2010

Raita Sangaha Prathibhatane

         ಭಾವಚಿತ್ರವುಳ್ಳ ಪಡಿತರ ಚೀಟಿ ಪಟ್ಟಣದಲ್ಲೇ ನೀಡಬೇಕು, ಹಾಗೂ ಆಹಾರ ಧಾನ್ಯ, ಸೀಮೆ ಎಣ್ಣೆಯನ್ನು ಸಮರ್ಪಕವಾಗಿ ವಿತರಿಸಬೇಕು, ಅನಿಲ ಹೊಂದಿದ ಪಡಿತರದಾರರಿಗೆ ಕನಿಷ್ಠ ೨ ಲೀಟರ ಸೀಮೆ ಎಣ್ಣೆ ವಿತರಿಸಬೇಕೆಂದು ಆಗ್ರಹಿಸಿ ಸ್ಥಳೀಯ ರೈತ ಸಂಘ ಹಾಗೂ ಹಸಿರು ಸೇನೆ ಘಟಕ ಪಟ್ಟಣದಲ್ಲಿ ಶನಿವಾರ ಮೆರವಣಿಗೆ ನಡೆಸಿ ಪ್ರತಿಭಟಿಸಿದರು.

       ಕಾಂಗ್ರೆಸ ನಾಯಕಿ ಉಮಾಶ್ರೀ ಪ್ರತಿಭಟನೆ ಸ್ಥಳಕ್ಕೆ ಅನಿರೀಕ್ಷಿತವಾಗಿ ಬಂದ್ದಿದ್ದು ಎಲ್ಲರನ್ನು ಅಚ್ಚರಿ ಮೂಡಿಸಿತು. ಉಮಾಶ್ರೀ ಆಗಮನದಿಂದ ಪ್ರತಿಭಟನಾಕಾರರಿಗೆ ಮತ್ತಷ್ಟು ಪುಷ್ಠಿ ಬಂದಿತ್ತು. ಸಾರ್ವಜನಿಕರ  ಸಮಸ್ಯೆ ಆಲಿಸಿದ ಅವ್ರು ಆಹಾರ ನಿರೀಕ್ಷಕ ಖಾತೆದಾರರನ್ನು ತರಾಟೆಗೆ ತೆಗೆದುಕೊಂಡರು.

      ಕೊನೆಗೆ ಉಪತಹಸೀಲ್ದಾರ ಡಿ.ಆಯ್. ಹೆಗ್ಗೊಂಡ ಅವರಿಗೆ ಮನವಿ ಅರ್ಪಿಸಲಾಯಿತು. ಗಿರಿಮಲ್ಲಪ್ಪ ಕೊಕಟನೂರ. ಅಪ್ಪಾಸಾಬ ಆಲಗೂರ. ಯಮನಪ್ಪ ಹುದ್ದಾರ, ಬರಮಪ್ಪ ಸವದಿ. ಪರಸಪ್ಪ ಗಾಡದಿ, ಅಬ್ದುಲ್ ನದಾಪ. ಶ್ರೀಮಂತ ಮದುಮಲಿ. ಸೇರಿದಂತೆ ಹಲವರು ಇದ್ದರು.

Congress Leader Umashri With other Raita Sangha Leaders giving memorandum to Asst. Tahshildar D. I. Heggonda 
Raita Sangha Leader Mrutyunjay addressing to public
People preparing food on road to protest against late araival of Food Inspector

Sunday, August 22, 2010

Monday, August 9, 2010

ಆಗಸ್ಟ ೧೧ ೨೦೧೦ ರಿಂದ ಶ್ರಾವಣ ಮಾಸದ ಕಾರ್ಯಕ್ರಮಗಳು

ತೇರದಾಳದಲ್ಲಿ ಶ್ರಾವಣ ಮಾಸದ ಕಾರ್ಯಕ್ರಮಗಳು

  • ದಿ. ೧೧ ರಿಂದ ಸೇಪ್ಟೆಂಬರ ೯ ರವರೆಗೆ ಪ್ರತಿದಿನ ಸಾಯಂಕಾಲ ೭ ರಿಂದ ೮ ರವರೆಗೆ ಮಾತೋಶ್ರೀ ಅಕ್ಕಮಹಾದೇವಿಯವರಿಂದ ಪ್ರವಚನ
  • ಮುಂದಿನ ತಿಂಗಳು ಸೇಪ್ಟೆಂಬರ ೫ ರಂದು ರವಿವಾರ ಶ್ರೀ ಪ್ರಭುಜ್ಯೋತಿ ಉತ್ಸವವು, ಶ್ರೀ ಪ್ರಭುಸ್ವಾಮಿಗಳು ಮತ್ತು ಮಾತೋಶ್ರೀ ಅಕ್ಕಮಹಾದೇವಿಯವರ ನೇತೃತ್ವದಲ್ಲಿ ನಡೆಯುವುದು.
  • ೧೧ ನೆಯ ವಾರ್ಷಿಕೊತ್ಸವ ಮಹಾದಾಸೋಹ ಅನ್ನಪ್ರಸಾದ ಉದ್ಘಾಟನೆ. ಅಲ್ಲಿಂದ ಮೂರು ದಿನಗಳವರೆಗೆ ಅನ್ನದಾಸೋಹ.
  • ಸೇಪ್ಟೆಂಬರ ೫ ರಂದು ಮಧ್ಯಾನ್ಹ ಎರಡು ಗಂಟೆಗೆ ರಾಜ್ಯಮಟ್ಟದ ಭಜನಾಸಂಗಿತ ಸ್ಪರ್ಧೆ. ವಿಜೇತ ತಂಡಗಳಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಾಗುವುದು.
    ಸಂಪರ್ಕಿಸಬೇಕಾದ ವಿಳಾಸ-ರಾಯಪ್ಪ ಕುಂಬಾರ -೯೮೮೯೮೯೨೪೧೭
  • ದಿ ೧೧ ರಿಂದ ದೇವರಾಜನಗರದಲ್ಲಿರುವ ಶ್ರೀ ಅಡವೇಶ್ವರ ಜ್ಞಾನಯೋಗಾಶ್ರಮದಲ್ಲಿ ಒಂದು ತಿಂಗಳವರೆಗೆ ಆಧ್ಯಾತ್ಮಿಕ ಸಾಧನಾ ಸಪ್ತಾಹ, ದಾಸಬೋದ ಪಠಣ ಮತ್ತು ನಿತ್ಯ ಉಪಾಸನಾ ಕಾರ್ಯಕ್ರಮಗಳು ನಡೆಯುವದು.

Test

Test 1